ಐತಿಹಾಸಿಕ ಗೆಲುವಿನ ಬಳಿಕ ಕಣ್ಣೀರ ಕಡಲಲ್ಲಿ ಮಿಂದೆದ್ದ ಭಾರತದ ಸಿಂಹಿಣಿಯರು; ಭಾವುಕ ವಿಡಿಯೋ
India vs Australia Semifinal: ನವಿ ಮುಂಬೈನಲ್ಲಿ ನಡೆದ 2025ರ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತೀಯ ಮಹಿಳಾ ತಂಡವು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿ ಮೂರನೇ ಬಾರಿಗೆ ವಿಶ್ವಕಪ್ ಫೈನಲ್‌ಗೇರಿದೆ. ಜೆಮಿಮಾ ಶತಕ ಹಾಗೂ ನಾಯಕಿ ಹರ್ಮನ್‌ಪ್ರೀತ್ ಜೊತೆಗಿನ ಪಾಲುದಾರಿಕೆಯಿಂದ ಭಾರತವು ಬೃಹತ್ ಗುರಿ ಬೆನ್ನಟ್ಟಿ ಐತಿಹಾಸಿಕ ಜಯ ಸಾಧಿಸಿತು. ಈ ಗೆಲುವು ತಂಡದಲ್ಲಿ ಭಾರಿ ಸಂಭ್ರಮ ಮೂಡಿಸಿತು.
ನವಿ ಮುಂಬೈನಲ್ಲಿ ನಡೆದ 2025 ರ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಭಾರತೀಯ ಮಹಿಳಾ ತಂಡವು ಮೂರನೇ ಬಾರಿಗೆ ವಿಶ್ವಕಪ್ ಫೈನಲ್‌ಗೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.5 ಓವರ್‌ಗಳಲ್ಲಿ 338 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತದ ಪರ ಜೆಮಿಮಾ ಶತಕ ಬಾರಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಅವರೊಂದಿಗೆ ಮೂರನೇ ವಿಕೆಟ್‌ಗೆ 167 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇವರಿಬ್ಬರ ಆಟದಿಂದಾಗಿ ಭಾರತವು 48.3 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.
ಭಾರತ ಪರ ಅಮನ್‌ಜೋತ್ ಕೌರ್ ಗೆಲುವಿನ ಬೌಂಡರಿ ಬಾರಿಸಿದ ತಕ್ಷಣ, ಮೈದಾನದಲ್ಲಿದ್ದ ಭಾರತೀಯ ಮಹಿಳಾ ತಂಡದ ಸದಸ್ಯರು ಸಂತೋಷದಿಂದ ಕುಣಿದು ಕುಪ್ಪಳಿಸಿದರು. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ದಾಖಲೆಯ ಗುರಿ ಬೆನ್ನಟ್ಟಿ ಗೆದ್ದ ಭಾರತ ತಂಡದ ಕಣ್ಣೀರ ಕಟ್ಟೆ ಹೊಡೆದಿತ್ತು. ತಂಡದ ಎಲ್ಲಾ ಆಟಗಾರ್ತಿಯರು ಪರಸ್ಪರ ತಬ್ಬಿಕೊಂಡು ಭಾವುಕರಾದರು. ಇದೀಗ ಅದರ ವಿಡಿಯೋವನ್ನು ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

