ಸಂಸತ್ ಭವನದ ರಚನೆ ವಿಶಿಷ್ಟವಾಗಿದ್ದರೂ, ಇಂಥ ಭಾರೀ ಪ್ರಮಾಣದ ಭದ್ರತಾ ಲೋಪ ಜರುಗಿದ್ದು ಆಘಾತಕಾರಿ: ಡಿಕೆ ಸುರೇಶ್
ಇದು ಭದ್ರತಾ ಲೋಪವಲ್ಲದೆ ಮತ್ತೇನೂ ಅಲ್ಲ, ಹೊಸ ಸಂಸತ್ ಭವನವನ್ನು ಬಹಳ ವಿಶಿಷ್ಟವಾಗಿ ನಿರ್ಮಿಸಲಾಗಿದೆ, ಇಲ್ಲಿ ಅಂಥ ಲೋಪ ಜರುಗಲು ಅವಕಾಶವೇ ಇರಲ್ಲ, ಕಲಾಪ ವೀಕ್ಷಣೆಗೆ ಪಾಸು ಪಡೆದು ಬರುವವರು 3-4 ಕಡೆ ತಪಾಸಣೆಗೊಳಗಾಗುತ್ತಾರೆ, ಮೊಬೈಲ್ ಫೋನ್, ಅಥವಾ ಒಂದು ಕಾಗದದ ತುಂಡನ್ನು ಸಹ ಅವರು ಒಳಗೆ ತರುವಂತಿಲ್ಲ ಎಂದು ಸುರೇಶ್ ಹೇಳಿದರು.
ದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ (Lok Sabha winter session) ಇಂದು ನಡೆದ ಘಟನೆಯನ್ನು ಪಕ್ಷಾತೀತವಾಗಿ ಖಂಡಿಸಲಾಗುತ್ತಿದೆ. ಟಿವಿ9 ಕನ್ನಡ ವಾಹಿನಿಯ ದೆಹಲಿ ವರದಿಗಾರನೊಂದಿಗೆ ಮಾತಾಡಿದ ಸಂಸದ ಡಿಕೆ ಸುರೇಶ್ (DK Suresh) ಘಟನೆ ನಡೆದಾಗ ಸದನದಲ್ಲಿದ್ದ್ದರು ಮತ್ತು ಮೊದಲಿಗೆ ಅದನ್ನೊಂದು ಅಕಸ್ಮಿಕ ಘಟನೆ ಅಂದುಕೊಂಡಿದ್ದರಂತೆ. ಯುವಕರ ಘೋಷಣೆಗಳನ್ನು ಕೇಳಿಸಿಕೊಂಡಾಗ ಮತ್ತು ಹೊಗೆಯನ್ನು ಅವರು ಸ್ಪ್ರೇ (spray) ಮಾಡಿದಾಗ, ಅವರು ಬೇರೆ ಉದ್ದೇಶ ಇಟ್ಟುಕೊಂಡು ಸಂಸತ್ ಭವನ ಪ್ರವೇಶಿಸಿದ್ದು ಸ್ಪಷ್ಟವಾಯಿತು ಎಂದು ಸುರೇಶ್ ಹೇಳುತ್ತಾರೆ. ಇದು ಭದ್ರತಾ ಲೋಪವಲ್ಲದೆ ಮತ್ತೇನೂ ಅಲ್ಲ, ಹೊಸ ಸಂಸತ್ ಭವನವನ್ನು ಬಹಳ ವಿಶಿಷ್ಟವಾಗಿ ನಿರ್ಮಿಸಲಾಗಿದೆ, ಇಲ್ಲಿ ಅಂಥ ಲೋಪ ಜರುಗಲು ಅವಕಾಶವೇ ಇರಲ್ಲ, ಕಲಾಪ ವೀಕ್ಷಣೆಗೆ ಪಾಸು ಪಡೆದು ಬರುವವರು 3-4 ಕಡೆ ತಪಾಸಣೆಗೊಳಗಾಗುತ್ತಾರೆ, ಮೊಬೈಲ್ ಫೋನ್, ಅಥವಾ ಒಂದು ಕಾಗದದ ತುಂಡನ್ನು ಸಹ ಅವರು ಒಳಗೆ ತರುವಂತಿಲ್ಲ. ಅದರೆ ಈ ಯುವಕರು ಹೊಗೆಯುಗುಳುವ ವಸ್ತುಗನನ್ನು ತಮ್ಮೊಂದಿಗೆ ತಂದಿದ್ದು ನಿಜಕ್ಕೂ ಆಘಾತಕಾರಿ ಸಂಗತಿ ಎಂದು ಸುರೇಶ್ ಹೇಳಿದರು. ಪ್ರಕರಣದ ಕೂಲಂಕಷ ತನಿಖೆ ನಡೆಸಿ ಪ್ರಧಾನ ಮಂತ್ರಿ ಇಲ್ಲವೇ ಲೋಕಸಭಾ ಸ್ಪೀಕರ್ ಸತ್ಯವನ್ನು ಸಾರ್ವಜನಿಕಗೊಳಿಸಬೇಕು ಎಂದು ಸುರೇಶ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ