AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಎಸ್​ಎಲ್​ಸಿಯಲ್ಲಿ ಯಾದಗಿರಿ ಜಿಲ್ಲೆ ಸತತ 5 ವರ್ಷ ಕೊನೆ ಸ್ಥಾನ: ಇದು ಯಾರ ನಿರ್ಲಕ್ಷ್ಯ?

ಯಾದಗಿರಿ ಅಂದ ಕೂಡಲೇ ರಾಜ್ಯದಲ್ಲಿ ಈ ಜಿಲ್ಲೆ ಇದಿಯೋ ಇಲ್ವೋ ಎನ್ನುವ ಅನುಮಾನ ಕಾಡುತ್ತೆ. ಯಾಕೆಂದ್ರೆ ಯಾವುದೇ ವಿಷಯದಲ್ಲಿ ಸದ್ದು ಮಾಡದ ಜಿಲ್ಲೆ ತೀರಾ ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿಯನ್ನ ಕಟ್ಟಿಕೊಂಡಿದೆ. ಏಕೆಂದರೆ ನಿನ್ನೆ ರಾಜ್ಯ ಶಾಲಾ ಶಿಕ್ಷಣ ಇಲಾಖೆಯಿಂದ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದೆ. ರಾಜ್ಯಕ್ಕೆ ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ. ಆದರೆ ಯಾದಗಿರಿ ಜಿಲ್ಲೆ ಮಾತ್ರ ಕೊನೆ ಸ್ಥಾನವನ್ನ ಪಡೆದುಕೊಂಡಿದೆ.

ಎಸ್​ಎಸ್​ಎಲ್​ಸಿಯಲ್ಲಿ ಯಾದಗಿರಿ ಜಿಲ್ಲೆ ಸತತ 5 ವರ್ಷ ಕೊನೆ ಸ್ಥಾನ: ಇದು ಯಾರ ನಿರ್ಲಕ್ಷ್ಯ?
ಎಸ್​ಎಸ್​ಎಲ್​ಸಿಯಲ್ಲಿ ಯಾದಗಿರಿ ಜಿಲ್ಲೆ ಸತತ 5 ವರ್ಷ ಕೊನೆ ಸ್ಥಾನ: ಇದು ಯಾರ ನಿರ್ಲಕ್ಷ್ಯ?
ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ|

Updated on: May 10, 2024 | 4:54 PM

Share

ಯಾದಗಿರಿ, ಮೇ 10: ನಿನ್ನೆ ರಾಜ್ಯದ ಎಸ್ಎಸ್ಎಲ್ಸಿ (SSLC) ಫಲಿತಾಂಶ ಪ್ರಕಟವಾಗಿದೆ. ಉಡುಪಿ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನವಾಗಿ ಹೊರ ಹೊಮ್ಮಿದೆ. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಸಂಭ್ರಮಿಸಿದ್ದಾರೆ. ಆದರೆ ಆ ಜಿಲ್ಲೆ ಮಾತ್ರ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಫಲಿತಾಂಶದಲ್ಲಿ ಹಿಂದೆ ಬಿದ್ದಿದೆ. ಸತತ ಐದು ವರ್ಷಗಳಿಂದ ರಾಜ್ಯಕ್ಕೆ ಕೊನೆ ಸ್ಥಾನ ಪಡೆಯುವ ಮೂಲಕ ದಾಖಲೆ ಬರೆದಿದೆ. ಅಷ್ಟಕ್ಕೂ ಆ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕೊನೆ ಸ್ಥಾನಕ್ಕೆ ಬರುವುದಕ್ಕೆ ಕಾರಣವಾದರೂ ಏನು ಅಂತೀರಾ ಈ ವರದಿ ಓದಿ.

ಯಾದಗಿರಿ ಅಂದ ಕೂಡಲೇ ರಾಜ್ಯದಲ್ಲಿ ಈ ಜಿಲ್ಲೆ ಇದಿಯೋ ಇಲ್ವೋ ಎನ್ನುವ ಅನುಮಾನ ಕಾಡುತ್ತೆ. ಯಾಕೆಂದ್ರೆ ಯಾವುದೇ ವಿಷಯದಲ್ಲಿ ಸದ್ದು ಮಾಡದ ಜಿಲ್ಲೆ ತೀರಾ ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿಯನ್ನ ಕಟ್ಟಿಕೊಂಡಿದೆ. ಏಕೆಂದರೆ ನಿನ್ನೆ ರಾಜ್ಯ ಶಾಲಾ ಶಿಕ್ಷಣ ಇಲಾಖೆಯಿಂದ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದೆ. ರಾಜ್ಯಕ್ಕೆ ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ. ಆದರೆ ಯಾದಗಿರಿ ಜಿಲ್ಲೆ ಮಾತ್ರ ಕೊನೆ ಸ್ಥಾನವನ್ನ ಪಡೆದುಕೊಂಡಿದೆ.

ಇದನ್ನೂ ಓದಿ: SSLC ಫಲಿತಾಂಶ ಪ್ರಕಟ: ಮತ್ತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಕೊನೆ ಸ್ಥಾನ

100 ಕ್ಕೆ 50.59 ಪ್ರತಿಶತ ವಿದ್ಯಾರ್ಥಿಗಳು ಮಾತ್ರ ಈ ಬಾರಿಯ ಎಸ್ಎಸ್ಎಲ್ಸಿ ಯಲ್ಲಿ ಪಾಸಾಗಿದ್ದಾರೆ. ಉಳಿದ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಈ ವರ್ಷ ಜಿಲ್ಲೆಯಲ್ಲಿ 18880 ವಿದ್ಯಾರ್ಥಿಗಳು ಪರೀಕ್ಷೆಯನ್ನ ಬರೆದಿದ್ದಾರೆ. ಆದರೆ ಇದರಲ್ಲಿ ಕೇವಲ 9551 ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿದ್ದಾರೆ. ಈ ಮೂಲಕ ಮತ್ತೆ ಯಾದಗಿರಿ ಜಿಲ್ಲೆ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕೊನೆ ಸ್ಥಾನಕ್ಕೆ ಬಂದಿದೆ. ಇದು ಇದೆ ಮೊಲ ವರ್ಷ ಅಲ್ಲ ಬದಲಿಗೆ ಕಳೆದ ಐದು ವರ್ಷಗಳಿಂದ ಸತತವಾಗಿ ಕೊನೆ ಸ್ಥಾನದಲ್ಲಿದೆ. ಜಿಲ್ಲೆ ಕಳೆದ ಐದು ವರ್ಷದಿಂದ ಕೊನೆ ಸ್ಥಾನಕ್ಕೆ ಬಂದಿದ್ದಕ್ಕೆ ಜಿಲ್ಲೆಯ ಶಿಕ್ಷಣ ತಜ್ಞರು ಹಾಗೂ ಶಿಕ್ಷಣ ಪ್ರೇಮಿಗಳು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಕಳೆದ ಐದು ವರ್ಷಗಳಿಂದ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕೊನೆ ಸ್ಥಾನಕ್ಕೆ ಬರೋಕೆ ನಾನಾ ಕಾರಣಗಳಿವೆ. ಅದರಲ್ಲೂ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ತೀರಾಯಿದೆ. ಪ್ರೌಢ ಶಾಲೆಗಳಿಗೆ ಜಿಲ್ಲೆಗೆ 1435 ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಆದರೆ ಭರ್ತಿಯಾಗಿರುವ ಹುದ್ದೆಗಳು ಮಾತ್ರ 760 ಹುದ್ದೆಗಳು. ಇನ್ನು 675 ಹುದ್ದೆಗಳು ಖಾಲಿಯಿವೆ. ಕಳೆದ ವರ್ಷ 650 ಮಂದಿ ಅತಿಥಿ ಶಿಕ್ಷಕರನ್ನ ನೇಮಕ ಮಾಡಿಕೊಂಡು ಶಿಕ್ಷಣ ಇಲಾಖೆ ಶಾಲೆಯನ್ನ ನಡೆಸಿದೆ. ಅರ್ಧಕ್ಕೆ ಹೆಚ್ಚು ಪ್ರತಿಶತದಷ್ಟು ಖಾಯಂ ಶಿಕ್ಷಕರೆ ಇಲ್ಲದಂತಾಗಿದೆ.

ಇನ್ನು ಕಳೆದ ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶಿಕ್ಷಕರ ವರ್ಗಾವಣೆ ನಡೆದಿದೆ. ಹೀಗಾಗಿ ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ 54 ಜನ ಶಿಕ್ಷಕರು ತಮ್ಮ ಜಿಲ್ಲೆಗಳಿಗೆ ವರ್ಗಾವಣೆ ಆಗಿ ಹೋಗಿದ್ದಾರೆ. ಇನ್ನು ಬೇರೆ ಜಿಲ್ಲೆಗಳಿಂದ ವರ್ಗಾವಣೆಗೊಂಡು ಯಾದಗಿರಿ ಮಾತ್ರ ಕೇವಲ 3 ಜನ ಶಿಕ್ಷಕರು ಮಾತ್ರ ಬಂದಿದ್ದಾರೆ. ಇಷ್ಟೇಲ್ಲರದ ಜೊತೆಗೆ ಶಾಲೆಗಳ ಕೋಣೆಗಳು ಸರಿಯಿಲ್ಲ ಶಾಲೆಗೆ ಶಿಕ್ಷಕರು ಬಂದ್ರು ಸರಿಯಾಗಿ ಪಾಠ ಮಾಡುವುದಿಲ್ಲ. ಇದರ ಜೊತೆಗೆ ವಿಶೇಷ ಕ್ಲಾಸ್ ಗಳ ವ್ಯವಸ್ಥೆ ಮತ್ತು ಎಸ್ಎಸ್ಎಲ್ಸಿ ಫಲಿತಾಂಶ ವೃದ್ಧಿಗಾಗಿ ಕಾರ್ಯಗಾರ ಮಾಡಬೇಕಿತ್ತು. ಆದರೆ ಇಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಎದ್ದು ಕಾಣ್ತಾಯಿದೆ.

ಇದನ್ನೂ ಓದಿ: ಎಸ್​ಎಸ್​ಎಲ್​ಸಿಯಲ್ಲಿ ಬಾಗಲಕೋಟೆಯ ರೈತನ ಮಗಳು ರಾಜ್ಯಕ್ಕೆ ಪ್ರಥಮ: ರ‍್ಯಾಂಕ್ ಹಿಂದಿನ ಗುಟ್ಟು ಬಿಚ್ಚಿಟ್ಟ ಅಂಕಿತಾ

ಅಧಿಕಾರಿಗಳ ಕಿವಿ ಹಿಂಡುವ ಕೆಲಸ ಮಾಡಬೇಕಾದ ಜನ ಪ್ರತಿನಿಧಿಗಳು ಮಾತ್ರ ಗಾಢ ನಿದ್ರೆಯಲ್ಲಿದ್ದಾರೆ. ಇನ್ನು ಬಡತನ ಹಿನ್ನಲೆ ಪೋಷಕರು ಸಹ ಮಕ್ಕಳಿಗೆ ನಾಲ್ಕು ದಿನ ಶಾಲೆಗೆ ಕಳುಹಿಸಿದ್ರೆ ನಾಲ್ಕು ದಿನ ಕೆಲಸಕ್ಕೆ ಕಳುಹಿಸಿದ್ದು ಸಹ ಇದಕ್ಕೆ ಪ್ರಮುಖ ಕಾರಣವಾಗಿದೆ.

ಕಳೆದ ಐದು ವರ್ಷದಿಂದ ಯಾದಗಿರಿ ಜಿಲ್ಲೆ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕೊನೆ ಸ್ಥಾನಕ್ಕೆ ತೃಪ್ತಿ ಪಡ್ತಾಯಿದೆ. ಹೀಗಾಗಿ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂಬರುವ ವರ್ಷದಲ್ಲಿ ಫಲಿತಾಂಶ ವೃದ್ಧಿ ಅಧಿಕಾರಿಗಳು ಕಠಿಣ ಪರಿಶ್ರಮಕ್ಕೆ ಮುಂದಾಗಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.