ಸುಮಿ ನಗರದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು ಸಹ ತಂಡತಂಡವಾಗಿ ಭಾರತಕ್ಕೆ ವಾಪಸ್ಸಾಗುತ್ತಿದ್ದಾರೆ
ಸುಮಿಯಲ್ಲಿ ಹೆಚ್ಚು ಬಾಂಬಿಂಗ್ ಮತ್ತು ಶೆಲ್ಲಿಂಗ್ ನಡೆದಾಗ ತಮ್ಮನ್ನು ಸುರಕ್ಷಿತ ಬಂಕರ್ ಗಳಿಗೆ ಕರೆದೊಯ್ಯಲಾಗುತಿತ್ತು ಮತ್ತು ದಾಳಿ ನಿಂತ ಬಳಿಕ ಪುನಃ ಹಾಸ್ಟೆಲ್ ಗೆ ಒಯ್ದು ಬಿಡಲಾಗುತ್ತಿತ್ತು ಎಂದು ಹೇಳಿದ ವಿದ್ಯಾರ್ಥಿನಿ ತಾವು ಅಲ್ಲಿಂದ ತೆರವು ಮಾಡುವ ಎರಡು ದಿನಗಳ ಮೊದಲು ವಿಪರೀತ ಬಾಂಬಿಂಗ್ ನಡೆಯಿತು ಎಂದರು.
ಉಕ್ರೇನಿಂದ ಭಾರತೀಯ ವಿದ್ಯಾರ್ಥಿಗಳ ಕೊನೆಯ ಬ್ಯಾಚ್ ಸ್ವದೇಶದಲ್ಲಿ ಕ್ರಮೇಣ ಲ್ಯಾಂಡ್ ಆಗುತ್ತಿದೆ. ಶುಕ್ರವಾರ ಕೆಲ ಕರ್ನಾಟಕದ ವಿದ್ಯಾರ್ಥಿಗಳು ಸಹ ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Bengaluru Airport) ಬಂದಿಳಿದರು. ದೇವನಹಳ್ಳಿ ಟಿವಿ9 ವರದಿಗಾರರ ಏರ್ ಪೋರ್ಟ್ನಲ್ಲಿ ಇಬ್ಬರು ವಿದ್ಯಾರ್ಥಿನಿಯರೊಂದಿಗೆ ಮಾತಾಡಿ ಅವರ ಅನುಭವ ಹೇಗಿತ್ತು ಅಂತ ಕೇಳಿದರು. ನಮಗ್ಯಾವುದೇ ತೊಂದರೆಯಾಗಿಲ್ಲ ನಾವು ಸುರಕ್ಷಿತವಾಗಿದ್ದೆವು ಮತ್ತು ಭಾರತದ ರಾಯಭಾರಿ ಕಚೇರಿ ನಮ್ಮನ್ನು ಸುರಕ್ಷಿತವಾಗಿ ಕರೆತಂದಿದೆ ಎಂದು ನೀಲಿ ಟಾಪ್ ಧರಿಸಿರುವ ವಿದ್ಯಾರ್ಥಿನಿ ಹೇಳಿದರು. ಸುಮಿ ನಗರದ ಹಾಸ್ಟೆಲ್ ಒಂದರಲ್ಲಿದ್ದ ವಿದ್ಯಾರ್ಥಿನಿಯರು ಅಲ್ಲಿಂದ ಪೊಲ್ಟೋವಾ ಗೆ (Poltava) ಬಸ್ ನಲ್ಲಿ, ಪೊಲ್ಟೋವಾನಿಂದ ಪೋಲೆಂಡ್ಗೆ (Poland) ಟ್ರೇನಲ್ಲಿ ಮತ್ತು ಪೋಲೆಂಡ್ನಿಂದ ಭಾರತಕ್ಕೆ ವಿಮಾನದಲ್ಲಿ ಸುರಕ್ಷಿತವಾಗಿ ಬಂದೆವು ಅಂತ ಹೇಳುತ್ತಾರೆ.
ಸುಮಿಯಲ್ಲಿ ಹೆಚ್ಚು ಬಾಂಬಿಂಗ್ ಮತ್ತು ಶೆಲ್ಲಿಂಗ್ ನಡೆದಾಗ ತಮ್ಮನ್ನು ಸುರಕ್ಷಿತ ಬಂಕರ್ ಗಳಿಗೆ ಕರೆದೊಯ್ಯಲಾಗುತಿತ್ತು ಮತ್ತು ದಾಳಿ ನಿಂತ ಬಳಿಕ ಪುನಃ ಹಾಸ್ಟೆಲ್ ಗೆ ಒಯ್ದು ಬಿಡಲಾಗುತ್ತಿತ್ತು ಎಂದು ಹೇಳಿದ ವಿದ್ಯಾರ್ಥಿನಿ ತಾವು ಅಲ್ಲಿಂದ ತೆರವು ಮಾಡುವ ಎರಡು ದಿನಗಳ ಮೊದಲು ವಿಪರೀತ ಬಾಂಬಿಂಗ್ ನಡೆಯಿತು ಎಂದರು. ಹಾಗಾಗಿ, ನೀರು ಮತ್ತು ಪವರ್ ಸಪ್ಲೈ ನಿಂತುಹೋಗಿತ್ತು. ಅದರೆ ಮೊದಲ ಎರಡು ಮಹಡಿಗಳಲ್ಲಿ ನೀರು ಬರುತ್ತಿದ್ದರಿಂದ ತೊಂದರೆಯಾಗಲಿಲ್ಲ ಎಂದು ಅವರು ಹೇಳುತ್ತಾರೆ.
ಅಲ್ಲಿಂದ ಹೊರಡುವ ಮೊದಲು ಯುದ್ಧವಿರಾಮ ಘೋಷಣೆಯಾಗಿದ್ದರಿಂದ ಪೋಲ್ಟೋವಾ ತಲುಪುವುದು ಕಷ್ಟವಾಗಲಿಲ್ಲ. ಕೀವ್ ಮೇಲೆ ರಷ್ಯನ್ ದಾಳಿ ಆರಂಭವಾದ ಕೂಡಲೇ ತಾವು ಆಹಾರ ಸಾಮಗ್ರಿಗಳ ದಾಸ್ತಾನು ಮಾಡಿಕೊಂಡಿದ್ದರಿಂದ ಊಟದ ಸಮಸ್ಯೆಯೂ ಆಗಲಿಲ್ಲ ಅಂತ ಅವರು ಹೇಳಿದರು.