ಪಾಕಿಸ್ತಾನಕ್ಕೆ ಪಾಠ ಕಲಿಸುವ ವಿಷಯದಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆಗಳು ಅರ್ಥಹೀನ, ಅಪ್ರಸ್ತುತ: ಎಸ್​ಆರ್ ವಿಶ್ವನಾಥ್

Updated on: Apr 30, 2025 | 4:39 PM

ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಬಹಳ ವಿವೇಚನೆಯಿಂದ ಮಾತಾಡಿದ್ದಾರೆ. ಯಾರೇ ಆಗಲಿ ಇಂಥ ವಿಷಮ ಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಾತಾಡದೆ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಬೆಂಬಲಿಸಬೇಕು ಮತ್ತು ಅವರ ಜತೆ ನಿಲ್ಲಬೇಕು ಅಂತ ಖರ್ಗೆ ಹೇಳಿದ್ದಾರೆ. ಟಿವಿಯಲ್ಲಿ ಬರಬೇಕು ಅಂತ ಹೇಳಿಕೆ ನೀಡುವವರ ಮಾತಿಗೆ ಬೆಲೆಯಿಲ್ಲ ಎಂದು ವಿಶ್ವನಾಥ್ ಹೇಳಿದರು.

ನೆಲಮಂಗಲ, ಏಪ್ರಿಲ್ 30: ನಮ್ಮಲ್ಲಿ ನಡೆಯುವಂಥ ದೇಶ ವಿದ್ರೋಹದ ಕೆಲಸಗಳು ಬೇರೆ ಯಾವ ದೇಶದಲ್ಲೂ ನಡೆಯಲ್ಲ, ಎಂದು ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಸಚಿವರಾದ ಸಂತೋಷ್ ಲಾಡ್ ಮತ್ತು ಅರ್ ಬಿ ತಿಮ್ಮಾಪುರ (RB Timmapur) ಅವರನ್ನು ಏಕವಚನದಲ್ಲಿ ಜರಿಯುತ್ತ, ಹೊಟೆಲ್​ಗಳಲ್ಲಿದ್ದ ಕನ್ನಡಿಗರನ್ನು ವಿಮಾನದಲ್ಲಿ ಕರೆತಂದು, ತಾನೇ ಉ್ರಗಾಮಿಗಳನ್ನು ಸದೆಬಡಿದು ಅವರಿಂದ ಕನ್ನಡಿಗರನ್ನು ರಕ್ಷಿಸಿಕೊಂಡು ಬಂದವರ ಹಾಗೆ ಮಾತಾಡುತ್ತಾರೆ ಎಂದರು. ತಿಮ್ಮಾಪುರ ಹೇಳಿಕೆ ಅರ್ಥವೇ ಅಗಲ್ಲ, ಪ್ರಾಯಶಃ ಅವರು ಕುಡಿದು ಮಾತಾಡುತ್ತಾರೆ ಅನಿಸುತ್ತದೆ ಎಂದು ವಿಶ್ವನಾಥ್ ಹೇಳಿದರು. ಹಿಂದೆ ಇಂದಿರಾ ಗಾಂಧಿಯವರು ಪಾಕಿಸ್ತಾನದ ವಿರುದ್ಧ ಯುದ್ದ ಮಾಡಿ ಗೆದ್ದಾಗ ಅಟಲ್ ಬಿಹಾರಿ ವಾಜಪೇಯಿ ತಾಯಿ ದುರ್ಗೆ ಎಂದು ಶ್ಲಾಘಿಸಿದ್ದರು ಎಂದು ವಿಶ್ವನಾಥ್ ಹೇಳಿದರು.

ಇದನ್ನೂ ಓದಿ:  ಸುಧಾಕರ್ ಜನಪ್ರಿಯ ನಾಯಕನಾಗಿದ್ದರೆ ಅಸೆಂಬ್ಲಿ ಚುನಾವಣೆಯಲ್ಲಿ ಸೋತಿದ್ದು ಯಾಕೆ? ಎಸ್​ಆರ್ ವಿಶ್ವನಾಥ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ