India-Pakistan War Updates; ಪಾಕಿಸ್ತಾನದ ನಾಲ್ಕು ಏರ್​ಬೇಸ್ ಮತ್ತು ಡ್ರೋಣ್ ಲಾಂಚ್​ಪ್ಯಾಡ್ ಧ್ವಂಸಗೊಳಿಸಿದ ಭಾರತ

Updated on: May 10, 2025 | 1:31 PM

ಪಾಕಿಸ್ತಾನಿಗಳು ಹಾರಿಬಿಟ್ಟ ಡ್ರೋಣ್ ಒಂದು ಪಂಜಾಬಿನ ಅಮೃತ್​ಸರ್ ನಗರದ ಬಳಿಯಿರುವ ಮುಗ್ಲಾನಿ ಎಂಬ ಸ್ಥಳದಲ್ಲಿ ಛಿದ್ರಗೊಂಡು ಬಿದ್ದಿರುವುದು ಪತ್ತೆಯಾಗಿದೆ. ಸೇನೆಯ ಅಧಿಕಾರಿಗಳನ್ನು ಅದರ ಅವಶೇಷಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅವಶೇಷಗಳನ್ನು ಎಫ್​ಎಸ್​ಎಲ್ ಪ್ರಯೋಗಾಲಯಕ್ಕೆ ಕಳಿಸಿ ಪರೀಕ್ಷಣೆ ನಡೆಸಲಾಗುವುದು. ದುಷ್ಟ ಪಾಕಿಸ್ತಾನ ಅದರಲ್ಲಿ ಯಾವ್ಯಾವ ಕೆಮಿಕಲ್​ಗಳನ್ನು ಬಳಸಿದೆ ಅಂತ ಪತ್ತೆ ಮಾಡುವುದು ಅವಶ್ಯವಾಗಿದೆ.

ಬೆಂಗಳೂರು, ಮೇ 10: ಹತಾಷ ಪಾಕಿಸ್ತಾನ ಭಾರತದ ನಾಗರಿಕ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸುತ್ತದೆ ಎಂದು ಭಾರತೀಯ ಸೇನೆಗೆ ಗೊತ್ತಿತ್ತು, ಅದರ ಎಲ್ಲ ಪ್ರಯತ್ನಗಳನ್ನು ಭಾರತ ವಿಫಲಗೊಳಿಸದೆ ಮತ್ತು ಕೌಂಟರ್ ದಾಳಿ ನಡೆಸಿ ಪಾಕಿಸ್ತಾನದ ನಾಲ್ಕು ಏರ್ ಬೇಸ್ ಮತ್ತು ಜಮ್ಮು ಬಳಿಯಿದ್ದ ಪಾಕಿಸ್ತಾನದ ಡ್ರೋಣ್ ಲಾಂಚ್​ಪ್ಯಾಡನ್ನು ಸಂಪೂರ್ಣವಾಗಿ ನಾಶ ಮಾಡಿದೆ. ರಾವಲ್ಪಿಂಡಿಯಲ್ಲಿದ್ದ ನೂರ್ ಖಾನಾ ಏರ್​ಬೇಸ್, ಚಾಕ್ವಾಲ್ ನಗರದಲ್ಲಿದ್ದ ಮುರೀದ್ ಮತ್ತು ಶೋರ್ ಕೋಟ್​ ನಲ್ಲಿದ್ದ ರಫೀಕಿ ವಾಯುನೆಲೆಗಳನ್ನು ಭಾರತೀಯ ಸೇನೆ ನೆಲಸಮಗೊಳಿಸಿದೆ.

ಇದನ್ನೂ ಓದಿ:   India-Pakistan War Updates; ಪಾಕಿಸ್ತಾನ ನಗರ ಪ್ರದೇಶ ಸೇನಾನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 10, 2025 10:37 AM