ಹುಬ್ಬಳ್ಳಿಯಲ್ಲಿ 14-ವರ್ಷದ ಬಾಲಕನಿಗೆ ಅವನಷ್ಟೇ ವಯಸ್ಸಿನ ಬಾಲಕನಿಂದ ಚಾಕು ಇರಿತ, ಸಾವು

Updated on: May 13, 2025 | 4:50 PM

ಇದು ಸಿನಿಮಾಗಳ ಪ್ರಭಾವವೋ, ಸೋಶಿಯಲ್ ಮಿಡಿಯಾ, ಶಾರ್ಟ್ಸ್ ಗಳ ಪ್ರಭಾವವೋ ಅಥವಾ ಟಿವಿಗಳಲ್ಲಿ ಬಿತ್ತರಹೊಳ್ಳುವ ಹಸಿಬಿಸಿ ಕ್ರೈಮ್ ಕತೆಗಳ ಪರಿಣಾಮವೋ ಗೊತ್ತಾಗುತ್ತಿಲ್ಲ. ನೆರೆಮನೆಯವರು ಫೋನ್ ಮಾಡಿದಾಗ ಸೋಮಶೇಖರ್ ಮಗನ ಕೊಲೆ ನಡೆದಿರುವುದು ಗೊತ್ತಾಗಿದೆ. ಚಾಕುನಿಂದ ಇರಿದು ಕೊಂದವನೂ ಅಪ್ರಾಪ್ತನಾಗಿರುವುದರಿಂದ ನ್ಯಾಯಾಲಯ ಯಾವ ಶಿಕ್ಷೆ ವಿಧಿಸಲಿದೆಯೋ? ಬಾಲಾಪರಾಧಿಗಳ ಸಭಾಂಗಣಕ್ಕೆ ಅವನನ್ನು ಕಳಿಸಬಹುದು.

ಹುಬ್ಬಳ್ಳಿ, ಮೇ 13: ಮಾಧ್ಯಮಗಳ ಜೊತೆ ಮಾತಾಡುತ್ತಿರುವ ಹುಬ್ಬಳ್ಳಿಯ ಸೋಮಶೇಖರ್ ರನ್ನು (Somashekhar of Hubballi) ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಸೋಮಶೇಖರ್ ಹೇಳುವ ಹಾಗೆ ಅವರ 14 ವರ್ಷದ ಮಗನ ಕೊಲೆಯಾಗಿದೆ, ಅದನ್ನು ಅವರು ನಿರ್ಭಾವುಕತೆಯಿಂದ ಹೇಳುತ್ತಾರೆ. 9 ನೇ ತರಗತಿ ಪಾಸಾಗಿ 10 ನೇ ತರಗತಿಗೆ ಹೋಗಬೇಕಿದ್ದ ಬಾಲಕನನನ್ನು ಅವನೊಂದಿಗೆ ಪ್ರತಿದಿನ ಓಣಿಯಲ್ಲಿ ಆಟವಾಡುತ್ತಿದ್ದ ಅದೇ ಪ್ರಾಯದ ಗೆಳೆಯನೊಬ್ಬ ಚಾಕು ಇರಿದು ಕೊಲೆ ಮಾಡಿದ್ದಾನೆ. ಯಾಕೆ, ಏನು ಅನ್ನೋದನ್ನು ಸೋಮಶೇಖರ್ ಹೇಳೋದಿಲ್ಲ, ರೊಟ್ಟಿ ವ್ಯಾಪಾರ ಮಾಡಿಕೊಂಡಿರುವ ಇವರು ಮಾರ್ಕೆಟ್​ಗೆ ಹೋದಾಗ ಮಗನ ಕೊಲೆ ನಡೆದಿದೆ.

ಇದನ್ನೂ ಓದಿ:  ಓಂ ಪ್ರಕಾಶ್​ ಕೊಲೆ: ಪತಿಯನ್ನು 8-10 ಬಾರಿ ಇರಿದು ಪತ್ನಿ ಹತ್ಯೆ ಮಾಡಲು ಕಾರಣವೇನು? ಇಲ್ಲಿದೆ ಅಸಲಿ ಸತ್ಯ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ