ಮಂಗಳೂರು: ತುಂಬಿ ಹರಿಯುವ ನಂದಿನಿ ನದಿ ಮಧ್ಯೆ ಇರುವ ಕಟೀಲು ಕ್ಷೇತ್ರದ ವಿಹಂಗಮ ನೋಟ ಡ್ರೋನ್ ಕ್ಯಾಮರಾದಲ್ಲಿ ಸೆರೆ

|

Updated on: Jul 20, 2024 | 3:22 PM

ಮಳೆಗೆ ರಾಜ್ಯದ ಬಹುತೇಕ ಜಲಪಾತಗಳು ಮೈದುಂಬಿ ಹರಿಯುತ್ತಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನಲ್ಲಿ ತುಂಬಿ ಹರಿಯುವ ನಂದಿನಿ ನದಿ ಮಧ್ಯೆ ಇರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಅದ್ಭುತ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಳೆಗಾಲದಲ್ಲಿ ಕಟೀಲು ಕ್ಷೇತ್ರಕ್ಕೆ ಬರುವ ಭಕ್ತರ ಆಕರ್ಷಣೆಯೇ ರುದ್ರಭಯಂಕರವಾಗಿ ಹರಿಯುವ ಈ ನಂದಿನಿ ನದಿಯಾಗಿದೆ.

ದಕ್ಷಿಣ ಕನ್ನಡ, ಜು.20: ಕರ್ನಾಟಕದ ಹಲವೆಡೆ ಮಳೆಯ ಅಬ್ಬರ ಜೋರಾಗಿದೆ. ಅದರಲ್ಲೂ ಕರಾವಳಿ, ಪಶ್ಚಿಮ ಘಟ್ಟಗಳಲ್ಲಿ ವರುಣಾರ್ಭಟ ಹೇಳತೀರದು. ಇನ್ನು ಈ ಮಳೆಗೆ ರಾಜ್ಯದ ಬಹುತೇಕ ಜಲಪಾತಗಳು ಮೈದುಂಬಿ ಹರಿಯುತ್ತಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನಲ್ಲಿ ತುಂಬಿ ಹರಿಯುವ ನಂದಿನಿ ನದಿ ಮಧ್ಯೆ ಇರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಅದ್ಭುತ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೇವಸ್ಥಾನವನ್ನು ಆವರಿಸಿ ಹರಿಯುವ ನಂದಿನಿ ನದಿ ಪೌರಾಣಿಕ ಹಿನ್ನಲೆಯನ್ನು ಒಳಗೊಂಡಿದೆ. ಮಳೆಗಾಲದಲ್ಲಿ ಕಟೀಲು ಕ್ಷೇತ್ರಕ್ಕೆ ಬರುವ ಭಕ್ತರ ಆಕರ್ಷಣೆಯೇ ರುದ್ರಭಯಂಕರವಾಗಿ ಹರಿಯುವ ಈ ನಂದಿನಿ ನದಿ. ಈ ನಂದಿನಿ ನದಿ ಮಧ್ಯೆ ಇರುವ ಕಟೀಲು ಕ್ಷೇತ್ರದ ವಿಹಂಗಮ ನೋಟ ಡ್ರೋನ್ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Follow us on