ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನದ ಮೇರೆಗೆ ವಿಧಾನಸೌಧಕ್ಕೆ ಆಗಮಿಸಿದ ಹಾವೇರಿ ರೈತ ಫಕೀರಪ್ಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಫಕೀರಪ್ಪನವರೊಂದಿಗೆ ಮಾತಾಡಲು ವಿಧಾನ ಸೌಧಕ್ಕೆ ಕರೆಸಿ ಔದಾರ್ಯತೆ ಪ್ರದರ್ಶಿಸಿದ್ದಾರೆ. ತಮ್ಮ ಹೆಕ್ಟಿಕ್ ಶೆಡ್ಯೂಲ್ ನಡುವೆಯೂ ಅವರು ಫಕೀರಪ್ಪರ ಕುಟುಂಬಕ್ಕಾಗಿ ಸಮಯ ಮೀಸಲಿಟ್ಟಿದ್ದು ಅಭಿನಂದನಾರ್ಹ. ತಮ್ಮ ಜೆಸ್ಚರ್ ನಿಂದ ಕೇವಲ ಫಕೀರಪ್ಪ ಮಾತ್ರವಲ್ಲ ಇಡೀ ರೈತ ಸಮುದಾಯದ ಮನ ಗೆದ್ದಿದ್ದಾರೆ.
ಬೆಂಗಳೂರು: ಹಾವೇರಿಯ ರೈತ ಫಕೀರಪ್ಪ ಈಗ ರಾಜ್ಯದಲ್ಲಿ ಮನೆ ಮಾತಾಗಿದ್ದಾರೆ. ಅವರು ಜನಪ್ರಿಯರಾಗಲು ಕಾರಣವಾದ ಘಟನೆ ಉಲ್ಲೇಖಾರ್ಹವಲ್ಲ ನಿಜ ಆದರೆ ಅವರು, ಅವರ ಕುಟುಂಬ ಮತ್ತು ಇಡೀ ರಾಜ್ಯದ ರೈತ ಸಮುದಾಯ ಅನುಭವಿಸಿದ ಅವಮಾನಕ್ಕೆ ನ್ಯಾಯ ಸಿಕ್ಕಿದೆ. ಜಿಟಿ ಮಾಲ್ ಮಾಲೀಕ, ಮ್ಯಾನೇಜರ್ ಮತ್ತು ಫಕೀರಪ್ಪರನ್ನು ಅವಮಾನಿಸಿದ ಸೆಕ್ಯೂರಿಟಿ ಗಾರ್ಡ್ ಮೊದಲಾದವರೆಲ್ಲ ಕ್ಷಮೆ ಕೇಳಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಲ್ ಅನ್ನು ಒಂದು ಅವಧಿಗೆ ಮುಚ್ಚಿಸಿದೆ. ಇವತ್ತು ಫಕೀರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಾಣಲು ವಿಧಾನ ಸೌಧಕ್ಕೆ ಆಗಮಿಸಿದರು. ತಮ್ಮ ಪತ್ನಿ ಹಾಗೂ ಮಗನೊಂದಿಗೆ ಅವರು ವಿಧಾನಸೌಧದೊಳಗೆ ನಡೆದು ಹೋಗುವುದನ್ನು ದೃಶ್ಯಗಳಲ್ಲಿ ನೋಡಬಹುದು. ಜಿಟಿ ಮಾಲ್ ನಲ್ಲಿ ನಾವು ನೋಡಿದ ಫಕೀರಪ್ಪ ಮತ್ತು ಇಲ್ಲಿ ಕಾಣುತ್ತಿರುವ ಫಕೀರಪ್ಪನವವರ ನಡುವೆ ಲುಕ್ಸ್ ಬದಲಾಗಿವೆ. ಆಗ ಅವರು ಗಡ್ಡ ಬೆಳೆಸಿದ್ದರು ಇವತ್ತು ಶೇವ್ ಮಾಡಿಕೊಂಡು ಟ್ರಿಮ್ ಆಗಿದ್ದರು. ರಾಜ್ಯದ ಮುಖ್ಯಮಂತ್ರಿಯವರನ್ನು ಮಾತಾಡಲು ಬರೋದು ಅಂದ್ರೆ ಸುಮ್ನೆನಾ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅವಮಾನ ಮಾಡಿದವರಿಂದಲೇ ಸನ್ಮಾನ; ಪಂಚೆ ಹಾಕಿಕೊಂಡು ಮಾಲ್ ಸಿಬ್ಬಂದಿಯಿಂದ ಸನ್ಮಾನ ಮಾಡಿಸಿಕೊಂಡ ಫಕೀರಪ್ಪ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

