ಭಾರತ ಪಾಕಿಸ್ತಾನ ಯುದ್ಧ ಕಾರ್ಮೋಡ: ಹೇಗಿರಲಿದೆ ಅಣಕು ಕಾರ್ಯಾಚರಣೆ? ಸಾರ್ವಜನಿಕರ ಜವಾಬ್ದಾರಿ ಏನು?

Edited By:

Updated on: May 06, 2025 | 12:09 PM

ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧದ ಕಾರ್ಮೋಡ ಆವರಿಸಿರುವ ಸಂದರ್ಭದಲ್ಲಿ ಕೇಂದ್ರ ಗೃಹ ಇಲಾಖೆ ಎಲ್ಲ ರಾಜ್ಯಗಳಿಗೆ ಯುದ್ಧ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮೇ 7 ರಂದು ಮಾಕ್ ಡ್ರಿಲ್ ಅಥವಾ ಅಣಕು ಕಾರ್ಯಾಚರಣೆ ನಡೆಸುವಂತೆ ಸೂಚಿಸಿದೆ. ಹೇಗಿರಲಿದೆ ಮಾಕ್ ಡ್ರಿಲ್ ಎಂಬ ವಿವರ ಇಲ್ಲಿದೆ.

ಮೈಸೂರು, ಮೇ 6: ಯುದ್ಧಕ್ಕೂ ಮುನ್ನ ನಡೆಸುವ ಮಾಕ್ ಡ್ರಿಲ್ ಅಥವಾ ಅಣಕು ಪ್ರದರ್ಶನ ಅತ್ಯಂತ ಮಹತ್ವದ್ದು ಎಂದು ಸಿಅರ್‌ಪಿಎಫ್ ನಿವೃತ್ತ ಐಜಿಪಿ ಕೆ ಅರ್ಕೇಶ್ ಹೇಳಿದ್ದಾರೆ. ಮೈಸೂರಿನಲ್ಲಿ ‘ಟಿವಿ9’ ಜತೆ ಮಾತನಾಡಿದ ಅವರು, ಯುದ್ಧದಂತಹ ಘಟನೆ ಸಂಭವಿಸಿದಾಗ ಸೇನೆಯಷ್ಟೇ ಅಲ್ಲ ಪ್ರತಿಯೊಬ್ಬರದ್ದೂ ಜವಾಬ್ದಾರಿ ಇರುತ್ತದೆ. ಸಾರ್ವಜನಿಕರು, ವೈದ್ಯರು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕ್ಷೇತ್ರದವರಿಗೆ ಅವರದ್ದೇ ಆದ ಜವಾಬ್ದಾರಿ ಇರುತ್ತದೆ. ಇದರ ಅರಿವು ಮೂಡಿಸುವುದೇ ಯುದ್ದದ ಅಣಕು ಪ್ರದರ್ಶನ. ದೇಶದ ಗಡಿ ಭಾಗದ ಪ್ರದೇಶ ಮಾತ್ರವಲ್ಲದೆ ದೇಶದ ಎಲ್ಲಾ ಭಾಗದಲ್ಲೂ ಇದು ಆಗಬೇಕು ಎಂದರು. ಜತೆಗೆ, ಅಣಕು ಪ್ರದರ್ಶನ ಯಾವ ರೀತಿ ಇರುತ್ತದೆ ಎಂದು ವಿವರಿಸಿದರು. ವಿವರಗಳಿಗೆ ವಿಡಿಯೋ ನೋಡಿ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ