ಗುತ್ತಿಗೆದಾರನ ಮನೆಯಲ್ಲಿ ರೂ. 42 ಕೋಟಿ; ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ರಾಜೀನಾಮೆ ಸಲ್ಲಿಸಬೇಕು: ನಳಿನ್ ಕುಮಾರ್ ಕಟೀಲ್
ಕಾಂಗ್ರೆಸ್ ಸರ್ಕಾರ ಇತ್ತೀಚಿಗೆ ಗುತ್ತಿಗೆದಾರ ಬಾಕಿ ಹಣದಲ್ಲಿ 600 ಕೋಟಿ ರೂ ಗಳನ್ನು ಬಿಡುಗಡೆ ಮಾಡಿತ್ತು, ಅದಕ್ಕೆ ಕಮೀಶನ್ ರೂಪದಲ್ಲಿ ಪಡೆದ ಹಣವೇ ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದೆ, ಅಲ್ಲಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದು ಕಮೀಶನ್ ಸರ್ಕಾರ ಅನ್ನೋದು ಸಾಬೀತಾಯಿತು ಎಂದು ಕಟೀಲ್ ಹೇಳಿದರು.
ಮಂಗಳೂರು: ಬೆಂಗಳೂರಲ್ಲಿ ಇಂದು ನಡೆದ ಐಟಿ ಅಧಿಕಾರಿಗಳ ದಾಳಿ ವೇಳ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್ ಅಂಬಿಕಾಪತಿಗೆ (R Ambikapathy) ಸೇರಿದ ಮನೆಯಲ್ಲಿ ಅಕ್ರಮವಾಗಿ ಅಡಗಿಸಲಾಗಿದ್ದ 42 ಕೋಟಿ ರೂ. ಬರಾಮತ್ತು ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel), ಎಟಿಎಂ ಸರ್ಕಾರ ಇಂದು ರಾಜ್ಯದಲ್ಲಿ ಆಧಿಕಾರದಲ್ಲಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಇತ್ತೀಚಿಗೆ ಗುತ್ತಿಗೆದಾರ ಬಾಕಿ ಹಣದಲ್ಲಿ 600 ಕೋಟಿ ರೂ ಗಳನ್ನು ಬಿಡುಗಡೆ ಮಾಡಿತ್ತು, ಅದಕ್ಕೆ ಕಮೀಶನ್ ರೂಪದಲ್ಲಿ ಪಡೆದ ಹಣವೇ ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದೆ, ಅಲ್ಲಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದು ಕಮೀಶನ್ ಸರ್ಕಾರ ಅನ್ನೋದು ಸಾಬೀತಾಯಿತು ಎಂದು ಕಟೀಲ್ ಹೇಳಿದರು. ಕೆಲ ದಿನಗಳ ಹಿಂದೆ ಗುತ್ತಿಗೆದಾರರು, ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ದೂರುಗಳನ್ನು ಸಲ್ಲಿಸಿ ಸರ್ಕಾರ ಬಿಲ್ ಗಳ ಬಿಡುಗಡೆಗೆ ಕಮೀಶನ್ ಕೇಳುತ್ತಿದೆ ಅಂತ ಹೇಳಿದ್ದರು. ತೆಲಂಗಾಣದಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಗಾಗಿ ಹಣ ಸಂಗ್ರಹಿಸಲಾಗಿತ್ತು ಅನ್ನೋದು ಕೂಡ ಈಗ ಬಯಲಾಗಿದೆ ಎಂದು ಹೇಳಿದ ಕಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ