ಅವಮಾನ ಮಾಡಿದವರಿಂದಲೇ ಸನ್ಮಾನ; ಪಂಚೆ ಹಾಕಿಕೊಂಡು ಮಾಲ್ ಸಿಬ್ಬಂದಿಯಿಂದ ಸನ್ಮಾನ ಮಾಡಿಸಿಕೊಂಡ ಫಕೀರಪ್ಪ

ರೈತನೋರ್ವ ಪಂಚೆ ಹಾಕಿಕೊಂಡು ಬಂದಿದ್ದಕ್ಕೆ ಆತನನ್ನು ಮಾಲ್​ ಒಳಗೆ ಎಂಟ್ರಿ ಕೊಟ್ಟಿರಲಿಲ್ಲ. ಆದರೆ ಇಂದು ಅದೇ ಮಾಲ್​ನ ಸಿಬ್ಬಂದಿ ರೈತನನ್ನು ಕರೆಸಿ ಸನ್ಮಾನ ಮಾಡಿದ್ದಾರೆ. ಬೆಂಗಳೂರಿನ ಜಿಟಿ ಮಾಲ್​ಗೆ ರೈತ ಫಕೀರಪ್ಪ ಪಂಚ ಧರಿಸಿಕೊಂಡು ಬಂದು ಸನ್ಮಾನ ಸ್ವೀಕರಿಸಿದ್ದಾರೆ. ಅಂಬಾನಿ ಮಗನ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದ ಸೌಥ್ ಸ್ಟಾರ್ ನಟರೇ ಪಂಚೆಯಲ್ಲಿ ಮಿಂಚಿದ್ದರು. ಆದರೆ ಇಲ್ಲಿ ಮಾಲ್​ಗೆ ಪಂಚೆಯಲ್ಲಿ ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು.

ಅವಮಾನ ಮಾಡಿದವರಿಂದಲೇ ಸನ್ಮಾನ; ಪಂಚೆ ಹಾಕಿಕೊಂಡು ಮಾಲ್ ಸಿಬ್ಬಂದಿಯಿಂದ ಸನ್ಮಾನ ಮಾಡಿಸಿಕೊಂಡ ಫಕೀರಪ್ಪ
ಪಂಚೆ ಹಾಕಿಕೊಂಡು ಬಂದು ಮಾಲ್ ಸಿಬ್ಬಂದಿಯಿಂದ ಸನ್ಮಾನ ಮಾಡಿಸಿಕೊಂಡ ಫಕೀರಪ್ಪ
Follow us
| Updated By: ಆಯೇಷಾ ಬಾನು

Updated on:Jul 17, 2024 | 1:42 PM

ಬೆಂಗಳೂರು, ಜುಲೈ.17: ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್​ಗೆ (GT Mall) ಕಲ್ಕಿ ಸಿನಿಮಾ ವೀಕ್ಷಣೆಗೆ ಬಂದಿದ್ದ ಫಕೀರಪ್ಪ ಎಂಬ ವೃದ್ಧ ಪಂಚೆ ಧರಿಸಿದ್ದ ಎಂಬ ಕಾರಣಕ್ಕೆ ಮಾಲ್ ಒಳಗೆ ಬಿಡದೆ ಸಿಬ್ಬಂದಿ ಅವಮಾನ ಮಾಡಿದ್ದರು. ಸದ್ಯ ಈಗ ರೈತ ಫಕೀರಪ್ಪಗೆ ಅವಮಾನ ಮಾಡಿದ್ದ ಮಾಲ್​​ನಿಂದಲೇ ಸನ್ಮಾನ ಮಾಡಲಾಗಿದೆ. ರೈತ ಫಕೀರಪ್ಪಗೆ ಶಾಲು ಹಾಕಿ ಸನ್ಮಾನಿಸಲಾಗಿದೆ. ಮಾಲ್​ ಇನ್​​ಚಾರ್ಜ್ ಸುರೇಶ್​​​ ಅವರು ಫಕೀರಪ್ಪಗೆ ಕ್ಷಮೆಯಾಚಿಸಿದ್ದಾರೆ.

ರೈತ ಫಕೀರಪ್ಪ ಪಂಚೆ ಧರಿಸಿ ಮಾಲ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ರೈತನನ್ನು ಅವಮಾನಿಸಿದಕ್ಕೆ ಕನ್ನಡಪರ ಹೋರಾಟಗಾರರು ಮಾಲ್ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾಲ್ ಇನ್ಚಾರ್ಜ್ ಸುರೇಶ್ ಕ್ಷಮೆ ಕೇಳಿದರೂ ಹೋರಾಟಗಾರರು ಜಗ್ಗಲಿಲ್ಲ. ಮ್ಯಾನೇಜರ್ ಬರಬೇಕು ಎಂದು ಪಟ್ಟು ಹಿಡಿದಿದ್ದರು. ಸದ್ಯ ಈಗ ಮಾಲ್​ ಸಿಬ್ಬಂದಿ ತಾವು ಮಾಡಿದ ಎಡವಟ್ಟನ್ನು ಸರಿ ಮಾಡಿಕೊಂಡಿದ್ದು ಪಂಚೆಯಲ್ಲೇ ಬಂದ ರೈತ ಫಕೀರಪ್ಪನಿಗೆ ಮಾಲ್ ಒಳಗೆ ಸನ್ಮಾನ ಮಾಡಿ ಕ್ಷಮೆ ಕೇಳಿದೆ.

ಇನ್ನು ಈ ಘಟನೆ ಸಂಬಂಧ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಪ್ರತಿಕ್ರಿಯೆ ನೀಡಿದ್ದು, ಮುಖ ನೋಡಿ, ಬಟ್ಟೆ ನೋಡಿ ಒಬ್ಬ ವ್ಯಕ್ತಿಯನ್ನು ಅಳೆಯಬಾರದು. ಇದೊಂದು ಬ್ರಿಟಿಷರ‌ ಮನಸ್ಥಿತಿ, ನಮ್ಮನ್ನು ಆಳಿದವರ ಮೈಂಡ್​ಸೆಟ್. ಜಿ.ಟಿ.ಮಾಲ್​ ಅಷ್ಟೇ ಅಲ್ಲ, ಬೇರೆ ಕಡೆಯೂ ಇಂತಹ ರೀತಿ ನಡೆದಿವೆ. ಅರಿವಿನ ಕೊರತೆ ಇದೆಯೋ, ದುರಹಂಕಾರದಿಂದ ಮಾಡುತ್ತಿದ್ದಾರೋ? ಜಿ.ಟಿ.ಮಾಲ್​ನವರು ಹಾಗೇ ನಡೆದುಕೊಂಡಿದ್ದು ತಪ್ಪು, ಖಂಡನೀಯ. ಮುಖ ನೋಡಿ ಗೌರವ ಕೊಡುವುದು ಖಂಡನೀಯ ಎಂದರು.

ಇದನ್ನೂ ಓದಿ: ಪಂಚೆ ಹಾಕೊಂಡು ಬಂದಿದ್ದ ರೈತನನ್ನು ಒಳಗೆ ಬಿಡದ ಜಿಟಿ ಮಾಲ್ ಸಿಬ್ಬಂದಿ, ವಿಡಿಯೋ ನೋಡಿ

ನಿನ್ನೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್​ಗೆ ಹಾವೇರಿ ಮೂಲದ ಕುಟುಂಬವೊಂದು ಕಲ್ಕಿ ಸಿನಿಮಾ ವೀಕ್ಷಣೆಗೆ ಬಂದಿತ್ತು. ಅದ್ರಲ್ಲಿ ಫಕೀರಪ್ಪ ಎಂಬ ವೃದ್ಧರೊಬ್ಬರು ಪಂಚೆ ಧರಿಸಿ ಬಂದಿದ್ರು. ಪಂಚೆ ಧರಿಸಿದ್ದಾರೆ ಎಂಬ ಏಕಮಾತ್ರ ಕಾರಣಕ್ಕೆ ಜಿ.ಟಿ.ಮಾಲ್​ನ ಸೆಕ್ಯೂರಿಟಿ ಪ್ರವೇಶಕ್ಕೆ ನಿರಾಕರಣೆ ಮಾಡಿದ್ದರು.

ವೃದ್ಧನನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಮಾಲ್ ಮುಂದೆ ಕೂರಿಸಿದ್ದರು. ಇದ್ರಿಂದ ತೀವ್ರ ಅವಮಾನಕ್ಕೊಳಗಾದ ಫಕೀರಪ್ಪನವರ ಪುತ್ರ ನಾಗರಾಜ್ ಮಾಲ್​ನವರಿಗೆ ಒಳಗೆ ಬಿಡುವಂತೆ ರಿಕ್ವೆಸ್ಟ್ ಮಾಡಿದ್ದಾರೆ. ಆದ್ರೆ ಮಾಲ್​ನವನು ಯಾವಾಗ ಪ್ರವೇಶವನ್ನು ನೀರಾಕರಣೆ ಮಾಡಿದ್ನೋ ನಾಗರಾಜ್ ವಿಡಿಯೋ ಮಾಡಿ ತಮ್ಮ ನೋವು ತೋಡಿಕೊಂಡಿದ್ರು. ಸದ್ಯ ಈಗ ಫಕೀರಪ್ಪರನ್ನು ಸನ್ಮಾನ ಮಾಡಿ ಗೌರವಿಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:09 pm, Wed, 17 July 24

ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಗದಗ: ಗಣೇಶ ವಿಸರ್ಜನೆ ವೇಳೆ ಗಲಾಟೆ, ಲಾಠಿಚಾರ್ಜ್​​
ಗದಗ: ಗಣೇಶ ವಿಸರ್ಜನೆ ವೇಳೆ ಗಲಾಟೆ, ಲಾಠಿಚಾರ್ಜ್​​
ಭದ್ರತಾ ಪಡೆಯಿಂದ ಉಗ್ರನ ಎನ್​ಕೌಂಟರ್​, ವಿಡಿಯೋ ಸೆರೆಹಿಡಿದ ಡ್ರೋನ್
ಭದ್ರತಾ ಪಡೆಯಿಂದ ಉಗ್ರನ ಎನ್​ಕೌಂಟರ್​, ವಿಡಿಯೋ ಸೆರೆಹಿಡಿದ ಡ್ರೋನ್
ಭಜರಂಗದಳ, VHPಯಿಂದ ಬಿಸಿ ರೋಡ್ ಚಲೋ ಕರೆ, ಪೊಲೀಸ್​​ ಬಿಗಿ ಬಂದೋಬಸ್ತ್​​
ಭಜರಂಗದಳ, VHPಯಿಂದ ಬಿಸಿ ರೋಡ್ ಚಲೋ ಕರೆ, ಪೊಲೀಸ್​​ ಬಿಗಿ ಬಂದೋಬಸ್ತ್​​
ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ಮಲಗಿದ್ದ ವ್ಯಕ್ತಿ
ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ಮಲಗಿದ್ದ ವ್ಯಕ್ತಿ
‘ಹಗ್ಗ’ ಟ್ರೇಲರ್​ ಬಿಡುಗಡೆ ವೇದಿಕೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಸೀಮಂತ
‘ಹಗ್ಗ’ ಟ್ರೇಲರ್​ ಬಿಡುಗಡೆ ವೇದಿಕೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಸೀಮಂತ
Daily Devotional: ಪತ್ನಿಯ ಪೂಜಾ ಫಲ ಪತಿಗೆ ಸಲ್ಲುತ್ತಾ? ವಿಡಿಯೋ ನೋಡಿ
Daily Devotional: ಪತ್ನಿಯ ಪೂಜಾ ಫಲ ಪತಿಗೆ ಸಲ್ಲುತ್ತಾ? ವಿಡಿಯೋ ನೋಡಿ
Nithya Bhavishya: ಅನಂತಪದ್ಮನಾಭ ವ್ರತ ಸೋಮವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಅನಂತಪದ್ಮನಾಭ ವ್ರತ ಸೋಮವಾರದ ದಿನ ಭವಿಷ್ಯ ತಿಳಿಯಿರಿ
ಆಟೋ ಡ್ರೈವರ್​ ಆದ ರಾಧಿಕಾ ಕುಮಾರಸ್ವಾಮಿ; ‘ಭೈರಾದೇವಿ’ ಪ್ರಚಾರಕ್ಕೆ ಚಾಲನೆ
ಆಟೋ ಡ್ರೈವರ್​ ಆದ ರಾಧಿಕಾ ಕುಮಾರಸ್ವಾಮಿ; ‘ಭೈರಾದೇವಿ’ ಪ್ರಚಾರಕ್ಕೆ ಚಾಲನೆ