ಕಣಿವೆಯಲ್ಲಿ ಮುಂದುವರಿದ ಸೇನೆಯ ಗುಂಡಿನ ಮೊರೆತ, ಇವತ್ತು ಮತ್ತಿಬ್ಬರು ಉಗ್ರರ ಬಲಿ

Updated on: May 22, 2025 | 8:37 PM

ಪಾಕಿಸ್ತಾನ ಗೂಢಚಾರಿಯಾಗಿ ಭಾರತವನ್ನು ಪ್ರವೇಶಿಸಿದ್ದ ನೇಪಾಳ ಮೂಲದ ಅನ್ಸಾರುಲ್ ಮಿಯಾ ಅನ್ಸಾರಿ ಮತ್ತು ರಾಂಚಿಯಲ್ಲಿದ್ದ ಅಖ್ಲಾಕ್ ಆಜಂ ಎಂಬುವವರನ್ನು ಬಂಧಿಸಲಾಗಿದೆ. ಭಾರತೀಯ ಸೇನೆಯ ರಹಸ್ಯ ಮಾಹಿತಿಯನ್ನು ಇವರು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು ಮತ್ತು ವಿಚಾರಣೆ ವೇಳೆ ತಾವು ಮಾಡುತ್ತಿದ್ದ ದುಷ್ಕೃತ್ಯವನ್ನು ಅನ್ಸಾರಿ ಮತ್ತು ಅಜಂ ಒಪ್ಪಿಕೊಂಡಿದ್ದಾರೆ. ಉಗ್ರರಿಗೆ ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಉಳಿಗಾಲವಿಲ್ಲ.

ಬೆಂಗಳೂರು, ಮೇ 22: ಜಮ್ಮು ಮತ್ತು ಕಾಶ್ಮೀರದಲ್ಲಿ ಅಡಗಿ ಕೂತಿದ್ದ ಮತ್ತಿಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಮೇ 16ರಂದು ಶಾಹಿದ್ ಕುಟ್ಟಾಯ್, ಅದ್ನಾನ್ ಶಫಿ ದರ್, ಆಮಿರ್ ಅಹ್ಮದ್ ದರ್, ಆಸಿಫ್ ಅಹ್ಮದ್
ಶೇಖ್, ಯಾವರ್ ಅಹ್ಮದ್ ಬಟ್ ಮತ್ತು ಆಮಿರ್ ನಜೀರ್ ವಾನಿ ಹೆಸರಿನ 6 ಉಗ್ರರನ್ನು ಮಣ್ಣುಗೂಡಿಸಿದ್ದ ಸೇನೆ ಇವತ್ತು ಮತ್ತಿಬ್ಬರ ಆಹುತಿ ಪಡೆಯುವದರೊಂದಿಗೆ ಒಂದು ವಾರದಲ್ಲಿ 8 ಭಯೋತ್ಪಾದಕರ ಹುಟ್ಟಡಿಗಿಸಿದೆ. ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ನಡೆಸಿ ಅಮಾಯಕರ ಬಲಿ ಪಡೆದ ಘೋರ ಘಟನೆ ನಡೆದು ಇವತ್ತಿಗೆ ಸರಿಯಾಗಿ ಒಂದು ತಿಂಗಳು ಕಳೆದಿದೆ. ಅಲ್ಲಿಂದೀಚಿಗೆ ಭಾರತೀಯ ಸೇನೆ ಬಿಲದಲ್ಲಿ ಅಡಗಿ ಕುಳಿತಿರುವ ಉಗ್ರರನ್ನು ಬಯಲಿಗೆದು ಕೊಂದು ಹಾಕುತ್ತಿದೆ.

ಇದನ್ನೂ ಓದಿ:  ಪಾಕ್​ನ ಗುಂಡಿನ ದಾಳಿಗೆ ನಾವು ಶತ್ರುಗಳ ಗುಂಡಿಗೆಯೂ ನಡುಗುವಂಥಾ ಉತ್ತರ ನೀಡಿದ್ದೇವೆ: ಭಾರತೀಯ ಸೇನೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ