India-Pakistan War Updates; ಪಾಕಿಸ್ತಾನದ ಎರಡು ಅತ್ಯಾಧುನಿಕ ಕ್ಷಿಪಣಿಗಳನ್ನು ಹೊಡೆದುರುಳಿಸಿ ಭಾರತೀಯ ಸೇನೆ

Updated on: May 10, 2025 | 7:01 PM

ಅದಕ್ಕೂ ಮೊದಲು ರಾಜಸ್ತಾನದ ಜೈಸಲ್ಮೇರ್ ನಲ್ಲಿ ಭಾರತದ ಸೇನೆಯು ಪಾಕಿಸ್ತಾನದ ಅತ್ಯಾಧುನಿಕ ತಂತ್ರಜ್ಞಾನದ ಅಬ್ದಾಲಿ ಕ್ಷಿಪಣಿಯನ್ನು ಪುಡಿಗಟ್ಟಿತ್ತು. ಅಬ್ದಾಲಿ ನ್ಯೂಕ್ಲಿಯರ್ ಅಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದ ಕ್ಷಿಪಣಿಯಾಗುತ್ತಂತೆ ಮತ್ತು 450 ಕಿಮೀಗಳಷ್ಟು ದೂರದ ಟಾರ್ಗೆಟ್ ಉಡಾಯಿಸಲು ಶಕ್ತವಾಗಿತ್ತಂತೆ. ಭಾರತವನ್ನು ತಡವಿಕೊಳ್ಳಬೇಡಿ ಅಂತ ದೊಡ್ಡಣ್ಣ ಹೇಳಿದ್ದರೂ ಕೇಳಲಿಲ್ಲವಲ್ಲ ಪಾಕಿಸ್ತಾನ?

ಬೆಂಗಳೂರು, ಮೇ 10: ಭಾರತದ ಮಿಲಿಟರಿ ಶಕ್ತಿ (military prowess) ಅಗಾಧವಾದದ್ದು ಮತ್ತು ಅಪರಿಮಿತವಾದದ್ದು, ಪ್ರಾಯಶಃ ಈ ಅಂಶವನ್ನು ಪಾಕಿಸ್ತಾನ ಈಗ ಅರ್ಥಮಾಡಿಕೊಂಡಂತಿದೆ. ಭಾರತದ ರಾಜಧಾನಿ ದೆಹಲಿಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆ ಫತೆ-16 ಹೆಸರಿನ ಮಿಸೈಲ್ ಅನ್ನು ಹಾರಿಬಿಟ್ಟಿತ್ತು, ಅದರೆ ಭಾರತೀಯ ಸೇನೆ ಅದನ್ನು ಹರಿಯಾಣದ ಸಿರ್ಸಾದಲ್ಲಿ ಹೊಡೆದುರುಳಿಸಿದೆ. ದೆಹಲಿ ಮೇಲೆ ದಾಳಿ ನಡೆಸಿದ ಸಂಭ್ರಮ ಆಚರಿಸಬೇಕೆಂದಿದ್ದ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ. ಭಾರತದ ರಕ್ಷಣಾ ವ್ಯವಸ್ಥೆಯನ್ನು ಪಾಕಿಸ್ತಾನ್ ಅಂಡರ್ ಎಸ್ಟಿಮೇಟ್ ಮಾಡಿ ಮೂರ್ಖ ಸಾಹಸಗಳಿಗೆ ಕೈ ಹಾಕಿದ್ದ ಆಶ್ಚರ್ಯ ಮೂಡಿಸುತ್ತದೆ.

ಇದನ್ನೂ ಓದಿ: India-Pakistan War Updates; ಪಾಕಿಸ್ತಾನ ನಗರ ಪ್ರದೇಶ ಸೇನಾನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ