ಒಂದೇ ಒಂದು ಅರ್ಧಶತಕ ಬಾರಿಸದೇ ನೈಟ್ ರೈಡರ್ಸ್ಗೆ ಸೋಲುಣಿಸಿದ ವೈಪರ್ಸ್
Desert Vipers vs Abu Dhabi Knight Riders: 172 ರನ್ಗಳನ್ನು ಚೇಸ್ ಮಾಡಿದ ಡೆಸರ್ಟ್ ವೈಪರ್ಸ್ ಪರ ಶಿಮ್ರಾನ್ ಹೆಟ್ಮೆಯರ್ 25 ಎಸೆತಗಳಲ್ಲಿ 48 ರನ್ ಬಾರಿಸಿದ್ದೇ ಗರಿಷ್ಠ ಸ್ಕೋರ್. ಮತ್ತೊಂದೆಡೆ ಡಾನ್ ಲಾರೆನ್ಸ್ 35 ರನ್ಗಳ ಕೊಡುಗೆ ನೀಡಿದರೆ, ಖುಝೈಮ ತನ್ವೀರ್ ಅಜೇಯ 31 ರನ್ ಬಾರಿಸಿದರು. ಈ ಮೂಲಕ ಡೆಸರ್ಟ್ ವೈಪರ್ಸ್ ತಂಡವು 19.3 ಓವರ್ಗಳಲ್ಲಿ 175 ರನ್ ಬಾರಿಸಿ 2 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿದೆ.
ಶಾರ್ಜಾದಲ್ಲಿ ನಡೆದ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯ 4ನೇ ಪಂದ್ಯದಲ್ಲಿ ಡೆಸರ್ಟ್ ವೈಪರ್ಸ್ ತಂಡ ರೋಚಕ ಜಯ ಸಾಧಿಸಿದೆ. ಅದು ಕೂಡ ಬಲಿಷ್ಠ ಅಬುಧಾಬಿ ನೈಟ್ ರೈಡರ್ಸ್ ತಂಡಕ್ಕೆ ಸೋಲುಣಿಸುವ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಬುಧಾಬಿ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.
ಈ ಬೃಹತ್ ಗುರಿ ಬೆನ್ನತ್ತಿದ ಡೆಸರ್ಟ್ ವೈಪರ್ಸ್ ಪರ ಯಾವುದೇ ಬ್ಯಾಟರ್ ಅರ್ಧಶತಕ ಬಾರಿಸಿರಲಿಲ್ಲ. ಬದಲಾಗಿ ಎಲ್ಲಾ ಬ್ಯಾಟರ್ಗಳು ಸಣ್ಣ ಪುಟ್ಟ ರನ್ಗಳ ಕೊಡುಗೆ ನೀಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದು ವಿಶೇಷ.
172 ರನ್ಗಳನ್ನು ಚೇಸ್ ಮಾಡಿದ ಡೆಸರ್ಟ್ ವೈಪರ್ಸ್ ಪರ ಶಿಮ್ರಾನ್ ಹೆಟ್ಮೆಯರ್ 25 ಎಸೆತಗಳಲ್ಲಿ 48 ರನ್ ಬಾರಿಸಿದ್ದೇ ಗರಿಷ್ಠ ಸ್ಕೋರ್. ಮತ್ತೊಂದೆಡೆ ಡಾನ್ ಲಾರೆನ್ಸ್ 35 ರನ್ಗಳ ಕೊಡುಗೆ ನೀಡಿದರೆ, ಖುಝೈಮ ತನ್ವೀರ್ ಅಜೇಯ 31 ರನ್ ಬಾರಿಸಿದರು. ಈ ಮೂಲಕ ಡೆಸರ್ಟ್ ವೈಪರ್ಸ್ ತಂಡವು 19.3 ಓವರ್ಗಳಲ್ಲಿ 175 ರನ್ ಬಾರಿಸಿ 2 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿದೆ.
ಡೆಸರ್ಟ್ ವೈಪರ್ಸ್ ಪ್ಲೇಯಿಂಗ್ 11: ಫಖರ್ ಝಮಾನ್ , ಆಂಡ್ರೀಸ್ ಗೌಸ್ (ವಿಕೆಟ್ ಕೀಪರ್) , ಸ್ಯಾಮ್ ಕರನ್ (ನಾಯಕ) ,
ಡಾನ್ ಲಾರೆನ್ಸ್ , ಶಿಮ್ರಾನ್ ಹೆಟ್ಮಿಯರ್ , ಹಸನ್ ನವಾಝ್ , ಖುಝೈಮ ತನ್ವೀರ್ , ಕೈಸ್ ಅಹ್ಮದ್ , ನೂರ್ ಅಹ್ಮದ್ , ನಸೀಮ್ ಶಾ , ಮತಿಯುಲ್ಲಾ ಖಾನ್ , ಮ್ಯಾಕ್ಸ್ ಹೋಲ್ಡನ್.
ಅಬುಧಾಬಿ ನೈಟ್ ರೈಡರ್ಸ್ ಪ್ಲೇಯಿಂಗ್ 11: ಫಿಲ್ ಸಾಲ್ಟ್ , ಅಲೆಕ್ಸ್ ಹೇಲ್ಸ್ , ಅಲಿಶಾನ್ ಶರಫು ,ಲಿಯಾಮ್ ಲಿವಿಂಗ್ಸ್ಟೋನ್, ಶೆರ್ಫೇನ್ ರುದರ್ಫೋರ್ಡ್ , ಆ್ಯಂಡ್ರೆ ರಸೆಲ್ , ಉನ್ಮುಕ್ತ್ ಚಂದ್ (ವಿಕೆಟ್ ಕೀಪರ್), ಸುನಿಲ್ ನರೈನ್ (ನಾಯಕ) , ಜಾರ್ಜ್ ಗಾರ್ಟನ್ , ಅಜಯ್ ಕುಮಾರ್ , ಓಲಿ ಸ್ಟೋನ್ , ಪಿಯೂಷ್ ಚಾವ್ಲಾ.

