Video: ಈ ರೀತಿ ಕುತ್ತಿಗೆ ತೂಗು ಹಾಕುವ ವಿಧಾನದಿಂದ ಈ ಗಂಭೀರ ಕಾಯಿಲೆ ಗುಣಪಡಿಸಬಹುದಂತೆ
ಚೀನಾದ ಶೆನ್ಯಾಂಗ್ ನಗರದ ವಿಚಿತ್ರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಜನರು ನಿದ್ರಾಹೀನತೆ(Insomnia) ಸಮಸ್ಯೆ ನಿವಾರಿಸಲು ಕುತ್ತಿಗೆಯನ್ನು ತೂಗು ಹಾಕುವ ವ್ಯಾಯಾಮ ಮಾಡುತ್ತಿದ್ದಾರೆ. ಅವರು ತಮ್ಮ ಕುತ್ತಿಗೆಯನ್ನು ಯು ಆಕಾರದ ಬೆಲ್ಟ್ನಿಂದ ನೇತುಹಾಕುತ್ತಾರೆ. ಈ ವೀಡಿಯೊವನ್ನು @TansuYegen ಹೆಸರಿನ ಖಾತೆಯು ಹಂಚಿಕೊಂಡಿದೆ. ಇದು ಗರ್ಭಕಂಠದ ಒತ್ತಡವನ್ನು ಕೂಡ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.
ಬೀಜಿಂಗ್, ಮೇ 30: ಚೀನಾದ ಶೆನ್ಯಾಂಗ್ ನಗರದ ವಿಚಿತ್ರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಜನರು ನಿದ್ರಾಹೀನತೆ(Insomnia) ಸಮಸ್ಯೆ ನಿವಾರಿಸಲು ಕುತ್ತಿಗೆಯನ್ನು ತೂಗು ಹಾಕುವ ವ್ಯಾಯಾಮ ಮಾಡುತ್ತಿದ್ದಾರೆ. ಅವರು ತಮ್ಮ ಕುತ್ತಿಗೆಯನ್ನು ಯು ಆಕಾರದ ಬೆಲ್ಟ್ನಿಂದ ನೇತುಹಾಕುತ್ತಾರೆ. ಬಳಿಕ ಕಾಲು ಇಳಿ ಬಿಟ್ಟು, ಜೋಕಾಲಿ ರೀತಿ ಸ್ವಿಂಗ್ ಮಾಡುತ್ತಾರೆ.
ಈ ವೀಡಿಯೊವನ್ನು @TansuYegen ಹೆಸರಿನ ಖಾತೆಯು ಹಂಚಿಕೊಂಡಿದೆ. ಇದು ಗರ್ಭಕಂಠದ ಒತ್ತಡವನ್ನು ಕೂಡ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಓರ್ವ ಹಲವು ದಿನಗಳವರೆಗೆ ಈ ವ್ಯಾಯಾಮ ಮಾಡಿದ ಬಳಿಕ ಉತ್ತಮ ಫಲಿತಾಂಶ ಬಂದಿದೆ ಎಂದು ಹೇಳಿದ್ದಾರೆ, ಹಾಗೆಯೇ ಇನ್ನೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹೀಗಾಗಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪ್ರಾಣಕ್ಕೆ ಅಪಾಯವಿದೆ. ಯಾರೂ ಕೂಡ ವೈದ್ಯರ ಸಲಹೆ ಇಲ್ಲದೆ ಈ ವಿಧಾನವನ್ನು ಅನುಸರಿಸಬೇಡಿ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us