Kalimullah Khan: ಭಾರತದ ಮ್ಯಾಂಗೋ ಮ್ಯಾನ್ ಪ್ರಕಾರ ಅಕಾಲಿಕ ಮಳೆಯಿಂದ ಮಾವುಬೆಳೆ ಭಾರೀ ಪ್ರಮಾಣದಲ್ಲಿ ಹಾಳಾಗಿದೆ!

|

Updated on: Apr 06, 2023 | 5:42 PM

ಮಾವು ಹೂಬಿಡುವ ಸಮಯದಲ್ಲಿ ಅಕಾಲಿಕ ಮಳೆ ಸುರಿದ ಕಾರಣ ಅವು ಉದುರಿಬಿಟ್ಟಿವೆ. ಒಂದಷ್ಟು ಭಾಗ ಹೂ ಮರಗಳಲ್ಲಿ ಉಳಿದಿರುವುದು ನಿಜವಾದರೂ, ಈ ಭಾಗದಲ್ಲಿ ಇಷ್ಟರಲ್ಲೇ ಪುನಃ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಅವು ಸಹ ನಾಶಗೊಳ್ಳುವ ಆತಂಕವಿದೆ.

ಲಖನೌ (ಉತ್ತರ ಪ್ರದೇಶ): ಅಕಾಲಿಕ ಮಳೆ ಅದರಲ್ಲೂ ಅಲಿಕಲ್ಲುಗಳಿಂದ ಕೂಡಿದ ಮಳೆ ಉತ್ತರ ಪ್ರದೇಶದ ರೈತರ ಬದುಕನ್ನು ಕಂಗಾಲಾಗಿಸಿದೆ, ಎಲ್ಲಕ್ಕಿಂತ ಜಾಸ್ತಿ ಮಾವು ಬೆಳೆಗಾರರು ಪ್ರಭಾವಕೊಳ್ಳಗಾಗಿದ್ದಾರೆ. ಹಣ್ಣುಗಳ ರಾಜನೆಂದು ಕರೆಸಿಕೊಳ್ಳುವ ಮಾವಿನ ಬಗ್ಗೆ ಅಪಾರ ಜ್ಞಾನ ಹೊಂದಿರುವ ಮತ್ತು ಅದರಿಂದಲೇ ದೇಶ ವಿದೇಶಗಳಲ್ಲಿ ಖ್ಯಾತರಾಗಿ ಭಾರತದ ಮ್ಯಾಂಗೋ ಮ್ಯಾನ್ (India’s Mango Man) ಎಂದು ಕರೆಸಿಕೊಂಡಿರುವ ಪ್ರದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲೀಮುಲ್ಲಾ ಖಾನ್ (Kaleemullah Khan) ಹೇಳುವ ಹಾಗೆ ಮಾವಿನ ಹಣ್ಣು ಸೀಸನ್ ಹಿಂದೆಂದೂ ಇಂಥ ಪ್ರಭಾವಕ್ಕೊಳಗಾಗಿರಲಿಲ್ಲ, ಮತ್ತು ಯಾವತ್ತೂ ಈ ಪ್ರಮಾಣದಲ್ಲಿ ಬೆಳೆ ಹಾಳಾಗಿರಲಿಲ್ಲ.

ಇದನ್ನೂ ಓದಿ:  Effects of Climate Change: ಕೇರಳದ ಹಲವು ಕರಾವಳಿ ಪ್ರದೇಶಗಳಲ್ಲಿ ಉಪ್ಪು ನೀರಿನಿಂದಾಗಿ ಜನರ ಸಮಸ್ಯೆಗಳು ದಿನೇದಿನೆ ಹೆಚ್ಚುತ್ತಿವೆ!

‘ನನ್ನ ಬದುಕಿನಲ್ಲಿ ಇಂಥ ಬೆಳೆಹಾನಿಯನ್ನು ನಾನ್ಯಾವತ್ತೂ ನೋಡಿಲ್ಲ, ಮಾವಿನ ಹಣ್ಣುಗಳು ಹೂಬಿಡುವ ಸಂದರ್ಭದಲ್ಲಿ ಹವಾಮಾನ ಅತ್ಯಂತ ಅನುಕೂಲಕರ ಮತ್ತು ಪೂರಕವಾಗಿತ್ತು. ಅದರೆ ಅಕಾಲಿಕ ಮಳೆ ಮಾವು ಬೆಳೆಗೆ ಅಗಾಧವಾದ ಹಾನಿ ಉಂಟುಮಾಡಿದೆ,’ ಎಂದು ಕಲೀಮುಲ್ಲಾ ಖಾನ್ ಹೇಳುತ್ತಾರೆ.

ಮಾವು ಹೂಬಿಡುವ ಸಮಯದಲ್ಲಿ ಅಕಾಲಿಕ ಮಳೆ ಸುರಿದ ಕಾರಣ ಅವು ಉದುರಿಬಿಟ್ಟಿವೆ. ಒಂದಷ್ಟು ಭಾಗ ಹೂ ಮರಗಳಲ್ಲಿ ಉಳಿದಿರುವುದು ನಿಜವಾದರೂ, ಈ ಭಾಗದಲ್ಲಿ ಇಷ್ಟರಲ್ಲೇ ಪುನಃ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಅವು ಸಹ ನಾಶಗೊಳ್ಳುವ ಆತಂಕವಿದೆ.

’ಇದುವರೆಗೆ ಶೇಕಡ 60 ರಷ್ಟು ಬೆಳೆ ಹಾಳಾಗಿದೆ. ಮಾವಿನ ಹಣ್ಣುಗಳನ್ನು ತಿನ್ನುವವರ ಸಂಖ್ಯೆ ಅಪಾರವಾಗಿರುವುದರಿಂದ ಈ ಬಾರಿ ನಿಸ್ಸಂದೇಹವಾಗಿ ಹಣ್ಣಗಳ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಲಿದೆ,’ ಎಂದು ಕಲೀಮುಲ್ಲಾ ಹೇಳುತ್ತಾರೆ.

ಇದನ್ನೂ ಓದಿ: ವೇದಿಕೆ ಮೇಲೆ ವಿದೇಶಿ ಮಹಿಳೆಯ ಎತ್ತಿಕೊಂಡು ಮುತ್ತಿಟ್ಟ ನಟ ವರುಣ್ ಧವನ್, ತೀವ್ರ ಟೀಕೆ 

ತಮ್ಮ 8-ಎಕರೆ ಮಾವಿನ ತೋಪಿನಲ್ಲಿ ನಿಂತು ಮಾವಿನ ಬೆಳೆಗೆ ಆಗಿರುವ ಹಾನಿಯೆಡೆ ವಿಷಾದ ವ್ಯಕ್ತಪಡಿಸುವ ಕಲೀಮುಲ್ಲಾ ಖಾನ್ ಹಣ್ಣುಪ್ರಿಯರು ಎದುರಿಸಲಿರುವ ಕೊರತೆಯ ಬಗ್ಗೆ ಕಳವಳ ವ್ಯಕ್ತ ಪಡಿಸುತ್ತಾರೆ. ಅಲ್ಪ ಪ್ರಮಾಣದ ಹಣ್ಣು ಮಾರ್ಕೆಟ್ ಗೆ ಬಂದರೂ ಜನ ದುಬಾರಿ ಬೆಲೆ ತೆರಬೇಕಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ