ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಅಂತ ಬದಲಾಯಿಸಲು ಸಿಎಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ: ಡಿಕೆ ಶಿವಕುಮಾರ್

|

Updated on: Jul 09, 2024 | 2:08 PM

ರಾಮನಗರದ ಹೆಸರು ಬದಲಾಯಿಸುವ ಯೋಚನೆ ಕಾಂಗ್ರೆಸ್ ನಾಯಕರಿಗೆ ಯಾಕೆ ಹುಟ್ಟಿಕೊಂಡಿದೆಯೋ ಗೊತ್ತಾಗುತ್ತಿಲ್ಲ, ಹೆಸರು ಬದಲಾಯಿಸುವುದರಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಿದಂತಾಗದು, ಜನ ಯಾವುದೇ ಭಾಗದವರಾಗಿರಲಿ, ಹೆಸರುಗಳನ್ನು ಕಟ್ಟಿಕೊಂಡು ಅವರಿಗೇನೂ ಆಗಬೇಕಿಲ್ಲ, ಅವರಿಗೆ ಬೇಕಿರೋದು ಅಭಿವೃದ್ಧಿ ಮಾತ್ರ.

ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಅಂತ ಚೇಂಜ್ ಅಗಲಿದೆಯೇ? ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಾತು ಕೇಳಿದರೆ ಇಷ್ಟರಲ್ಲೇ ಅದು ಸಾಧ್ಯವಾಗಲಿದೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಹೊಸ ಜಿಲ್ಲೆಯನ್ನು ಘೋಷಿಸುವ ಯೋಚನೆಯೇನೂ ಸರ್ಕಾರಕ್ಕಿಲ್ಲ. ಆದರೆ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಅಂತ ನಾಮಕರಣ ಮಾಡಲು ಪ್ರಸ್ತಾವನೆಯೊಂದನ್ನು ರಾಮನಗರ ಭಾಗದ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿದ್ದೇವೆ, ಸಿಎಂ ಅದನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಿದ್ದಾರೆ ಎಂದು ಶಿವಕುಮಾರ್ ಹೇಳಿದರು., ರಾಮನಗರ, ಚನ್ನಪಟ್ಟನ, ಮಾಗಡಿ, ಹಾರೋಹಳ್ಳಿ ಮತ್ತು ಕನಕಪುರ-5 ತಾಲ್ಲೂಕುಗಳನ್ನೊಳಗೊಂಡ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಡುವಂತೆ ತಮ್ಮ ಆಗ್ರಹವಾಗಿದೆ ಎಂದು ಶಿವಕುಮಾರ್ ಹೇಳಿದರು. ರಾಮನಗರ ಮತ್ತು ತುಮಕೂರುನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಶಿವಕುಮಾರ್ ಸ್ಪಷ್ಟ ಉತ್ತರ ನೀಡಲಿಲ್ಲ, ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಯೋಚನೆ ಇದೆ, ಎಂಬಿ ಪಾಟೀಲ್ ಒಂದು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ, ಅದಕ್ಕೆ ಸಂಬಂಧಿಸಿದ ತಾಂತ್ರಿಕ ಅಂಶಗಳ ಬಗ್ಗೆ ಚರ್ಚೆಯಾಗಬೇಕಿದೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕುಮಾರಸ್ವಾಮಿ ಕೆಲಸ ಮಾಡಿಲ್ಲವೆನ್ನುವುದಕ್ಕೆ ಆ 10 ಸಾವಿರ ಅರ್ಜಿಗಳೇ ಸಾಕ್ಷಿ: ಡಿಕೆ ಶಿವಕುಮಾರ್ ತಿರುಗೇಟು

Follow us on