ಜಮ್ಮು ಮತ್ತು ಕಾಶ್ಮೀರದ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಆರಂಭಿಸಿದ ಭಾರತೀಯ ಸೇನೆ

Updated on: May 14, 2025 | 10:25 AM

ಏತನ್ಮಧ್ಯೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆಯೊಂದನ್ನು ಕರೆದಿದ್ದಾರೆ. ಯುದ್ಧ ಮತ್ತು ಕದನ ವಿರಾಮದ ಬಳಿಕ ಇದು ಮೊದಲ ಕ್ಯಾಬಿನೆಟ್ ಮೀಟಿಂಗ್ ಆಗಿದೆ. ಯುದ್ಧಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಪ್ರಧಾನಿ ಮೋದಿಯವರು ತಮ್ಮ ಸಂಪುಟ ಸಹೋದ್ಯೋಗಿಗಳ ಗಮನಕ್ಕೆ ತರಲಿದ್ದಾರೆ.

ಬೆಂಗಳೂರು, ಮೇ 14: ಭಾರತದ ವೈಶಿಷ್ಟ್ಯತೆಯೇ ಇದು, ದೇಶಕ್ಕೆ ಆಪತ್ತು ಎದುರಾದಾಗ ಎಲ್ಲರೂ ಒಗ್ಗೂಡಿ ಶತ್ರುಗಳ ಮೇಲೆ ಮುಗಿಬೀಳುತ್ತಾರೆ. ಪಾಕಿಸ್ತಾನದ ಜೊತೆ ಯುದ್ಧವಂತೂ ನಿಂತಿದೆ ಆದರೆ ಗಡಿರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ವಾಸವಾಗಿರುವ ಜನ ಇನ್ನೂ ಆತಂಕದಲ್ಲಿದ್ದಾರೆ. ಅವರಲ್ಲಿ ವಿಶ್ವಾಸ ಮತ್ತು ಧೈರ್ಯ ತುಂಬುವ ಕೆಲಸವನ್ನು ಭಾರತೀಯ ಸೇನೆಯ ಅಧಿಕಾರಿಗಳು ಮತ್ತು ಜವಾನರು ಮಾಡುತ್ತಿದ್ದಾರೆ. ಪಾಕ್ ಶೆಲ್ಲಿಂಗ್ ನಲ್ಲಿ ಹಲವಾರು ಜನ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ಒದಗಿಸುತ್ತಿರುವ ಸೇನೆ ಮನೆಮನೆಗೆ ಮೆಡಿಕಲ್ ಕಿಟ್ ತಲುಪಿಸುತ್ತಿದೆ.

ಇದನ್ನೂ ಓದಿ:  ಸ್ಯಾಟಲೈಟ್ ಫೋಟೋಗಳು ಲಭ್ಯವಿದೆ; ಭಾರತದ ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದೇವೆಂದ ಪಾಕಿಸ್ತಾನದ ಹೇಳಿಕೆ ತಳ್ಳಿಹಾಕಿದ ಭಾರತ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ