AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ಶಿಳ್ಳೆ ಹೊಡದು ಶತಕವನ್ನು ಸಂಭ್ರಮಿಸಿದ ರಾಹುಲ್; ವಿಡಿಯೋ

IND vs WI: ಶಿಳ್ಳೆ ಹೊಡದು ಶತಕವನ್ನು ಸಂಭ್ರಮಿಸಿದ ರಾಹುಲ್; ವಿಡಿಯೋ

ಪೃಥ್ವಿಶಂಕರ
|

Updated on: Oct 03, 2025 | 2:36 PM

Share

KL Rahul's 11th Test Century: ಕನ್ನಡಿಗ ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧದ ಅಹಮದಾಬಾದ್ ಟೆಸ್ಟ್‌ನಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಇದು ಅವರ ವೃತ್ತಿಜೀವನದ 11ನೇ ಟೆಸ್ಟ್ ಶತಕವಾಗಿದ್ದು, ಒಂಬತ್ತು ವರ್ಷಗಳ ನಂತರ ಭಾರತದಲ್ಲಿ ಗಳಿಸಿದ ಮೊದಲ ಶತಕವಾಗಿದೆ. ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಿ, 190 ಎಸೆತಗಳಲ್ಲಿ 100 ರನ್ ಪೂರೈಸಿದ ರಾಹುಲ್, ವಿಭಿನ್ನವಾಗಿ ಶಿಳ್ಳೆ ಹೊಡೆಯುವ ಮೂಲಕ ಸಂಭ್ರಮಿಸಿದರು.

ನಿರೀಕ್ಷಿಸಿದಂತೆಯೇ ತಮ್ಮ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ಕನ್ನಡಿಗ ಕೆಎಲ್ ರಾಹುಲ್ ಯಶಸ್ವಯಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನ ಮೊದಲ ದಿನದಾಟದಲ್ಲಿ ಅರ್ಧಶತಕ ಬಾರಿಸಿ ಅಜೇಯರಾಗಿ ಉಳಿದಿದ್ದ ರಾಹುಲ್, ಎರಡನೇ ದಿನದಾಟದ ಮೊದಲ ಸೆಷನ್ ಅಂತ್ಯಕ್ಕೂ ಮುನ್ನ ಶತಕ ಪೂರ್ಣಗೊಳಿಸಿದರು. 190 ಎಸೆತಗಳಲ್ಲಿ 12 ಬೌಂಡರಿ ಸಹಿತ 100 ರನ್ ಪೂರೈಸಿದ ರಾಹುಲ್ ತಮ್ಮ ಶತಕವನ್ನು ಶಿಳ್ಳೆ ಹೊಡೆಯುವ ಮೂಲಕ ಸಂಭ್ರಮಿಸಿದರು. ರಾಹುಲ್ ಅವರ ಈ ಆಚರಣೆ ಎಲ್ಲರಿಗೂ ಸ್ವಲ್ಪ ವಿಶೇಷವೆನಿಸಿತು. ಏಕೆಂದರೆ ರಾಹುಲ್ ಈ ಮೊದಲು ಶತಕ ಭಾರಿಸಿದರೆ, ತಮ್ಮ ಕೈ ಬೆರಳುಗಳನ್ನು ತಮ್ಮ ಎರಡೂ ಕಿವಿಗಳ ಮೇಲಿಟ್ಟು ಶತಕಗಳನ್ನು ಆಚರಿಸುತ್ತಿದ್ದರು. ಆದರೆ ರಾಹುಲ್, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ ನಂತರ ಶಿಳ್ಳೆ ಹೊಡೆದು ಸಂಭ್ರಮಿಸಿದರು.

ವೆಸ್ಟ್ ಇಂಡೀಸ್ ವಿರುದ್ಧದ ಅಹಮದಾಬಾದ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ 197 ಎಸೆತಗಳಲ್ಲಿ 100 ರನ್ ಗಳಿಸಿದರು. ಇದು ಅವರ ವೃತ್ತಿಜೀವನದ 11 ನೇ ಟೆಸ್ಟ್ ಶತಕವಾಗಿತ್ತು. ವೆಸ್ಟ್ ಇಂಡೀಸ್ ವಿರುದ್ಧ ಇದು ಅವರ ಎರಡನೇ ಟೆಸ್ಟ್ ಶತಕವಾಗಿತ್ತು. ಒಂಬತ್ತು ವರ್ಷಗಳ ನಂತರ ಭಾರತೀಯ ನೆಲದಲ್ಲಿ ಇದು ಅವರ ಮೊದಲ ಟೆಸ್ಟ್ ಶತಕವಾಗಿತ್ತು.

ಅಲ್ಲದೆ ಈ ವರ್ಷ ಆರಂಭಿಕರಾಗಿ ಇದು ಅವರ ಎರಡನೇ ಟೆಸ್ಟ್ ಶತಕವಾಗಿತ್ತು. ಇದಕ್ಕೂ ಮೊದಲು ಇಂಗ್ಲೆಂಡ್ ಪ್ರವಾಸದಲ್ಲಿ ಅವರು ತಮ್ಮ ಮೊದಲ ಶತಕ ಬಾರಿಸಿದ್ದರು. ಇದು ಮಾತ್ರವಲ್ಲದೆ ನಾಯಕ ಶುಭ್​ಮನ್ ಗಿಲ್ ಅವರೊಂದಿಗೆ ರಾಹುಲ್ ಮೂರನೇ ವಿಕೆಟ್‌ಗೆ 98 ರನ್‌ಗಳ ಜೊತೆಯಾಟವನ್ನು ಕಲೆಹಾಕಿದರು. ಹಾಗೆಯೇ ಈ ವರ್ಷ ಆರಂಭಿಕ ಆಟಗಾರರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ