ಎತ್ತುಗಳಿಂದ 6 ಗಂಟೆಯಲ್ಲೇ 28 ಎಕರೆ ಜಮೀನಿನಲ್ಲಿ ಕುಂಟೆ ಹೊಡೆದು ಸಾಧನೆ
ವಿಜಯಪುರ ತಾಲೂಕಿನ ಗುಗದಡ್ಡಿ ಗ್ರಾಮದ ರೈತ ಬೀರಪ್ಪ ರೇಬಿನಾಳ ಅವರು ಸಾಕಿದ್ದ ಎತ್ತುಗಳಿಂದ ಯುವ ರೈತರಾದ ಮಾಳಪ್ಪ ಬಿರಾದಾರ ಹಾಗೂ ಬಸವರಾಜ ಕಣ್ಮಿನಿ ಕೇವಲ 6 ಗಂಟೆಗಳ ಅವಧಿಯಲ್ಲಿ 28 ಎಕರೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಬೆಳೆಯ ಮದ್ಯದಲ್ಲಿ ಕುಂಟೆ ಹೊಡೆದು ಸಾಧನೆ ಮಾಡಿದ್ದಾರೆ.
ವಿಜಯಪುರ, ಆ.09: ಜಾನುವಾರುಗಳು ರೈತನ ಮಿತ್ರ, ಯಾಂತ್ರೀಕರಣವಾದ ಇಂದಿನ ಕೃಷಿ ಪದ್ದತಿಯಲ್ಲಿ ಜಾನುವಾರುಗಳೇ ಮಾಯವಾಗಿವೆ. ಎತ್ತು ಹೋರಿಗಳನ್ನು ಕೃಷಿಚಟುವಟಿಗಳಿಗೆ ಬಳಕೆ ಮಾಡಿಕೊಳ್ಳುವುದೂ ಸಹ ಮಾಯವಾಗುತ್ತಿವೆ. ಎಲ್ಲ ರೀತಿಯ ಕೃಷಿ ಕೆಲಸ ಕಾರ್ಯಗಳು ಇಂದು ಯಂತ್ರಗಳ ಮೂಲಕ ಮಾಡಲಾಗುತ್ತಿದೆ. ಇಷ್ಟರ ಮಧ್ಯೆಯೂ ಅಲ್ಲಲ್ಲಿ ರೈತರು ಕೃಷಿ ಕೆಲಸ ಕಾರ್ಯಗಳಿಗೆ ಎತ್ತುಗಳನ್ನು ಹೋರಿಗಳನ್ನು ಬಳಕೆ ಮಾಡುತ್ತಾರೆ. ಸ್ವಂತ ಮಕ್ಕಳಂತೆ ಎತ್ತು ಹೋರಿಗಳನ್ನು ಸಾಕಿ ಸಲುಹುತ್ತಾರೆ. ಇದೀಗ ಹೀಗೆ ಸಾಕಿದ ಎತ್ತುಗಳ ಮೂಲಕ ಜಿಲ್ಲೆಯಲ್ಲಿ ರೈತರು ಸಾಧನೆ ಮಾಡಿದ್ದಾರೆ. ಹೌದು, ವಿಜಯಪುರ ತಾಲೂಕಿನ ಗುಗದಡ್ಡಿ ಗ್ರಾಮದ ರೈತ ಬೀರಪ್ಪ ರೇಬಿನಾಳ ಅವರು ಸಾಕಿದ್ದ ಎತ್ತುಗಳಿಂದ ಯುವ ರೈತರಾದ ಮಾಳಪ್ಪ ಬಿರಾದಾರ ಹಾಗೂ ಬಸವರಾಜ ಕಣ್ಮಿನಿ ಕೇವಲ 6 ಗಂಟೆಗಳ ಅವಧಿಯಲ್ಲಿ 28 ಎಕರೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಬೆಳೆಯ ಮದ್ಯದಲ್ಲಿ ಕುಂಟೆ ಹೊಡೆದು ಸಾಧನೆ ಮಾಡಿದ್ದಾರೆ. ಇಂದು ಬೆಳಿಗ್ಗೆ 6 ಗಂಟೆಗೆ ತೊಗರಿ ಬೆಳೆಯ ಮಧ್ಯೆ ಕುಂಟೆ ಹೊಡೆಯಲು ಆರಂಭಿಸಿದ್ದ ಮಾಳಪ್ಪ ಬಿರಾದಾರ ಹಾಗೂ ಬಸವರಾಜ ಕಣ್ಮಿನಿ, ಕೇವಲ 6 ಗಂಟೆಯಲ್ಲೇ 28 ಎಕರೆ ಜಮೀನನಲ್ಲಿ ಕುಂಟೆಯನ್ನು ಹೊಡೆಯುವುದನ್ನು ಮುಗಿಸಿದ್ದಾರೆ. ಎತ್ತುಗಳ ಸಾಧನೆ ಹಾಗೂ ಯುವ ರೈತರಾದ ಮಾಳಪ್ಪ ಬಿರಾದಾರ ಹಾಗೂ ಬಸವರಾಜ ಕಣ್ಮಿನಿ ಸಾಧನೆಗೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಎತ್ತುಗಳೊಂದಿಗೆ ಮಾಳಪ್ಪ ಹಾಗೂ ಬಸವರಾಜರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ಗೌರವಿಸಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ