ಮುಂಜಾನೆ ಹೊತ್ತಲ್ಲೇ ಪರಮೇಶ್ವರ್ ಮನೆಗೆ ಭೇಟಿ ನೀಡಿ ಆಶ್ಚರ್ಯ ಮೂಡಿಸಿದ ಡಾ ಮಹದೇವಪ್ಪ

|

Updated on: Jan 17, 2025 | 11:34 AM

ಮಹದೇವಪ್ಪ ಮತ್ತು ಪರಮೇಶ್ವರ್ ಭೇಟಿ ಪ್ರಾಯಶಃ ಪೂರ್ವನಿಯೋಜಿತವಾಗಿದೆ. ಪರಮೇಶ್ವರ್ ಮನೆ ಬಳಿ ಕೆಲ ದಲಿತ ಮುಖಂಡರು ಮಹದೇವಪ್ಪನವರಿಗಾಗಿ ಕಾಯುತ್ತಿದ್ದರು. ದಲಿತ ನಾಯಕರ ಡಿನ್ನರ್ ಮೀಟಿಂಗ್ ಅನ್ನು ಪಕ್ಷದ ವರಿಷ್ಠರು ಮುಂದೂಡಿದ್ದು ದಲಿತ ನಾಯಕರನ್ನು ಅದರಲ್ಲೂ ವಿಶೇಷವಾಗಿ ಪರಮೇಶ್ವರ್ ಅವರನ್ನು ಬೇಸರಕ್ಕೆ ದೂಡಿದೆ. ಅವರು ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ಬೆಂಗಳೂರು: ಸಮಾಜ ಕಲ್ಯಾಣ ಖಾತೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಇಂದು ಮುಂಜಾನೆ ಗೃಹ ಸಚಿ ಜಿ ಪರಮೇಶ್ವರ್ ಅವರ ಮನೆಗೆ ಭೇಟಿ ನೀಡಿದ್ದು ರಾಜಕೀಯ ವಿಶ್ಲೇಷಕರು ಹುಬ್ಬೇರಿಸುವಂತೆ ಮಾಡಿದೆ. ಮಹದೇವಪ್ಪ ಮತ್ತು ಪರಮೇಶ್ವರ್ ನಿಸ್ಸಂದೇಹವಾಗಿ ರಾಜ್ಯ ದಲಿತ ಸಮುದಾಯದ ಎರಡು ಪ್ರಮುಖ ನಾಯಕರು ಮತ್ತು ಇಬ್ಬರೂ ಮಹತ್ತರವಾದ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಆದರೆ ಮಹದೇವಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯರ ಪರಮಾಪ್ತರು, ಇದೇ ಮಾತನ್ನು ಪರಮೇಶ್ವರ್ ವಿಷಯದಲ್ಲಿ ಹೇಳಲಾಗಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಾನು, ಪರಮೇಶ್ವರ್ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿಲ್ಲ, ಮೀಟಿಂಗ್​ಗಳ ಬಗ್ಗೆ ಅನಗತ್ಯ ಗೊಂದಲ ಬೇಡ: ಮಹದೇವಪ್ಪ