CM in Delhi; ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿರುವುದರಿಂದ ಅನ್ನಭಾಗ್ಯ ಯೋಜನೆ ವಿಳಂಬವಾಗಬಹುದು: ಸಿದ್ದರಾಮಯ್ಯ
ನಿಗಮಕ್ಕೆ ಅಕ್ಕಿ ಸರಬರಾಜು ಮಾಡುವ ಅಧಿಕಾರ ಇಲ್ಲ ಅಂತಾದರೆ, ಕೇಂದ್ರ ಸರ್ಕಾರದ ಅನುಮತಿ ಪಡೆದು ತಿಳಿಸುತ್ತೇವೆ ಅಂತ ಪತ್ರ ಬರೆಯಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಕ್ಕಿ ಸಮಸ್ಯೆ ಬಗೆಹರಿಸಿಕೊಳ್ಳಲು ದೆಹಲಿಗೆ ಆಗಮಿಸಿದ್ದಾರೆ. ರಾಷ್ಟ್ರಪತಿಯವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ, ಎನ್ ಎಎಫ್ ಇಡಿ, ಎನ್ ಸಿಸಿಐ ಮತ್ತು ಕೇಂದ್ರೀಯ ಭಂಡಾರದಿಂದ ಕ್ವಾಲಿಟಿ, ಕ್ವಾಂಟಿಟಿ ಮತ್ತು ದರದ ಬಗ್ಗೆ ಕೊಟೇಶನ್ (quotation) ಕೇಳಿದ್ದೇವೆ, ಎಲ್ಲ ನಾಳೆ ಇತ್ಯರ್ಥವಾಗಲಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿರುವುದರಿಂದ ಯೋಜನೆ ಜಾರಿಗೊಳ್ಳೋದು ವಿಳಂಬವಾಗಬಹುದು ಎಂದು ಸಿದ್ದರಾಮಯ್ಯ ಹೇಳಿದರು. ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ಎಫ್ ಸಿ ಐ (FCI), ಅಕ್ಕಿ ಪೂರೈಸುವುದಾಗಿ ಹೇಳಿ ಹಿಂತೆಗೆದಿದ್ದು ವಿಷಾದಕರ ಎಂದರು. ನಿಗಮಕ್ಕೆ ಅಕ್ಕಿ ಸರಬರಾಜು ಮಾಡುವ ಅಧಿಕಾರ ಇಲ್ಲ ಅಂತಾದರೆ, ಕೇಂದ್ರ ಸರ್ಕಾರದ ಅನುಮತಿ ಪಡೆದು ತಿಳಿಸುತ್ತೇವೆ ಅಂತ ಪತ್ರ ಬರೆಯಬೇಕಿತ್ತು, ಅದರೆ ಅವರು ಮೊದಲು ಸರಬರಾಜು ಮಾಡುತ್ತೇವೆ ಅಂತ ಹೇಳಿ ನಂತರ ಕೇಂದ್ರ ಸರ್ಕಾರದ ಒತ್ತಡಕ್ಕೆ ಸಿಕ್ಕು ಇಲ್ಲ ಎಂದಿದ್ದಾರೆ ಅಂತ ಸಿದ್ದರಾಮಯ್ಯ ಹೇಳಿದರು. ಇದು ರಾಜಕಾರಣವಲ್ಲದೆ ಮತ್ತೇನು ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ