ಚಿತ್ರರಂಗದಲ್ಲಿನ ದೊಡ್ಡ ಸಮಸ್ಯೆ ಏನು ಗೊತ್ತಾ? ವಿವರಿಸಿದ ನಟ ರಮೇಶ್ ಅರವಿಂದ್
‘ಚಿತ್ರರಂಗದಲ್ಲಿ ವೃತ್ತಿಪರತೆ ಬೇಕು. ಅರ್ಧ ಗಂಟೆ ಎನ್ನುವುದು ಕೂಡ ತುಂಬಾ ಮುಖ್ಯ. ಇದು ಬದಲಾದ ಸಮಯ. ಪ್ರೇಕ್ಷಕರಿಗೆ ತಮಗೆ ಬೇಕಾದ ಸಮಯದಲ್ಲಿ ಒಟಿಟಿಯಲ್ಲಿ ಕಂಟೆಂಟ್ ಸಿಗುತ್ತಿದೆ. ಹಾಗಾಗಿ ಅವರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಆದ್ದರಿಂದ ನಾವು ಅವರ ಸಮಯಕ್ಕೆ ಗೌರವ ನೀಡಬೇಕು. ಆಗ ನಮಗೆ ಪವರ್ ಸಿಗುತ್ತದೆ’ ಎಂದು ನಟ, ನಿರ್ದೇಶಕ ರಮೇಶ್ ಅರವಿಂದ್ ಹೇಳಿದ್ದಾರೆ.
ನಟ ರಮೇಶ್ ಅರವಿಂದ್ (Ramesh Aravind) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ (Kannada Film Industry) ಆ್ಯಕ್ಟೀವ್ ಆಗಿದ್ದಾರೆ. ಅವರ ಅನುಭವ ಅಪಾರ. ಪತ್ರಕರ್ತರ ಜೊತೆ ಅವರಿಗೆ ಬಹಳ ಕಾಲದಿಂದ ಒಡನಾಟ ಇದೆ. ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಆಯೋಜಿಸಿದ್ದ ‘ಸಿನಿಮಾ-ಮಾಧ್ಯಮ ಸ್ಥಿತಿಗತಿ’ ಸಂವಾದ ಹಾಗೂ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ರಮೇಶ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆಗ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡರು. ‘ಇಂದು ಚಿತ್ರರಂಗದಲ್ಲಿನ ದೊಡ್ಡ ಸಮಸ್ಯೆ ಏನೆಂದರೆ ಪ್ರೊಫೆಷನಲಿಸಂ ಇಲ್ಲ. ಎಷ್ಟು ಗಂಟೆಗೆ ಬರಬೇಕು ಅಂತ ಕೇಳಿದರೆ, 10-10.30ಕ್ಕೆ ಬನ್ನಿ ಅಂತ ಪ್ರೊಡಕ್ಷನ್ ಮ್ಯಾನೇಜರ್ ಹೇಳುತ್ತಾನೆ. 10 ಎನ್ನಬೇಕು ಅಥವಾ 10.30 ಎನ್ನಬೇಕು. ಅವೆರಡೂ ಬೇರೆ ಬೇರೆ ಸಮಯ. 10-10.30 ಎಂದರೆ ಏನು ಅರ್ಥ? ಅರ್ಧ ಗಂಟೆ ಎನ್ನುವುದು ಬಹಳ ಮುಖ್ಯ. ಈಗ ಬದಲಾದ ಸಮಯ. ಒಟಿಟಿಯಲ್ಲಿ (OTT) ಪ್ರೇಕ್ಷಕರಿಗೆ ತಮಗೆ ಬೇಕಾದ ಸಮಯದಲ್ಲಿ ಕಂಟೆಂಟ್ ಸಿಗುತ್ತಿದೆ. ಹಾಗಾಗಿ ಅವರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಹಾಗಾಗಿ ನಾವು ಆ ಸಮಯಕ್ಕೆ ಗೌರವ ನೀಡಬೇಕು. ಆಗ ನಮಗೆ ಪವರ್ ಸಿಗುತ್ತದೆ’ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.