ನಿಮಗೆ ಪದೆ ಪದೇ ಬೆರಳುಗಳ ನೆಟಿಕೆ ತೆಗೆಯುವ ಅಭ್ಯಾಸ ಇದ್ದರೆ ಈ ವಿಡಿಯೋ ನೋಡಿ

|

Updated on: Apr 03, 2024 | 6:59 AM

ಹೆಚ್ಚೊತ್ತು ಕೆಲಸ ಮಾಡಿದಾಗ ಕೈ ಬೆರಳ ನೆಟಿಕೆ ಮುರಿಯುವುದು ಸಹಜ, ಎಲ್ಲ ಭಾರವನ್ನು ಒಂದೇ ಸಲ ತೆಗೆದು ಹಾಕಿದಷ್ಟು ಈ ಕಾರ್ಯ ನೆಮ್ಮದಿ ಕೊಡುತ್ತದೆ. ನಿಮಗೆ ಪದೆ ಪದೇ ಬೆರಳುಗಳ ನೆಟಿಗೆ ತೆಗೆಯುವ ಅಭ್ಯಾಸ ನಿಮಗಿದ್ದರೆ ಈ ವಿಡಿಯೋ ಮಿಸ್​ ಮಾಡದೆ ನೋಡಿ..

ಸಾಮಾನ್ಯವಾಗಿ, ಪ್ರತಿಯೊಬ್ಬರೂ ತಮ್ಮ ಬೆರಳಿನ ನೆಟಿಕೆ ತೆಗೆಯುತ್ತಿರುತ್ತಾರೆ. ಅನೇಕರು ಇದನ್ನು ಆನಂದಿಸುತ್ತಾರೆ. ಈ ಅಭ್ಯಾಸ ನರಗಳ ಶಕ್ತಿಯನ್ನು ಎದುರಿಸಲು ಒಂದು ಮಾರ್ಗವಾಗಬಹುದು. ಕೆಲವರು ಇದನ್ನು ಉದ್ವೇಗವನ್ನು ಬಿಡುಗಡೆ ಮಾಡುವ ಮಾರ್ಗವೆಂದು ವಿವರಿಸುತ್ತಾರೆ. ಇನ್ನೂ ಕೆಲವರಿಗೆ ಬೆರಳುಗಳ ನೆಟಿಕೆ ತೆಗೆಯುವುದು ಕಿರಿಕಿರಿಯ ವಿಷಯವಾಗಿದೆ. ಬೆರಳುಗಳ ನೆಟಿಕೆ ತೆಗೆಯಲು ಯಾವುದೇ ವೈಜ್ಞಾನಿಕ ಕಾರಣವಿಲ್ಲ. ಅನೇಕರಿಗೆ ಕುತ್ತಿಗೆ ಅಥವಾ ಬೆರಳುಗಳ ನೆಟಿಕೆ ತೆಗೆಯುವ ಅಭ್ಯಾಸವಿದೆ. ಜನರು ತಮ್ಮ ಬೆರಳುಗಳ ನೆಟಿಕೆ ತೆಗೆಯುವುದರಿಂದ ಅವರಿಗೆ ಆರಾಮದಾಯಕವಾಗುತ್ತದೆ. ಹಾಗಾಗಿ ಅವರು ಪ್ರತಿದಿನ ನೆಟಿಕೆ ತೆಗೆಯುತ್ತಾ ಇರುತ್ತಾರೆ. ಹೆಚ್ಚೊತ್ತು ಕೆಲಸ ಮಾಡಿದಾಗ ಕೈ ಬೆರಳ ನಟಿಗೆ ಮುರಿಯುವುದು ಸಹಜ, ಎಲ್ಲ ಭಾರವನ್ನು ಒಂದೇ ಸಲ ತೆಗೆದು ಹಾಕಿದಷ್ಟು ಈ ಕಾರ್ಯ ನೆಮ್ಮದಿ ಕೊಡುತ್ತದೆ. ಕೈ ಬೆರಳುಗಳ ಸಂಧಿಯಲ್ಲಿ ‘ಪಾಕೆಟ್ ಆಫ್ ಗ್ಯಾಸ್’ ಜಾಗದಲ್ಲಿ ಗಾಳಿ ತುಂಬಿರುತ್ತದೆ. ನಟಿಗೆ ಮುರಿದಾಕ್ಷಣ ಲಟ ಲಟ ಎಂಬ ಸದ್ದು ಹೊರಡಿಸುತ್ತದೆ ಇದೆ. ನಿಮಗೆ ಪದೆ ಪದೇ ಬೆರಳುಗಳ ನೆಟಿಕೆ ತೆಗೆಯುವ ಅಭ್ಯಾಸ ನಿಮಗಿದ್ದರೆ ಈ ವಿಡಿಯೋ ಮಿಸ್​ ಮಾಡದೆ ನೋಡಿ..

Published on: Apr 03, 2024 06:58 AM