ಕಾಂಗ್ರೆಸ್​ಗೆ ಈಗ ನಾಯಕರೇ ಇಲ್ಲ, ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲೂ ಅದು ನಿರ್ನಾಮವಾಗಲಿದೆ: ಯಡಿಯೂರಪ್ಪ

ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದರು ಅಂತ ಹೇಳಿದ್ದು ಬಿ ಎಸ್ ವೈ ಅವರಲ್ಲಿ ಅಸಾಮಾಧಾನವನ್ನುಂಟು ಮಾಡಿತ್ತು

TV9kannada Web Team

| Edited By: Arun Belly

Mar 11, 2022 | 10:11 PM

ಮಾಜಿ ಮುಖ್ಯಮಂತ್ರಿಗಳಾಗಿರುವ ಬಿ ಎಸ್ ಯಡಿಯೂರಪ್ಪ (BS Yediyurappa) ಮತ್ತು ಸಿದ್ದರಾಮಯ್ಯ (Siddaramaiah) ನಡುವೆ ರಾಜಕೀಯ ವೈರತ್ವವಿದೆ ಮತ್ತು ಸ್ನೇಹವೂ (friendship) ಇದೆ. ಪರಸ್ಪರ ಟೀಕಿಸುವುದು, ಕಾಲೆಳೆಯುವುದು ಸದನದಲ್ಲಿ ಮಾತುಗಳ ಮೂಲಕ ಕಿತ್ತಾಡುವುದು ಇದ್ದಿದ್ದೇ. ಆದರೆ ಅವರಿಬ್ಬರ ನಡುವೆ ಗೌರವಾದರಗಳೂ ಇವೆ. ಸಿದ್ದರಾಮಯ್ಯನವರ ಹಿರಿಯ ಮಗ ಆಕಾಲಿಕ ಮರಣವನ್ನಪ್ಪಿದ್ದಾಗ ಅವರ ಅಂತ್ಯಸಂಸ್ಕಾರದ ವೇಳೆ ಈ ಹಿರಿಯ ಮುತ್ಸದ್ದಿಗಳು ಒಬ್ಬರನ್ನೊಬ್ಬರು ತಬ್ಬಿಕೊಂಡು ಅತ್ತಿದ್ದು ಕನ್ನಡಿಗರು ಯಾವತ್ತೂ ಮರೆಯಲಾರರು. ಶುಕ್ರವಾರದಂದು ಸದನದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಂಡಿಸಿದ ಬಜೆಟ್ ಮೇಲೆ ತಮ್ಮ ಮಾತುಗಳನ್ನಾಡಿದ ನಂತರ ಯಡಿಯೂರಪ್ಪನವರು ಮಾತಾಡಲು ಎದ್ದುನಿಂತರು. ಮಾತು ಆರಂಭಿಸಿದ ಕೂಡಲೇ ಅವರು ಸಿದ್ದರಾಮಯ್ಯನವರ ಕಾಲೆಳೆಯತೊಡಗಿದರು.

ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದರು ಅಂತ ಹೇಳಿದ್ದು ಬಿ ಎಸ್ ವೈ ಅವರಲ್ಲಿ ಅಸಾಮಾಧಾನವನ್ನುಂಟು ಮಾಡಿತ್ತು. ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ, ತಮ್ಮನ್ನು ಯಾರೂ ಕಿತ್ತು ಸ್ಥಾನದಿಂದ ಕಿತ್ತುಹಾಕಲಿಲ್ಲ, ತಾವಾಗಿಯೇ ಪದವನ್ನು ತ್ಯಜಿಸಿ ಬಸವರಾಜ ಬೊಮ್ಮಯಿ ಅವರನ್ನು ಮುಖ್ಯಮಂತ್ರಿ ಅವರನ್ನು ಆ ಸ್ಥಾನದಲ್ಲಿ ಕೂರಿಸಿದ್ದು ಎಂದು ಅವರು ಹೇಳಿದರು.

ಬೊಮ್ಮಾಯಿ ಮಂಡಿಸಿದ ಬಜೆಟ್ ಅದ್ಭುತವಾಗಿದೆ, ಅದನ್ನು ಹಿಡಿದೇ ನಾವು ರಾಜ್ಯದಾದ್ಯಂತ ಸುತ್ತಾಡಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ, ನಿಮಗೆ ವಿರೋಧ ಪಕ್ಷವಾಗಿರುವುದೇ ಶಾಶ್ವತ ಎಂದರು. ನಾನು ಹಿಂದೆ ಸಿಎಮ್ ಆಗಿದ್ದಾಗಲೂ ಇದೇ ಮಾತನ್ನು ಹೇಳಿದ್ದೆ ಅಂದಾಗ ರಾಮಲಿಂಗಾರೆಡ್ಡಿ ಅವರು, ನಾವು 2013ರಲ್ಲಿ ಅಧಿಕಾರಕ್ಕೆ ಬಂದಿರಲಿಲ್ಲವೇ ಎನ್ನುತ್ತಾರೆ.

ಪಂಚ ರಾಷ್ಟ್ರಗಳ ಚುನಾವಣಾ ಫಲಿತಾಂಶಗಳನ್ನು ನೋಡಿದರೆ, ಕಾಂಗ್ರೆಸ್ ಧೂಳೀಪಟವಾಗಿರೋದು ಗೊತ್ತಾಗುತ್ತದೆ. ಕಾಂಗ್ರೆಸ್ ಗೆ ಈಗ ಯಾರೂ ನಾಯಕರೇ ಇಲ್ಲ. ನಿಮ್ಮ ಸ್ಥಿತಿ ನೋಡುತ್ತಿದ್ದರೆ ಅಯ್ಯೋ ಅನಿಸುತ್ತದೆ. ಮುಂದಿನ ಚುನಾವಣೆಯಲ್ಲೂ ನಾವೇ 135-140 ಸ್ಥಾನಗಳನ್ನು ಗೆದ್ದು ನಾವೇ ಅಧಿಕಾರಕ್ಕೆ ಬರುತ್ತೇವೆ, ನಿಮಗೆ ವಿರೋಧ ಪಕ್ಷವೇ ಗತಿ, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್ ನಿರ್ನಾಮಗೊಳ್ಳಲಿದೆ ಎಂದು ಯಡಿಯೂರಪ್ಪ ಹೇಳುತ್ತಾರೆ.

ಇದನ್ನೂ ಓದಿ:  Video: ಮರಿಯುಪೋಲ್​ನಲ್ಲಿ ರಷ್ಯಾ ಸೇನೆಯ ದೌರ್ಜನ್ಯ; ಹೆರಿಗೆ ಆಸ್ಪತ್ರೆ ಮೇಲೆ ಏರ್​ಸ್ಟ್ರೈಕ್​​, ಅವಶೇಷಗಳಡಿಯಲ್ಲಿ ಜನರು

Follow us on

Click on your DTH Provider to Add TV9 Kannada