ಹಾವೇರಿಯಲ್ಲಿ ಇಂದು ಸುರಿದ ಮಳೆ ಚಿಕ್ಕಮಗಳೂರುನಲ್ಲಿ ಎಂದಿನಂತೆ ಸುರಿಯುತ್ತಿದೆ; ಬೆಂಗಳೂರಲ್ಲಿ ಇವತ್ತು ಬೇಡ!

ಹಾವೇರಿಯಲ್ಲಿ ಇಂದು ಸುರಿದ ಮಳೆ ಚಿಕ್ಕಮಗಳೂರುನಲ್ಲಿ ಎಂದಿನಂತೆ ಸುರಿಯುತ್ತಿದೆ; ಬೆಂಗಳೂರಲ್ಲಿ ಇವತ್ತು ಬೇಡ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 18, 2024 | 7:41 PM

ಆದರೆ ಬೆಂಗಳೂರಿನ ಮಾತ್ರ ಅಲ್ಲ ಕನ್ನಡನಾಡಿನ ಅನೇಕ ಜನ ಇವತ್ತು ರಾಜ್ಯದ ರಾಜಧಾನಿಯಲ್ಲಿ ಮಳೆಯಾಗೋದು ಬೇಡ ಅಂತ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಇನ್ನು ಸ್ವಲ್ಪ ಹೊತ್ತಿನಲ್ಲಿ ಅಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನೈ ಸೂಪರ್ ಕಿಂಗ್ಸ್ ನಡುವೆ ಮಾಡು ಇಲ್ಲವೇ ಮಡಿ ಪಂದ್ಯ ಶುರುವಾಗಲಿದೆ. ಪಂದ್ಯ ಗೆದ್ದರೆ ನಮ್ಮ ಬೆಂಗಳೂರು ತಂಡ ಪ್ಲೇ ಆಫ್ ಹಂತವನ್ನು ಪ್ರವೇಶಿಸುವ ಆವಕಾಶವಿರುತ್ತದೆ.

ಹಾವೇರಿ: ರಾಜ್ಯದ ನಾನಾಭಾಗಗಳಲ್ಲಿ ಮಳೆಯಾಗುತ್ತಿದ್ದರೂ ಹಾವೇರಿ ಜಿಲ್ಲೆಯಲ್ಲಿ (Haveri district) ಆಗುತ್ತಿಲ್ಲವಲ್ಲ ಅಂತ ಜನ ಮಾತಾಡಿಕೊಂಡಿದ್ದು ಉಂಟು ಮಾರಾಯ್ರೇ. ಇಗೋ ತಗೊಳ್ಳಿ, ಅಲ್ಲೂ ಇವತ್ತು ಮಳೆಯಾಗುತ್ತಿದೆ. ಟಿವಿ9 ಹಾವೇರಿ ನೀಡಿರುವ ಮಾಹಿತಿ ಪ್ರಕಾರ ಹಾವೇರಿ ನಗರ, ಬ್ಯಾಡಗಿ (Bydagi) ಮತ್ತು ಹಾನಗಲ್ (Hangal) ತಾಲ್ಲೂಕುಗಳಲ್ಲಿ ಶನಿವಾರ ಸಾಯಂಕಾಲ ಮಳೆಯಾಗಿದೆ. ಹಾವೇರಿ ಪಟ್ಟಣದಲ್ಲಿ ಶಾಲೆಗೆ ಹೋಗಿದ್ದ ಮಕ್ಕಳು ಕೊಡೆಗಳನ್ನು ಹಿಡಿದುಕೊಂಡು ಮನೆಗಳಿಗೆ ವಾಪಸ್ಸು ಹೋಗುತ್ತಿರುವುದನ್ನು ನೋಡಬಹುದು. ಆದರೆ ಅಥ್ಲೀಟ್ ಗಳಂತೆ ಕಾಣುತ್ತಿರುವ ಈ ಇಬ್ಬರು ಯುವತಿಯರಿಗೆ ಸುರಿಯುತ್ತಿರುವ ಮಳೆಯ ಪರಿವೆ ಇದ್ದಂತಿಲ್ಲ. ತಮ್ಮ ಪಾಡಿಗೆ ತಾವು ಓಡುತ್ತಿದ್ದಾರೆ! ಇವತ್ತ್ತು ಚಿಕ್ಕಮಗಳೂರಲ್ಲ್ಲೂ ಜೋರು ಮಳೆಯಾಗಿದೆ. ಒಂದು ವಾರದಿಂದ ಅಲ್ಲಿ ಸತತವಾಗಿ ಮಳೆಯಾಗುತ್ತಿದೆ. ಆದರೆ ಬೆಂಗಳೂರಿನ ಮಾತ್ರ ಅಲ್ಲ ಕನ್ನಡನಾಡಿನ ಅನೇಕ ಜನ ಇವತ್ತು ರಾಜ್ಯದ ರಾಜಧಾನಿಯಲ್ಲಿ ಮಳೆಯಾಗೋದು ಬೇಡ ಅಂತ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಇನ್ನು ಸ್ವಲ್ಪ ಹೊತ್ತಿನಲ್ಲಿ ಅಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನೈ ಸೂಪರ್ ಕಿಂಗ್ಸ್ ನಡುವೆ ಮಾಡು ಇಲ್ಲವೇ ಮಡಿ ಪಂದ್ಯ ಶುರುವಾಗಲಿದೆ. ಪಂದ್ಯ ಗೆದ್ದರೆ ನಮ್ಮ ಬೆಂಗಳೂರು ತಂಡ ಪ್ಲೇ ಆಫ್ ಹಂತವನ್ನು ಪ್ರವೇಶಿಸುವ ಆವಕಾಶವಿರುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಲ್ಲಿ ಸತತ ಮಳೆಯಿಂದ ಜನಜೀವನ ಅಸ್ತವ್ಯಸ್ತ, ಅದರೆ ರೈತರಲ್ಲಿ ಸಂತಸ!