ಗುತ್ತಿಗೆದಾರರ ಆರೋಪ ಸುಳ್ಳು ಅನ್ನೋದಾದರೆ ಪ್ರಮಾಣ ಮಾಡಲಿ: ಡಿಕೆ ಶಿವಕುಮಾರ್ಗೆ ಸವಾಲು ಹಾಕಿದ ಮಾಜಿ ಶಾಸಕ ಸಿಟಿ ರವಿ
ಗುತ್ತಿಗೆದಾರರ ಆರೋಪ ಸುಳ್ಳು ಅನ್ನೋದಾದರೆ ಪ್ರಮಾಣ ಮಾಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ ಸವಾಲು ಹಾಕಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಆರೋಪ ಸುಳ್ಳು ಅನ್ನೋದಾದರೆ ಅಜ್ಜಯ್ಯನ ಮಠಕ್ಕೆ ಹೋಗಿ ಡಿ.ಕೆ.ಶಿವಕುಮಾರ್ ಪ್ರಮಾಣ ಮಾಡಲಿ.
ಚಿಕ್ಕಮಗಳೂರು, ಆಗಸ್ಟ್ 13: ಗುತ್ತಿಗೆದಾರರ ಆರೋಪ ಸುಳ್ಳು ಅನ್ನೋದಾದರೆ ಪ್ರಮಾಣ ಮಾಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ (CT Ravi) ಸವಾಲು ಹಾಕಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಆರೋಪ ಸುಳ್ಳು ಅನ್ನೋದಾದರೆ ಅಜ್ಜಯ್ಯನ ಮಠಕ್ಕೆ ಹೋಗಿ ಡಿ.ಕೆ.ಶಿವಕುಮಾರ್ ಪ್ರಮಾಣ ಮಾಡಲಿ. ನನ್ನ ಜೀವನದಲ್ಲಿ ಯಾವತ್ತೂ ಲಂಚ ಪಡೆದಿಲ್ಲ ಎಂದು ಆಣೆ ಮಾಡಲಿ. ಲಂಚ ತೆಗೆದುಕೊಂಡಿಲ್ಲ ಎಂದು ಹೇಳಿದರೆ ಸಾಕ್ಷಿಯೇ ಬೇಕಾಗಿಲ್ಲ ಎಂದು ಹೇಳಿದ್ದಾರೆ.
ಕಮಿಷನ್ ಬೇಡಿಕೆ ಬಗ್ಗೆ ಗುತ್ತಿಗೆದಾರರ ಬಳಿ ಮಾಹಿತಿ ಪಡೆದಿದ್ದೇನೆ. ಮೊದಲು 7% ಕಮಿಷನ್ ನೀಡುವಂತೆ ಹೇಳಿದ್ದರಂತೆ, ಆಮೇಲೆ 10 ಪರ್ಸೆಂಟ್ಗೆ ಕಮಿಷನ್ ಫಿಕ್ಸ್ ಆಗಿತ್ತಂತೆ. ಈಗ 15% ಕಮಿಷನ್ ನೀಡಿದರೆ ಕ್ಲಿಯರ್ ಮಾಡುತ್ತೇವೆ ಎಂದಿದ್ದಾರಂತೆ.
ಭ್ರಷ್ಟಾಚಾರ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ
ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು ವಸೂಲಿಗೆ ಹೊರಟ್ಟಿದ್ದಾರೆ. ನಾವು ಅಷ್ಟು ಖರ್ಚು ಮಾಡಿದ್ದೇವೆಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಭ್ರಷ್ಟಾಚಾರ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಮಾಜಿ ಶಾಸಕ ಸಿ.ಟಿ.ರವಿ ವಾಗ್ದಾಳಿ ಮಾಡಿದ್ದಾರೆ.
ಭ್ರಷ್ಟಾಚಾರದ ಬೀಜ ಬಿತ್ತಿದ್ದೆ ಕಾಂಗ್ರೆಸ್ ಪಕ್ಷ
ದೇಶ-ರಾಜ್ಯದ ಹಗರಣಗಳನ್ನ ಪಟ್ಟಿ ಮಾಡಿದರೆ ಕಾಂಗ್ರೆಸ್ ಸಚಿವರು, ಆ ಕಾಲದ ಅಧಿಕಾರಿಗಳು 90% ಅಪರಾಧಿ ಸ್ಥಾನದಲ್ಲಿ ಇದ್ದಾರೆ. ಭ್ರಷ್ಟಾಚಾರದ ಬೀಜ ಬಿತ್ತಿದ್ದೆ ಕಾಂಗ್ರೆಸ್ ಪಕ್ಷ. ಭ್ರಷ್ಟಾಚಾರದಿಂದ ಕಾಂಗ್ರೆಸ್ ವಿಮುಕವಾಗಿದೆ ಅನ್ನೋದನ್ನ ಯಾರು ನಂಬಲ್ಲ. ಅವರು ಯಾವುದೇ ಪ್ರಾಮಾಣಿಕತೆಯ ಸೋಗು ಹಾಕಿದರು, ಭ್ರಷ್ಟಾಚಾರದ ವಾಸನೆ ಇರುತ್ತೆ.
ಇದನ್ನೂ ಓದಿ: ನೀವು ಕಮಿಷನ್ ತೆಗೆದುಕೊಂಡಿದ್ದಕ್ಕೆ ತಾನೇ ಮನೆ ಸೇರಿರುವುದು: ಸಿಟಿ ರವಿ ಆರೋಪಕ್ಕೆ ಹೆಚ್ವಿಶ್ವನಾಥ್ ತಿರುಗೇಟು
40%, 15% ಆಗಿದೆ ಅಂದರೆ ಕಡಿಮೆ ಆಯ್ತು ಅಂತ ಒಪ್ಪಿಕೊಂಡಂತೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿಕೆ ಗಮನಿಸಿದ್ದೇನೆ. ಅದಲ್ಲ, ನೀವು ಕೇಳುತ್ತಿರುವ 15% ಹಳೆಯದ್ದಕ್ಕೆ, ಹೊಸದು 50% ದಾಟಬಹುದು ಎಂದು ಹೇಳಿದ್ದಾರೆ.
ಸಿ.ಟಿ.ರವಿ ಹೇಳಿಕೆಗೆ ಸಚಿವ ಪರಮೇಶ್ವರ್ ತಿರುಗೇಟು
‘ಭ್ರಷ್ಟಾಚಾರ, ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ’ ಎಂಬ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿಕೆಗೆ ಬೆಂಗಳೂರು ಗ್ರಾ. ಜಿಲ್ಲೆ ನೆಲಮಂಗಲ ತಾಲೂಕಿನ ಬೇಗೂರು ಗ್ರಾಮದಲ್ಲಿ ಗೃಹ ಸಚಿವ ಡಾ.ಪರಮೇಶ್ವರ್ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ನ ಎರಡನೇ ಮುಖ ಭ್ರಷ್ಟಾಚಾರ ಅನ್ನೋದಾದ್ರೆ ಬಿಜೆಪಿಯವರ ಮುಖ ಯಾವುದು.
ಇದನ್ನೂ ಓದಿ: ನನಗೆ ಅನ್ಯಾಯ ಮಾಡಿದವರಿಗೆ ಬಣಜಿಗ ಸಮುದಾಯ ಉತ್ತರ ಕೊಟ್ಟಿದೆ: ಬಿಜೆಪಿ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ
ಬಿಜೆಪಿಯವರು ಸರ್ಕಾರ ನಡೆಸುವಾಗ ಜನ ಛೀ.. ಥೂ ಅಂದ್ರಲ್ಲ, ಇದಕ್ಕೆ ಬಿಜೆಪಿಯವರು ತಾವು ಏನೆಂದು ವಿಶ್ಲೇಷಣೆ ಮಾಡಿಕೊಳ್ಳಲಿ. ಯಾರೋ ಏನೇನೋ ಹೇಳುತ್ತಾರೆ, ಅದಕ್ಕೆಲ್ಲ ಉತ್ತರಿಸಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.