ಬಿಎಂಡಬ್ಲ್ಯೂ ಕಾರು ಖರೀದಿಸಿ ಸಂಭ್ರಮಿಸಿದ ತರುಣ್ ಸುಧೀರ್

ಬಿಎಂಡಬ್ಲ್ಯೂ ಕಾರು ಖರೀದಿಸಿ ಸಂಭ್ರಮಿಸಿದ ತರುಣ್ ಸುಧೀರ್

ರಾಜೇಶ್ ದುಗ್ಗುಮನೆ
|

Updated on: Apr 03, 2024 | 8:02 AM

ನಿರ್ದೇಶಕ ತರುಣ್ ಸುಧೀರ್ ಅವರು ‘ಕಾಟೇರ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ತರುಣ್ ಸುಧೀರ್ ಅವರು ಈ ಗೆಲುವಿನ ಖುಷಿಯಲ್ಲಿ ಬಿಎಂಡಬ್ಲ್ಯೂ ಕಾರು ಖರೀದಿ ಮಾಡಿದ್ದಾರೆ.

ನಿರ್ದೇಶಕ ತರುಣ್ ಸುಧೀರ್ (Tharun Sudhir) ಅವರು ‘ಕಾಟೇರ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ತರುಣ್ ಸುಧೀರ್ ಅವರು ಈ ಗೆಲುವಿನ ಖುಷಿಯಲ್ಲಿ ಬಿಎಂಡಬ್ಲ್ಯೂ ಎಕ್ಸ್​ 1 ಕಾರು ಖರೀದಿ ಮಾಡಿದ್ದಾರೆ. ಈ ಸಂದರ್ಭದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ತರುಣ್ ಸುಧೀರ್ ಅವರು ಮೂರು ಗೆಲುವು ಕಂಡಿದ್ದಾರೆ. ‘ಚೌಕ’, ‘ರಾಬರ್ಟ್’, ‘ಕಾಟೇರ’ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ನಟನಾಗಿಯೂ ಅವರು ಗಮನ ಸೆಳೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ