ಶಿವಕುಮಾರ್ ಮಾತಿನ ಅರ್ಥ ಸಿದ್ದರಾಮಯ್ಯ ಸರ್ಕಾರದಲ್ಲಿ ಒಕ್ಕಲಿಗರಿಗೆ ರಕ್ಷಣೆ ಇಲ್ಲ, ಅಲ್ಲವೇ? ಹೆಚ್ ಡಿ ಕುಮಾರಸ್ವಾಮಿ

|

Updated on: Apr 17, 2024 | 10:06 AM

ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿಗಾಗಿ ತಾನು ವೇದಿಕೆ ಸಿದ್ಧ ಮಾಡಿದ್ದರಿಂದ 20-25 ಸ್ಥಾನ ಗೆಲ್ಲುತ್ತೇವೆಂದು ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಆತಂಕ ಶುರುವಾಗಿದೆ, ಅದಕ್ಕೋಸ್ಕರ ಅವರು ತನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಮಂಡ್ಯ: ಮಂಡ್ಯದ ಮತದಾರರ ಮುಂದೆ ಡಿಕೆ ಶಿವಕುಮಾರ್ (DK Shivakumar) ಥೈಲಿ ಕೆಲಸ ಮಾಡಲ್ಲ, ಹಣದ ಮದದಿಂದ ಅವರು ತನ್ನನ್ನು ಸೋಲಿಸಬಹುದು ಅಂದುಕೊಂಡಿದ್ದಾರೆ, ತನ್ನ ಸೋಲು ಗೆಲುವು ಮತದಾರರ ಕೈಯಲ್ಲಿದೆ, ಶಿವಕುಮಾರ್ ಅದನ್ನು ನಿರ್ಧರಿಸಲಾಗಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಶಿವಕುಮಾರ್ ತಾನು ಒಕ್ಕಲಿಗರ (Vokkaliga) ರಕ್ಷಣೆಗೆ ನಿಂತಿದ್ದೇನೆ, ರಾಜ್ಯದಲ್ಲಿ ತನಗೆ ನಾಯಕತ್ವವಹಿಸಿಕೊಡಲು ದೆಹಲಿ ನಾಯಕರಲ್ಲಿ ಸಹಮತವಿದೆ, ಒಕ್ಕಲಿಗರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುತ್ತೇನೆ ಎಂದು ಹೇಳುತ್ತಾರೆ. ಅಂದರೆ ಅವರ ಮಾತಿನ ಅರ್ಥವೇನು? ಸಿದ್ದರಾಮಯ್ಯ ಸರ್ಕಾರದಿಂದ ಒಕ್ಕಲಿಗರಿಗೆ ಅನ್ಯಾಯವಾಗುತ್ತಿದೆ ಅಂತ ಅವರೇ ಒಪ್ಪಿಕೊಂಡಾಯಿತು. ಅವರ ಸರ್ಕಾರ ಅಧಿಕಾರದಲ್ಲಿರುವಾಗಲೇ ಒಕ್ಕಲಿಗರ ಸುರಕ್ಷತೆ ಬಗ್ಗೆ ಅವರು ಮಾತಾಡುತ್ತಾರೆ ಅಂದರೆ, ಅವರಿಂದ ಹೇಗೆ ರಕ್ಷಣೆಯಾದೀತು ಅನ್ನೋದನ್ನು ಒಕ್ಕಲಿಗರು ಯೋಚಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು. ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿಗಾಗಿ ತಾನು ವೇದಿಕೆ ಸಿದ್ಧ ಮಾಡಿದ್ದರಿಂದ 20-25 ಸ್ಥಾನ ಗೆಲ್ಲುತ್ತೇವೆಂದು ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಆತಂಕ ಶುರುವಾಗಿದೆ, ಅದಕ್ಕೋಸ್ಕರ ಅವರು ತನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಡಿಕೆಶಿ ಮಹಿಳೆಯ ಅಪಹರಿಸಿ ಬೆದರಿಸಿ ಜಮೀನು ಬರೆಸಿಕೊಂಡಿದ್ದಕ್ಕೆ ದಾಖಲೆ ಇದೆ: ಮತ್ತೆ ಗುಡುಗಿದ ಹೆಚ್​ಡಿ ಕುಮಾರಸ್ವಾಮಿ

Follow us on