ಸರ್ಕಾರ ಅತಿಯಾಗಿ ವರ್ತಿಸಿದರೆ ಹಸ್ತಕ್ಕೆ ಆಪರೇಷನ್ ಹೇಗೆ ಮಾಡಬೇಕೆಂದು ನಮಗೆ ಚೆನ್ನಾಗಿ ಗೊತ್ತು: ಸಿಟಿ ರವಿ, ಬಿಜೆಪಿ ನಾಯಕ

|

Updated on: Aug 19, 2023 | 4:46 PM

ಹಿಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗೆದ್ದಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದವು. ಆದರೆ ಕೆಲ ಸಚಿವ ಮತ್ತು ಶಾಸಕರಿಗೆ ಸರ್ಕಾರದಲ್ಲಿ ಉಸಿರುಗಟ್ಟಿದಂಥ ನಿರ್ಮಾಣವಾದ ಕಾರಣ ಬಿಜೆಪಿಗೆ ಬಂದರ ಎಂದು ರವಿ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿಯ ಮಾಜಿ ಶಾಸಕ ಸಿಟಿ ರವಿ (CT Ravi); ಭಾರೀ ಬಹಮತದೊಂದಿಗೆ ಪಕ್ಷೇತರ ಶಾಸಕರ ಬೆಂಬಲ ಕೂಡ ಹೊಂದಿರುವ ಸಿದ್ದರಾಮಯ್ಯ ಸರ್ಕಾರ (Siddaramaiah Government) ಅತಿಯಾಗಿ ಆಡುವುದನ್ನು ಬಿಟ್ಟು ಜನರಿಗೆ ಉತ್ತಮ ಆಡಳಿತ (good governance) ನೀಡುವ ಕಡೆ ಗಮನ ನೀಡಲಿ ಎಂದು ಸಲಹೆ ನೀಡಿದರು. ಹಿಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗೆದ್ದಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದವು. ಆದರೆ ಕೆಲ ಸಚಿವ ಮತ್ತು ಶಾಸಕರಿಗೆ ಸರ್ಕಾರದಲ್ಲಿ ಉಸಿರುಗಟ್ಟಿದಂಥ ನಿರ್ಮಾಣವಾದ ಕಾರಣ ಬಿಜೆಪಿಗೆ ಬಂದರು. ಈ ಸರ್ಕಾರಕ್ಕೆ ಸ್ಪಷ್ಟ ಬಹುಮತ ಇರೋದ್ರಿಂದ ಅಂಥ ಆತಂಕವೇನೂ ಇಲ್ಲ, ಹಾಗಾಗಿ ಜನರಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಆಡಳಿತ ನೀಡಲಿ ಎಂದು ರವಿ ಹೇಳಿದರು. ಅಷ್ಟಕ್ಕೂ ಮೀರಿ ಸರ್ಕಾರವೇನಾದರೂ ವರ್ತಿಸಿದರೆ ಹಸ್ತಕ್ಕೆ ಹೇಗೆ ಆಪರೇಷನ್ ಮಾಡಬೇಕೂಂತ ತಮಗೆ ಗೊತ್ತಿದೆ. ಏನು ಮಾಡ್ತೀವಿ ಅಂತ ಹೇಳಲ್ಲ, ಆದರೆ ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡ್ತೀವಿ ಅಂತ ಸಿಟಿ ರವಿ ಎಚ್ಚರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on