ಮನೋರಂಜನ್ಗೆ ಪಾಸು ಕೊಡಿಸಿದ ಮಾತ್ರಕ್ಕೆ ಸಂಸದ ಪ್ರತಾಪ್ ಸಿಂಹ ದೇಶದ್ರೋಹಿಯೇ?
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಕೆಸರೆರಚಾಟ ಬಹಳ ದಿನಗಳಿಂದ ನಡೆಯುತ್ತಿದೆ. ಯಾವುದಾದರೂ ಚಿಕ್ಕ ವಿಷಯ ಸಿಕ್ಕರೆ ಸಾಕು ಅದನ್ನು ರಾಷ್ಟ್ರೀಯ ಸಮಸ್ಯೆಯಂತೆ ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ಮೈಸೂರಲ್ಲಿ ಮನೋರಂಜನ್ ಒಳ್ಳೆಯ ಯುವಕ ಅಂತ ಹೆಸರು ಗಳಿಸಿದ್ದಾನೆ, ಅದನ್ನು ನಂಬಿಯೇ ಪ್ರತಾಪ್ ಸಿಂಹ ಪಾಸು ಕೊಟ್ಟಿರುವ ಸಾಧ್ಯತೆ ಇದೆ.
ಮೈಸೂರು: ಇದು ಬೇಕಿರಲಿಲ್ಲ. ಮೈಸೂರು ನಗರ, ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ಸದಸ್ಯರು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ (KPCC spokesperson M Laxman) ನೇತೃತ್ವದಲ್ಲಿ ನಗರದ ಜಲದರ್ಶಿನಿ ಅತಿಥಿಗೃಹದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (MP Pratap Simha) ಕಚೇರಿ ಬಳಿ ಅವರ ಬಂಧನ ಆಗ್ರಹಿಸಿ, ಪ್ರತಿಭಟನೆ ನಡೆಸುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಇಂದು ಸಂಸತ್ ಭವನ ಪ್ರವೇಶಿಸಿದ ಇಬ್ಬರು ಯುವಕರಲ್ಲೊಬ್ಬ ಮೈಸೂರುನವನಾಗಿದ್ದು ಪ್ರತಾಪ್ ಸಿಂಹ ಹೆಸರಲ್ಲಿ ಪಾಸು ಪಡೆದು ಸಂಸತ್ ಪ್ರವೇಶಿಸಿದ್ದಾನೆ. ಹಾಗಂತ ಸಂಸದನಿಗೆ ದೇಶದ್ರೋಹಿ ಅಂತ ಪಟ್ಟಕಟ್ಟೋದು ಎಷ್ಟು ಸರಿ? ಯುವಕ ಮನೋರಂಜನ್ ಯಾವ ಸಬೂಬು ಹೇಳಿ ಪಾಸು ಪಡೆದಿದ್ದನೋ ಗೊತ್ತಿಲ್ಲ. ಯುವಕರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ಬಳಿಕವೇ ಯಾವುದು ಏನು ಎತ್ತ ಅನ್ನೋದು ಬಯಲಾಗುತ್ತದೆ. ಆದರೆ ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಮತ್ತು ನ್ಯಾಯಾಲಯ ತಾವೇ ಆಗಿರುವಂತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos