ವಿಡಿಯೋ ನೋಡಿ; ಶ್ ಸ್ವಲ್ಪ ಸುಮ್ನಿರಿ, ರಸ್ತೆ ದಾಟಿಬಿಡ್ತೇವೆ ಎಂದವೇ ಈ ಕಾಡುಕೋಣಗಳು!
ಚಲಿಸುತ್ತಿರುವ ಬೈಕ್ ಅನ್ನೇ ನಿಲ್ಲುವಂತೆ ಮಾಡಿದ ಕಾಡುಕೋಣಗಳ ವಿಡಿಯೋ ಇಲ್ಲಿದೆ. ಹಿಂಡುಹಿಂಡಾಗಿ ಅತಿ ವೇಗದಲ್ಲಿ ಓಡೋಡಿ ರಸ್ತೆ ದಾಟುತ್ತಿರುವ ಈ ಕಾಡುಕೋಣಗಳು ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅಗ್ಗೇರಿ ಬಳಿ.
ಮಾನವ ಹಾಗೂ ಪ್ರಾಣಿಗಳ ನಡುವಣ ಸಂಘರ್ಷದ ಬಗ್ಗೆ ಇತ್ತೀಚೆಗೆ ಹೆಚ್ಚಾಗಿ ವರದಿಯಾಗುತ್ತಿವೆ. ಆನೆಗಳ ಹಾವಳಿ, ಕಾಡುಕೋಣಗಳ ಹಾವಳಿ, ಕರಡಿ ದಾಳಿ… ಹೀಗೆ ಅನೇಕ ಸುದ್ದಿಗಳನ್ನು ದಿನಬೆಳಗಾದರೆ ದಿನಪತ್ರಿಕೆಗಳಲ್ಲಿ ಓದುತ್ತೇವೆ, ಟಿವಿಗಳಲ್ಲಿ ನೋಡುತ್ತೇವೆ. ಆದರೆ, ಚಲಿಸುತ್ತಿರುವ ಬೈಕ್ ಅನ್ನೇ ನಿಲ್ಲುವಂತೆ ಮಾಡಿದ ಕಾಡುಕೋಣಗಳ ವಿಡಿಯೋ ಇಲ್ಲಿದೆ. ಹಿಂಡುಹಿಂಡಾಗಿ ಅತಿ ವೇಗದಲ್ಲಿ ಓಡೋಡಿ ರಸ್ತೆ ದಾಟುತ್ತಿರುವ ಈ ಕಾಡುಕೋಣಗಳು ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅಗ್ಗೇರಿ ಬಳಿ. ಕಾಡುಕೋಣ ಓಡುವುದನ್ನು ನೋಡಿ ತಬ್ಬಿಬ್ಬಾಗಿ ರಸ್ತೆಯಲ್ಲೆ ನಿಂತ ಜನ ಅಪರೂಪದ ದೃಶ್ಯವನ್ನು ಸೆರೆಹಿಡಿದ್ದಾರೆ.
ಈ ಮಧ್ಯೆ, ಅರಣ್ಯದಲ್ಲಿ ನಡೆದುಕೊಂಡು ಹೋಗ್ತಿದ್ದ ವೃದ್ಧರೊಬ್ಬರ ಮೇಲೆ ಕರಡಿ ದಾಳಿ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ತಿಂಬೋಲಿಯಲಿ ನಡೆದಿದೆ. ಮಹಾರಾಷ್ಟ್ರ ಮೂಲದ ವೃದ್ಧ ವಿಠ್ಠು ಶೆಳಕೆ (70)ಗೆ ಗಂಭೀರ ಗಾಯವಾಗಿದ್ದು, 2 ಕಿ.ಮೀ ನಡೆದುಕೊಂಡು ಬಂದು ರಾಮನಗರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ತಿಂಬೋಲಿಯ ಸಂಬಂಧಿಕರ ಮನೆಗೆ ಹೊರಟಿದ್ದಾಗ ಇವರ ಮೇಲೆ ಕರಡಿ ದಾಳಿ ಮಾಡಿದೆ. ಜೋಯಿಡಾ ತಾಲೂಕಿನ ರಾಮನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ