Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಂಪುಸುಂದರಿ ಕಾಟದ ಬಳಿಕ, ಗೃಹಿಣಿಯರಿಗೆ ಶ್ರಾವಣ ಮಾಸದಲ್ಲೇ ಈರುಳ್ಳಿ-ಬೆಳ್ಳುಳ್ಳಿ ಟೆನ್ಷನ್!

ಕೆಂಪುಸುಂದರಿ ಕಾಟದ ಬಳಿಕ, ಗೃಹಿಣಿಯರಿಗೆ ಶ್ರಾವಣ ಮಾಸದಲ್ಲೇ ಈರುಳ್ಳಿ-ಬೆಳ್ಳುಳ್ಳಿ ಟೆನ್ಷನ್!

Poornima Agali Nagaraj
| Updated By: ಸಾಧು ಶ್ರೀನಾಥ್​

Updated on: Aug 15, 2023 | 9:09 AM

Garlic Onion Price Hike: ಗೃಹಿಣಿಯರಿಗೆ ಈಗ ಈರುಳ್ಳಿ, ಬೆಳ್ಳುಳ್ಳಿ ಟೆನ್ಷನ್! ಟೊಮ್ಯಾಟೋ ಆಯ್ತು ಈಗ ಮತ್ತೆರಡು ಟೆನ್ಷನ್ - ಸೈಲೆಂಟಾಗೇ ಹೆಚ್ಚಾಗ್ತಿದೆ ಈರುಳ್ಳಿ, ಬೆಳ್ಳುಳ್ಳಿ ರೇಟ್ - ಶ್ರಾವಣ ಮಾಸದ ಆರಂಭದಲ್ಲೇ ತಲೆಬಿಸಿ. ಮುಂದಿನ ದಿನದಲ್ಲಿ ಈರುಳ್ಳಿ ಕೆಜಿಗೆ 50 ರಿಂದ 60 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದ್ಯಂತೆ. ದುಬಾರಿ ದುನಿಯಾದ ಸಂಕೋಲೆಯಲ್ಲಿ ಸಿಲುಕಿರುವ ಸಿಲಿಕಾನ್​ ಸಿಟಿ ಜನರಿಗೆ ದರ ಹೊರೆ, ಬರೆ ಎಳೆಯುತ್ತಿರೋದಂತೂ ಸುಳ್ಳಲ್ಲ.

ಟೊಮ್ಯಾಟೋ ತಲೆನೋವು ಇನ್ನೂ ತಣ್ಣಗಾಗಿಲ್ಲ.. ಕಿಚನ್​ ಕ್ವೀನ್​ಗೆ (tomato price) ಇರುವ ಬೆಲೆ ಪೂರ್ತಿಯಾಗಿ ಇಳಿದಿಲ್ಲ.. ಆಗಲೇ ಮತ್ತೆರಡು ತರಕಾರಿಗಳು ಜನರ ಜೇಬಿಗೆ ಕತ್ತರಿ ಹಾಕೋಕೆ ರೆಡಿ ಆಗಿವೆ. ದುಬಾರಿ ದುನಿಯಾದ ಬಿರುಗಾಳಿಗೆ ಬೆಂಗಳೂರಿಗರು ಮತ್ತೊಮ್ಮೆ ಸಿಲುಕುವ ಎಲ್ಲಾ ಲಕ್ಷಣಗಳು ಕಾಣ್ತಿವೆ. ಮಳೆ ಎಫೆಕ್ಟ್​ನಿಂದಾಗಿ ಕಳೆದ ಮೂರು ತಿಂಗಳಿನಿಂದ ಟೊಮ್ಯಾಟೋ ಸೆಂಚುರಿ, ಡಬಲ್​ ಸೆಂಚುರಿ ಬಾರಿಸಿದ್ದು ಉಂಟು.. ಆದ್ರೀಗ ಕೆಂಪು ಸುಂದರಿಯ ಬೆಲೆ ದಿನ ದಿನಕ್ಕೂ ಇಳಿಕೆಯಾಗ್ತಿದೆ. ಜನರು ಕೊಂಚ ನಿಟ್ಟುಸಿರು ಬಿಡ್ತಿದ್ದಾರೆ. ಹೀಗಿರುವಾಗ ಮಾರ್ಕೆಟ್​ನಲ್ಲಿ ಈರುಳ್ಳಿ (Onion) ಹಾಗೂ ಬೆಳ್ಳುಳ್ಳಿ (Garlic) ಬೆಲೆ ದುಬಾರಿಯಾಗ್ತಿದೆ.. ಬೆಂಗಳೂರಿನ ಕೆ.ಆರ್​ ಮಾರ್ಕೆಟ್​ನಲ್ಲಿ ವಾರದ ಹಿಂದೆ 25 ರೂ. ಇದ್ದ ಕೆಜಿ ಈರುಳ್ಳಿ, ಈಗ 30 ರಿಂದ 40 ರೂ. ಆಗಿದೆ. ಇನ್ನು 80 ರಿಂದ 100 ರೂಪಾಯಿ ಇದ್ದ ಬೆಳ್ಳುಳ್ಳಿ, 200 ರೂ.ಗೆ ಏರಿಕೆಯಾಗಿದ್ದು, ಶ್ರಾವಣ ಮಾಸದ (Shravana Masa) ಆರಂಭದಲ್ಲಿ ಗ್ರಾಹಕರನ್ನ ಕಂಗಾಲಾಗಿಸಿದೆ. ಬೆಲೆ ಏರಿಕೆಗೆ ಬೇಸರ ವ್ಯಕ್ತಪಡಿಸಿದ ಮಹಿಳೆಯರು, ತರಕಾರಿ ಬೆಲೆಗಳು ಕಡಿಮೆ ಇದ್ರೆ ಜನರಿಗೆ ಅನುಕೂಲ.. ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಲಿ ಅಂತ ಮನವಿ ಮಾಡ್ತಿದ್ದಾರೆ.

ಇನ್ನು ಮುಂಗಾರು ಕೈಕೊಟ್ಟಿದ್ರಿಂದ ಚಿತ್ರದುರ್ಗ, ದಾವಣಗೆರೆ ಸೇರಿ ಇತರೆ ಕಡೆಯಿಂದ ಈರುಳ್ಳಿ ಲಭ್ಯವಾಗುತ್ತಿಲ್ಲ. ಸದ್ಯ ರಾಜ್ಯದಲ್ಲಿ ಸುಮಾರು 4,000 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆ ಕೊರತೆ ಇದೆ. ಮಳೆ ವಿಳಂಬ ಆಗಿರೋದ್ರಿಂದ ಈರುಳ್ಳಿ ಕೊಯ್ಲು 6 ರಿಂದ 8 ವಾರಗಳ ಕಾಲ ವಿಳಂಬ ಆಗ್ತಿದೆ. ಮಹಾರಾಷ್ಟ್ರದ ನಾಸಿಕ್​ನಲ್ಲಿಯೂ ಇದೇ ಸಮಸ್ಯೆ ಇದೆ.. ಹೀಗಾಗಿ ಈರುಳ್ಳಿ ಕೊರತೆಯಿದ್ದು, ಈರುಳ್ಳಿಗೆ ದಿನ ದಿನಕ್ಕೂ ಡಿಮ್ಯಾಂಡ್​ ಹೆಚ್ಚಾಗ್ತಿದೆ. ಮುಂದಿನ ದಿನದಲ್ಲಿ ಈರುಳ್ಳಿ ಕೆಜಿಗೆ 50 ರಿಂದ 60 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದ್ಯಂತೆ. ದುಬಾರಿ ದುನಿಯಾದ ಸಂಕೋಲೆಯಲ್ಲಿ ಸಿಲುಕಿರುವ ಸಿಲಿಕಾನ್​ ಸಿಟಿ ಜನರಿಗೆ ದರ ಹೊರೆ, ಬರೆ ಎಳೆಯುತ್ತಿರೋದಂತೂ ಸುಳ್ಳಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ