ಆಸ್ತಿ ವಿಚಾರ; ಕಟ್ಟಿಗೆ, ಕುಡುಗೋಲಿನಿಂದ ಬಡಿದಾಡಿಕೊಂಡ ಎರಡು ಕುಟುಂಬಗಳು

Edited By: ಕಿರಣ್ ಹನುಮಂತ್​ ಮಾದಾರ್

Updated on: Jun 01, 2024 | 2:52 PM

ಬೆಳಗಾವಿ(Belagavi) ತಾಲೂಕಿನ ಕಾಕತಿ ಗ್ರಾಮದ ಜಮೀನಿನಲ್ಲಿ ಆಸ್ತಿ ವಿಚಾರದ ಕುರಿತು ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ಆಗಿದ್ದು, ಕಟ್ಟಿಗೆ ಹಾಗೂ ಕುಡುಗೋಲಿನಿಂದ ಬಡಿದಾಡಿಕೊಂಡ ಘಟನೆ ನಡೆದಿದೆ. ಈ ಘಟನೆ ಬೆಳಗಾವಿಯ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಎರಡು ಗುಂಪುಗಳ ಮಧ್ಯೆ ನಡೆದ ಮಾರಾಮಾರಿ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಬೆಳಗಾವಿ, ಜೂ.01: ಆಸ್ತಿ ವಿಚಾರದ ಕುರಿತು ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ಆಗಿದ್ದು, ಕಟ್ಟಿಗೆ ಹಾಗೂ ಕುಡುಗೋಲಿನಿಂದ ಬಡಿದಾಡಿಕೊಂಡ ಘಟನೆ ಬೆಳಗಾವಿ(Belagavi) ತಾಲೂಕಿನ ಕಾಕತಿ ಗ್ರಾಮದ ಜಮೀನಿನಲ್ಲಿ ನಡೆದಿದೆ. ಘಟನೆಯಲ್ಲಿಇಬ್ಬರಿಗೆ ಗಂಭೀರ ಗಾಯವಾಗಿದ್ದರೆ, ಐದು ಜನರಿಗೆ ಸಣ್ಣಪುಟ್ಟ ಗಾಯವಾಗಿದೆ. ಕೂಡಲೇ ‌ಸ್ಥಳೀಯರ ನೆರವಿನಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೂಂಡಾಗಳನ್ನು ಕರೆಯಿಸಿ ಕೃಷಿಯಲ್ಲಿ ತೊಡಗಿದ್ದ ಕಾಕತಿ ನಿವಾಸಿ ಅನಿಲ್ ಮುಂಗಾರಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಲಾಗಿದೆ.

ಇದೀಗ ಘಟನೆಗೆ ಅದೇ ಗ್ರಾಮದ ಸಿದ್ದರಾಯಿ ತುಂಬರಿ ಎಂಬುವವರು ಕಾರಣವೆಂದು ಆರೋಪಿಸಲಾಗಿದೆ. ಅನಿಲ್ ಮುಂಗಾರಿಗೆ ಸೇರಿದ ಜಮೀನು ಕಬ್ಜಾ ಮಾಡಲು ಸಿದ್ದರಾಯಿ ತುಂಬರಿ ಪ್ಲ್ಯಾನ್ ಮಾಡಿತ್ತು. ಕೋರ್ಟ್‌ನಲ್ಲಿರುವ ಜಮೀನು ಬಿಟ್ಟುಕೊಡುವಂತೆ ಸಿದ್ದರಾಯಿ ತುಂಬರಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪದಾಗ ಅನಿಲ್ ಮುಂಗಾರಿ ಕುಟುಂಬಸ್ಥರ ಮೇಲೆ ಗೂಂಡಾಗಳನ್ನು ಕರೆಯಿಸಿ ಹಲ್ಲೆ ಮಾಡಿದ್ದಾರೆ ಎಂದು ಅನಿಲ್ ಮುಂಗಾರಿ ಕುಟುಂಬಸ್ಥರ ಆರೋಪಿಸಿದ್ದಾರೆ. ಈ ಘಟನೆ ಬೆಳಗಾವಿಯ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಎರಡು ಗುಂಪುಗಳ ಮಧ್ಯೆ ನಡೆದ ಮಾರಾಮಾರಿ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Sahadev Mane