ಬೆಂಗಳೂರು: ಪವನ್ ಕಲ್ಯಾಣ್ ನೋಡಲು ಮುಗಿಬಿದ್ದ ಫ್ಯಾನ್ಸ್; ಸಿಎಸ್ ಕಚೇರಿ ಗ್ಲಾಸ್ ಪೀಸ್ ಪೀಸ್
ಆನೆ ಹಾವಳಿ ತಡೆ ಸಂಬಂಧ ಇಂದು(ಗುರುವಾರ) ವಿಧಾನಸೌಧದ ಸಮಿತಿ ಕೊಠಡಿ 313ರಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್(Pawan Kalyan), IFS ಅಧಿಕಾರಿಗಳು ಭಾಗಿಯಾಗಿದ್ದು, ಸಭೆ ಮುಗಿಸಿ ತೆರಳುವ ವೇಳೆ ವಿಧಾನಸೌಧದಲ್ಲಿ ಪವನ್ ಫ್ಯಾನ್ಸ್ ಕಿಕ್ಕಿರಿದು ತುಂಬಿದ್ದು, ನೂಕು ನುಗ್ಗಲಾಗಿದೆ.
ಬೆಂಗಳೂರು, ಆ.08: ಆನೆ ಹಾವಳಿ ತಡೆ ಸಂಬಂಧ ಇಂದು(ಗುರುವಾರ) ವಿಧಾನಸೌಧದ ಸಮಿತಿ ಕೊಠಡಿ 313ರಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್(Pawan Kalyan), IFS ಅಧಿಕಾರಿಗಳು ಭಾಗಿಯಾಗಿದ್ದು, ಸಚಿವ ಈಶ್ವರ್ ಖಂಡ್ರೆಗೆ ಶಾಲು ಹೊದಿಸಿ ಪವನ್ ಕಲ್ಯಾಣ್ ಸನ್ಮಾನಿಸಿದರು. ಇನ್ನು ಸಭೆ ಮುಗಿಸಿ ತೆರಳುವ ವೇಳೆ ವಿಧಾನಸೌಧದಲ್ಲಿ ಪವನ್ ಫ್ಯಾನ್ಸ್ ಕಿಕ್ಕಿರಿದು ತುಂಬಿದ್ದು, ನೂಕು ನುಗ್ಗಲಾಗಿದೆ. ವಿಧಾನಸೌಧದ ಸಿಬ್ಬಂದಿ, ಅಧಿಕಾರಿಗಳು ಕೆಲಸ ಕಾರ್ಯ ಬಿಟ್ಟು ಕಾರಿಡಾರ್ಗೆ ಬಂದಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದ ಸಿಎಸ್ ಕಚೇರಿ ಗ್ಲಾಸ್ ಕೂಡ ಒಡೆದು ಗದ್ದಲ ಉಂಟಾಗಿದೆ. ಇದರಿಂದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 08, 2024 05:32 PM