AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs CSK: ಈ ಸಲ ಕಪ್ಪು ಲಾಲಿಪಾಪ್ಪು: ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ ಸಿಎಸ್ಕೆ ಫ್ಯಾನ್ಸ್​​​ ಕೇಕೆ

RCB vs CSK: ಈ ಸಲ ಕಪ್ಪು ಲಾಲಿಪಾಪ್ಪು: ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ ಸಿಎಸ್ಕೆ ಫ್ಯಾನ್ಸ್​​​ ಕೇಕೆ

ಗಂಗಾಧರ​ ಬ. ಸಾಬೋಜಿ
|

Updated on:May 18, 2024 | 7:10 PM

Share

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಕ್ರಿಕೆಟ್​ ಕದನವೇ ನಡೆಯಲಿದೆ. ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳ​​​​ ನಡುವೆ ಹೈವೋಲ್ಟೇಜ್​ ಕಾಳಗ ನಡೆಯಲಿದೆ. ಐಪಿಎಲ್ 16ನೇ ಆವೃತ್ತಿಯಲ್ಲಿ, ಪ್ಲೇಆಫ್ ತಲುಪಲು ನಡೆಯಲಿರುವ ಮಹಾಹೋರಾಟ ನೋಡಲು, ಕೋಟ್ಯಂತರ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಕ್ರೀಡಾಂಗಣದ ಹೊರಗಡೆ ‘ಈ ಸಲ ಕಪ್ಪು ಲಾಲಿಪಾಪ್ಪು’ ಎಂದು ಸಿಎಸ್​ಕೆ ಅಭಿಮಾನಿಗಳು​​​ ಕೇಕೆ ಹಾಕಿದ್ದಾರೆ.

ಬೆಂಗಳೂರು, ಮೇ 18: ನಗರದಲ್ಲಿ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಈಗಾಗಲೇ ಎರಡು ತಂಡಗಳ ಸಾಕಷ್ಟು ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಾರೆ. ಸ್ಟೇಡಿಯಂ ಹೊರಗಡೆ ಅಭಿಮಾನಿಗಳ ದಂಡೇ ಮೆರೆದಿದ್ದು, ಎತ್ತ ನೋಡಿದರೂ ಕೆಂಪು ಹಳದಿ ಟೀ ಶರ್ಟ್​ಗಳೇ ಕಾಣುತ್ತವೆ. ಇನ್ನು ಪಂದ್ಯ ಆರಂಭಕ್ಕೂ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ‘ಈ ಸಲ ಕಪ್ಪು ಲಾಲಿಪಾಪ್ಪು’ ಎಂದು ಸಿಎಸ್​ಕೆ ಅಭಿಮಾನಿಗಳು​​​ ಕೇಕೆ ಹಾಕಿದ್ದಾರೆ. ಆ ಮೂಲಕ ಆರ್​ಸಿಬಿ ಅಭಿಮಾನಿಗಳ ಕಾಲೇಳೆದಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: May 18, 2024 07:07 PM
Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More