ನಿವೃತ್ತ ನೌಕರನಿಗೆ ಮನೆ ತನಕ ಕೆಕೆಆರ್ಟಿಸಿ ಬಸ್ನಲ್ಲಿ ಡ್ರಾಪ್ ಮಾಡಿ ಬಿಳ್ಕೋಟ್ಟ ನೌಕರರು
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ(KKRTC)ಯಲ್ಲಿ ಸತತ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು(ಮೇ.31) ನಿವೃತ್ತಿ(Retired)ಹೊಂದಿದ ಚಂದ್ರರಾರೆಡ್ಡಿ ಅವರನ್ನು ಇತರ ಸಾರಿಗೆ ಇಲಾಖೆ ನೌಕರರು ಸೇರಿಕೊಂಡು ‘ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿಯೇ ಯಾದಗಿರಿಯಿಂದ ಬಸವೇಶ್ವರ ನಗರದ ಅವರ ಮನೆಯವರೆಗೆ ಕರೆದುಕೊಂಡು ಬಂದು ಪ್ರೀತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ಯಾದಗಿರಿ, ಮೇ.31: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ(KKRTC)ಯಲ್ಲಿ ಸತತ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು(ಮೇ.31) ನಿವೃತ್ತಿ(Retired)ಹೊಂದಿದ ಚಂದ್ರರಾರೆಡ್ಡಿ ಅವರನ್ನು ಇತರ ಸಾರಿಗೆ ಇಲಾಖೆ ನೌಕರರು ಸೇರಿಕೊಂಡು ‘ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿಯೇ ಯಾದಗಿರಿಯಿಂದ ಬಸವೇಶ್ವರ ನಗರದ ಅವರ ಮನೆಯವರೆಗೆ ಕರೆದುಕೊಂಡು ಬಂದು ಪ್ರೀತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಇವರು ಡಿಪೋದಲ್ಲಿ ಮೆಕಾನಿಕ್ ಆಗಿ ಸೇವೆ ಸಲ್ಲಿಸಿದ್ದರು. ಇಂದು ಸಂಸ್ಥೆಯಲ್ಲಿ ಕೊನೆಯ ದಿನವಾಗಿದ್ದು, ಬಸ್ ನಲ್ಲಿ ಬಿಳ್ಕೋಟ್ಟ ಹಿನ್ನಲೆ ಇತರ ನೌಕರರ ಪ್ರೀತಿಗೆ, ನಿವೃತ್ತ ನೌಕರ ಚಂದ್ರರಾರೆಡ್ಡಿ ಅವರು ಸಂತಸಗೊಂಡರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 31, 2024 09:34 PM
Latest Videos