AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​ನ ಬರಡು ಭೂಮಿಯಲ್ಲಿ ‘ಪಪ್ಪಾಯಿ’ ಬೆಳೆದು ಸೈ ಎನಿಸಿಕೊಂಡ ರೈತ; ತಿಂಗಳ ಆದಾಯವೆಷ್ಟು ಗೊತ್ತಾ?

ಗಡಿ ಜಿಲ್ಲೆ ಬೀದರ್ ಅಂದರೆ ಸಾಕು ಮೊದಲಿಗೆ ನೆನಪಿಗೆ ಬರುವುದು ಬರ. ಸದಾ ಸಂಕಷ್ಟದಲ್ಲಿ ಬದುಕು ಸಾಗಿಸುವ ಇಲ್ಲಿನ ರೈತರ ಗೋಳು ಹೇಳತೀರದು. ಜೊತೆಗೆ ಆಗಾಗ ಸಾಲದ ಬಾಧೆಗೆ ನೇಣಿಗೆ ಕೊರಳು ಕೊಡುವ ಇಲ್ಲಿನ ರೈತರ ಗೋಳು ಯಾರಿಗೂ ಕೇಳಿಸೋದೆ ಇಲ್ಲ. ಆದ್ರೆ, ಇಲ್ಲೋಬ್ಬ ರೈತ ಇಂತಹ ಹತ್ತಾರು ಸಮಸ್ಯೆಗಳ ನಡುವೆ ಬರಡು ಭೂಮಿಯಲ್ಲಿ ಪಪ್ಪಾಯಿ ಬೆಳೆದು ಸೈ ಎನಿಸಿಕೊಂಡಿದ್ದಾನೆ. ತಿಂಗಳಿಗೆ ಉತ್ತಮ ಆದಾಯ ಘಳಿಸಿ ನೆಮ್ಮಂದಿಯ ಜೀವನ ನಡೆಸುತ್ತಿದ್ದಾನೆ.

ಬೀದರ್​ನ ಬರಡು ಭೂಮಿಯಲ್ಲಿ ‘ಪಪ್ಪಾಯಿ’ ಬೆಳೆದು ಸೈ ಎನಿಸಿಕೊಂಡ ರೈತ; ತಿಂಗಳ ಆದಾಯವೆಷ್ಟು ಗೊತ್ತಾ?
ಪಪ್ಪಾಯಿ ಬೆಳೆದು ಯಶಸ್ಸು ಕಂಡ ರೈತ ಚನ್ನಬಸಪ್ಪ ಗೋರಶೇಟ್ಟಿ
ಸುರೇಶ ನಾಯಕ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jul 30, 2024 | 5:52 PM

Share

ಬೀದರ್​, ಜು.30: ಬೀದರ್(Bidar) ಜಿಲ್ಲೆ ಅಂದರೆ ಹಿಂದುಳಿದ , ಬರದನಾಡು ಎಂದು ಹೆಸರುವಾಸಿಯಾದ ಜಿಲ್ಲೆಯಾಗಿದೆ. ಈ ಭಾಗದಲ್ಲಿ ಪ್ರತಿವರ್ಷವೂ ಮಳೆ ಕಡಿಮೆ, ಜೊತೆಗೆ ಆಗಾದ ಬಿಸಿಲು ಕೂಡ ಸಾಕಷ್ಟು ಪ್ರಮಾಣದಲ್ಲಿ ಬಿಳುತ್ತದೆ. ಇನ್ನು ನೀರಿನ ಸಮಸ್ಯೆಯೂ ಇಲ್ಲಿ ಅತಿ ಹೆಚ್ಚಾಗಿ ಕಂಡು ಬರುತ್ತದೆ. ಇಲ್ಲಿನ ಬಹುತೇಕ ರೈತರು ಮಳೆಯಾಶ್ರಿತ ಕೃಷಿಯಿಂದಲೇ ಬೆಳೆ ಬೆಳೆದು ತಮ್ಮ ಬದುಕಿನ ಬಂಡಿಯನ್ನ ಸಾಗಿಸುತ್ತಾರೆ. ಈ ಭಾಗದಲ್ಲಿ ಬಾವಿ. ಬೋರವೆಲ್ ಕೊರೆಸಿದರು ನೀರು ಬರುವುದು ವಿರಳ. ಇಂತಹ ಹತ್ತಾರು ಸಮಸ್ಯೆಯ ನಡುವೆಯೂ ಇಲ್ಲೊಬ್ಬ ರೈತ, ತನ್ನ ಹೊಲದಲ್ಲಿ ಪಪ್ಪಾಯಿ(papaya) ಬೆಳೆಯನ್ನ ಬೆಳೆಯುವುದರ ಮೂಲಕ ತನ್ನ ಕುಟುಂಬವನ್ನ ಸಾಗಿಸುತ್ತಿದ್ದಾನೆ.

ಆ ಗ್ರಾಮದ ರೈತ ಚನ್ನಬಸಪ್ಪ ಗೋರಶೇಟ್ಟಿ ಎಂಬುವವರು ಹತ್ತಾರು ವರ್ಷದಿಂದ ಸೋಯಾಬಿನ್, ತೊಗರಿ, ಉದ್ದು, ಹೀಗೆ ಒಂದೆ ಬೆಳೆ ಬೆಳೆದು ಹೈರಾಣ ಆಗಿದ್ದರು. ಆದ್ರೆ, ಕೊಂಚ ಈ ಆಧುನಿಕ ಯುಗದಲ್ಲಿ ಕೃಷಿಯಲ್ಲಿ ಏನಾದರೂ ಹೊಸದನ್ನ ಮಾಡಬೇಕೆಂದು ಯೋಚಿಸಿದ ರೈತ, ತನ್ನ ಹೊಲದಲ್ಲಿ ಪಪ್ಪಾಯಿ ಬೆಳೆದು ಕೈತುಂಬಾ ಹಣ ಘಳಿಸುತ್ತಿದ್ದಾನೆ. ಕಡಿಮೆ ನೀರಿದ್ದರೂ ಹನಿ ನೀರಾವರಿ ಪದ್ದತ್ತಿಯನ್ನ ಅಳವಡಿಸಿಕೊಂಡು ಪಪ್ಪಾಯಿ ಬೆಳೆಸಿದ್ದಾರೆ. ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಮಾತು ಈ ರೈತ ಅಕ್ಷರಶಃ ಸತ್ಯ ಮಾಡಿದ್ದಾನೆ.

ಇದನ್ನೂ ಓದಿ:ಚಾಮರಾಜನಗರ: ಗಾಳಿ ಮಳೆಗೆ ಸಾವಿರಾರು ಎಕರೆ ಬಾಳೆ ತೋಟ ನಾಶ, 25 ಕೋಟಿ ರೂ. ನಷ್ಟ

ರೆಡ್ ಲೇಡಿ ತೈವಾನ್ ಪಪ್ಪಾಯಿ ಬೆಳೆದು ಯಶಸ್ವಿ

ಬೀದರ್ ತಾಲೂಕಿನ ಮಂದಕನಳ್ಳಿ ಗ್ರಾಮದ ಚನ್ನಬಸಪ್ಪ ಗೋರಶೇಟ್ಟಿ ಎಂಬ ರೈತ ಕಲ್ಲುಭೂಮಿಯನ್ನೇ ಕೃಷಿ ಭೂಮಿಯನ್ನಾಗಿ ಮಾಡಿ ತನ್ನ ಮೂರು ಎಕರೆಯಷ್ಟು ಪ್ರದೇಶದಲ್ಲಿ ರೆಡ್ ಲೇಡಿ ತೈವಾನ್ ಪಪ್ಪಾಯಿಯನ್ನ ಜಿಲ್ಲೆಯಲ್ಲಿ ಮೊದಲ ಸಲ ಈ ರೈತರ ಬೆಳೆಸಿ ಸೈ ಎನಿಸಿಕೊಂಡಿದ್ದಾರೆ. ಈ ರೆಡ್ ಲೇಡಿ ತೈವಾನ್ ಪಪ್ಪಾಯಿಯನ್ನ ರೈತರು ಬೆಳೆಯೋದಕ್ಕೆ ಹಿಂಜರಿಯುತ್ತಾರೆ. ಅದಕ್ಕೆ ಕಾರಣವೆಂದರೆ ಈ ತಳಿಗೆ ಜಾಸ್ತಿ ಬಿಸಿಲು ಇರಬಾರದು, ಒಂದೆ ಸಮನಾದ ವಾತಾವರಣ ಈ ಪಪ್ಪಾಯಿಗೆ ಬೇಕು. ಜೊತೆಗೆ ರೋಗವೂ ಕೂಡ ಈ ಪಪ್ಪಾಯಿ ಗಿಡಕ್ಕೆ ಬೇಗ ಅಂಟಿಕೊಳ್ಳುವುದರಿಂದಾಗಿ ರೆಡ್ ಲೇಡಿ 76 ತೈವಾನ್ ಪಪ್ಪಾಯಿಯನ್ನ ರೈತರು ಬೆಳೆಸೋದಿಲ್ಲ. ಆದರೆ. ಈ ರೈತರ ತನ್ನ ಕೃಷಿಯ ಅನುಭವದಿಂದಾಗಿ ಈ ಪಪ್ಪಾಯಿನ್ನ ಬೆಳೆಸುವುದರ ಮೂಲಕ ಸೈ ಎನಿಸಿಕೊಂಡಿದ್ದಾನೆ.

ಎರಡೇ ವಾರದಲ್ಲಿ ಎರಡು ಲಕ್ಷಕ್ಕೂ ಅಧಿಕ ಲಾಭ

ಜನವರಿಯಲ್ಲಿ ಈ ಪಪ್ಪಾಯಿಯನ್ನ ನಾಟಿ ಮಾಡಿದ್ದು, ಈಗ 15 ದಿನಗಳಿಂದ ಪಪ್ಪಾಯಿ ಕಟಾವು ಮಾಡುತ್ತಿದ್ದಾರೆ. ಎರಡೇ ವಾರದಲ್ಲಿ ಎರಡು ಲಕ್ಷಕ್ಕೂ ಅಧಿಕ ಲಾಭವನ್ನ ಮಾಡಿಕೊಂಡಿದ್ದಾರೆ. ಈ ರೈತನ ಹೊಲಕ್ಕೆ ಬಂದು ಕೆ.ಜಿಗೆ 17 ರೂಪಾಯಿಯಂತೆ ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ. ಕೆಜಿಗೆ 30 ರೂಪಾಯಿ ವರೆಗೆ ಹೋಗಬಹುದೆಂದು ರೈತ ಹೇಳುತ್ತಿದ್ದಾರೆ. ಇನ್ನೂ ಮೂರು ಎಕರೆಯಲ್ಲಿ ರೆಡ್ ಲೇಡಿ 76 ತೈವಾನ್ ಪಪ್ಪಾಯಿಯನ್ನ ನಾಟಿ ಮಾಡಿದ್ದು, 2 ಸಾವಿರದಾ 8 ನೂರು ಸಸಿಗಳನ್ನ ಬೋದಿನಿಂದಾ ಬೀದಿಗೆ 8 ಅಡಿ, ಗಿಡದಿಂದಾ ಗಿಡಕ್ಕೆ 6 ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ.

ಇದನ್ನೂ ಓದಿ:ರೆಡ್ ಲೇಡಿ ಎಂಬ ತೈವಾನ್ ಪಪ್ಪಾಯಿ ತಳಿ ಪರಿಚಯಿಸಿದ ಮಾಜಿ ಸಚಿವ ಪ್ರಗತಿಪರ ರೈತ ಹೆಚ್ ಏಕಾಂತಯ್ಯಗೆ ಗೌರವ ಡಾಕ್ಟರೇಟ್

ದೆಹಲಿ- ಹೈದರಾಬಾದ್​ನಲ್ಲಿ ತುಂಬಾ ಬೇಡಿಕೆ

ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ತಾಲೂಕಿನ ಮೋಳ್ ಗ್ರಾಮದಿಂದ ಪಪ್ಪಾಯಿ ಸಸಿಗಳನ್ನ ತಂದು ನಾಟಿ ಮಾಡಿದ್ದು, ಮೂರು ಎಕರೆಯಷ್ಟು ಜಮೀನಿನಲ್ಲಿ ಪಪ್ಪಾಯಿ ನಾಟಿ ಮಾಡಲು ಸುಮಾರು ಎರಡೂವರೆ ಲಕ್ಷ ದಷ್ಟು ಖರ್ಚಾಗಿದೆ. 3 ಎಕರೆ ಜಮೀನಿನಲ್ಲಿ ಸಾವಯವ ಕೃಷಿಯ ಪದ್ದತಿ ಮೂಲಕ ” ರೆಡ್ ಲೇಡಿ 76 ತೈವಾನ್” ಮೂಲದ ಪಪ್ಪಾಯಿ ತಳಿ ಬೆಳೆಯುತ್ತಿದ್ದಾರೆ. ಈ ತಳಿಯ ಹಣ್ಣುಗಳಿಗೆ ದೆಹಲಿ- ಹೈದರಾಬಾದ್​ನಲ್ಲಿ ತುಂಬಾ ಬೇಡಿಕೆ ಇದೆ. ಹೀಗಾಗಿ ಇವರು ತಾವು ಬೆಳೆದ ಪಪ್ಪಾಯಿ ಬೆಳೆಯನ್ನು ಮಾರುಕಟ್ಟೆಗಳಿಗೆ ಕಳಿಹಿಸಿ ಉತ್ತಮ ಲಾಭ ಪಡೆಯುತ್ತಿದ್ದಾರೆ.

ಒಟ್ಟಿನಲ್ಲಿ ರೈತ ಚನ್ನಬಸಪ್ಪ ಗೋರಶೇಟ್ಟಿ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಈ ಕುರಿತು ಮಾತನಾಡಿದ ರೈತ ಚನ್ನಬಸಪ್ಪ,  ‘ಈಗಾಗಲೇ 4 ಬಾರಿ ಕಟಾವುಗೆ ಎಕರೆಗೆ 30 ರಿಂದ 35 ಟನ್ ಇಳುವರಿ ಬಂದಿದ್ದು, 1 ಎಕರೆಗೆ ಸದ್ಯ 70 ಸಾವಿರ ದಂತೆ 2 ಲಕ್ಷಕ್ಕೂ ಅಧಿಕ ಆದಾಯ ಬಂದಿದೆ ಎಂದು ಹೇಳುತ್ತಿದ್ದಾರೆ. ಎಲ್ಲ ರೈತರು ಪ್ರಯೋಗಾತ್ಮಕ ಕೃಷಿ, ಬೆಳೆ ಬೆಳೆಯಬೇಕು. ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಉತ್ತಮ ಆದಾಯ ಗಳಿಸುವ ತೋಟಗಾರಿಕೆ ಬೆಳೆ ಬೆಳೆದು, ಎಲ್ಲ ರೈತರು ಯಶಸ್ಸು ಆಗಬೇಕು ಎನ್ನುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ