ನಿಗದಿತ ಸಮಯಕ್ಕೆ ಬಾರದ ಬಸ್; ಲೋಕೋಪಯೋಗಿ ಕಚೇರಿಯಲ್ಲೇ ಅಭ್ಯಾಸ ಮಾಡೋ ಮೂಲಕ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ವಿದ್ಯಾರ್ಥಿಗಳು, ‘ಸಮಯಕ್ಕೆ ಸರಿಯಾಗಿ ಬಸ್ ಬಾರದ ಹಿನ್ನಲೆ ಲೋಕೋಪಯೋಗಿ ಕಚೇರಿಯಲ್ಲಿಯೇ ಅಭ್ಯಾಸ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿನಿತ್ಯ ನಿಗದಿತ ವೇಳೆಗೆ ಬಸ್ ಬಾರದ ಪರಿಣಾಮ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದರು. ಇಂದು ತಾವೇ ಖುದ್ದಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಧಾರವಾಡ, ಜು.18: ಸಮಯಕ್ಕೆ ಸರಿಯಾಗಿ ಬಸ್ ಬಾರದ ಹಿನ್ನಲೆ ಲೋಕೋಪಯೋಗಿ ಕಚೇರಿಯಲ್ಲಿಯೇ ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ ಮಾಡುತ್ತಿದ್ದಾರೆ. ಹೌದು, ಧಾರವಾಡ ಜಿಲ್ಲೆಯ ಕುಂದಗೋಳದ ತಾಲೂಕಿನ ಚಾಕಲಬ್ಬಿ ಗ್ರಾಮದ ವಿದ್ಯಾರ್ಥಿಗಳು, ಚಾಲಕಬ್ಬಿ ಗ್ರಾಮದಿಂದ ಸಂಶಿ, ಕುಂದಗೋಳ ಕಾಲೇಜ್ಗೆ ಹೋಗಬೇಕು. ಹೀಗಿರುವಾಗ ಸರಿಯಾದ ಸಮಯಕ್ಕೆ ಬಸ್ ಬಾರದ ಹಿನ್ನಲೆ ವಿನೂತನವಾಗಿ ಪ್ರತಿಭಟನೆ ನಡೆಸಿದ್ದು, ಕುಂದಗೋಳದ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಕಚೇರಿಯಲ್ಲಿ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿಕೊಂಡು ಅಭ್ಯಾಸ ಮಾಡುವ ಮೂಲಕ ಧರಣಿ ನಡೆಸಿ, ಕೂಡಲೇ ನಮಗೆ ಸರಿಯಾದ ಸಮಯಕ್ಕೆ ಬಸ್ ಬಿಡಲು ಆಗ್ರಹಿಸಿದ್ದಾರೆ. ಇನ್ನು ಮೇಲಾದರೂ ಸರಿಯಾಗಿ ಬಸ್ ಬರುತ್ತದೆಯಾ ಎಂಬುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ