Effects of Climate Change: ಕೇರಳದ ಹಲವು ಕರಾವಳಿ ಪ್ರದೇಶಗಳಲ್ಲಿ ಉಪ್ಪು ನೀರಿನಿಂದಾಗಿ ಜನರ ಸಮಸ್ಯೆಗಳು ದಿನೇದಿನೆ ಹೆಚ್ಚುತ್ತಿವೆ!

Effects of Climate Change: ಕೇರಳದ ಹಲವು ಕರಾವಳಿ ಪ್ರದೇಶಗಳಲ್ಲಿ ಉಪ್ಪು ನೀರಿನಿಂದಾಗಿ ಜನರ ಸಮಸ್ಯೆಗಳು ದಿನೇದಿನೆ ಹೆಚ್ಚುತ್ತಿವೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 06, 2023 | 8:08 AM

ಹವಾಮಾನ ವೈಪರೀತ್ಯದಿಂದ ಹೆಚ್ಚುತ್ತಿರುವ ಸಮುದ್ರ ಮಟ್ಟವು ಪ್ರಪಂಚದಾದ್ಯಂತದ ಅನೇಕ ಕರಾವಳಿ ಪ್ರದೇಶಗಳಲ್ಲಿನ ಸಿಹಿನೀರು ಸರಬರಾಜನ್ನು ವ್ಯವಸ್ಥೆಯಲ್ಲಿ ಉಪ್ಪು ನೀರು ಪ್ರವೇಶಿಸಲು ಕಾರಣವಾಗಿದೆ.

ಕೊಚ್ಚಿ ನಿವಾಸಿ ಆಂಟನಿ ಕುಟುಂಬ ಕಳೆದ 140 ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸವಾಗಿದೆ. ತಮ್ಮ ಮನೆಯ ಹೊರಗೆ ನಿರ್ಮಿಸಿರುವ ಈ ಹೊಂಡದ ನೀರನ್ನು ಅವರು ಕುಡಿಯಲು ಮತ್ತು ಅಡುಗೆಗೆ ಬಳಸುತ್ತಿದ್ದರು, ಆದರೆ ಈಗ ನೀರಿನಲ್ಲಿ ಉಪ್ಪಿನಾಂಶ ಹೆಚ್ಚಿರುವುದರಿಂದ ಬಟ್ಟೆ ತೊಳೆಯಲು ಅಥವಾ ಸ್ನಾನ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

“ಅರವತ್ತು ವರ್ಷಗಳಿಂದ ನಾವು ಈ ನೀರನ್ನೇ ಅಡುಗೆ, ಕುಡಿಯಲು ಸೇರಿದಂತೆ ಎಲ್ಲದಕ್ಕೂ ಬಳಸುತ್ತಿದ್ದೆವು. ಈ ಹೊಂಡವೇ ನಮಗೆ ನೀರಿನ ಮೂಲ ಮತ್ತು ಅದನ್ನೇ ನಾವು ಅವಲಂಬಿಸಿದ್ದೆವು, ಸಮುದ್ರ ಕೊರೆತ ಪ್ರಾರಂಭವಾದಾಗಿನಿಂದ, ಹೊಂಡದ ಸ್ಥಿತಿಯು ಹದಗೆಟ್ಟು ಈ ಸ್ಥಿತಿ ನಿರ್ಮಾಣವಾಗಿದೆ,’ ಎಂದು ಆಂಟನಿ ಕುಟ್ಟಪಸೆರಾ ಹೇಳುತ್ತಾರೆ.

ಇದನ್ನೂ ಓದಿ: ವಿದೇಶದಲ್ಲಿ ‘ಆರ್​ಆರ್​ಆರ್​’ ಚಿತ್ರಕ್ಕಿಂತಲೂ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡ ‘ಸಲಾರ್​’; ಎಷ್ಟಾಯಿತು ಬಿಸ್ನೆಸ್​?

ಹವಾಮಾನ ವೈಪರೀತ್ಯದಿಂದ ಹೆಚ್ಚುತ್ತಿರುವ ಸಮುದ್ರ ಮಟ್ಟವು ಪ್ರಪಂಚದಾದ್ಯಂತದ ಅನೇಕ ಕರಾವಳಿ ಪ್ರದೇಶಗಳಲ್ಲಿನ ಸಿಹಿನೀರು ಸರಬರಾಜನ್ನು ವ್ಯವಸ್ಥೆಯಲ್ಲಿ ಉಪ್ಪು ನೀರು ಪ್ರವೇಶಿಸಲು ಕಾರಣವಾಗಿದೆ. ವಿಜ್ಞಾನಿಗಳ ಪ್ರಕಾರ, ಕೊಚ್ಚಿಯ ಚೆಲನಂವರೆಗಿನ ಎಂಟು ಚದರ ಕಿಲೋಮೀಟರ್ ಪ್ರದೇಶ ತೀವ್ರ ಪ್ರಭಾವಕ್ಕೊಳಗಾಗಿದೆ.

‘ಈಗಿನ ಅಧ್ಯಯನವನ್ನು ಕಳೆದ 15-20 ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ, ಲವಣಾಂಶದಲ್ಲಿ ಅಭೂತಪೂರ್ವ ಹೆಚ್ಚಳ ಕಂಡುಬಂದಿದೆ. ಈ ಬೆಳವಣಿಗೆಯು ಜಾಗತಿಕ ಸಾಗರ ವಿದ್ಯಮಾನಗಳೊಂದಿಗೆ ಸಂಬಂಧ ಹೊಂದಿದೆ,’ ಎಂದು ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಮರೀನ್ ಮರೀನ್ ಸೈನ್ಸಸ್ ವಿಭಾಗದ ಡೀನ್ ಆಗಿರುವ ಬಿಜೋಯ್ ನಂದನ್ ಹೇಳುತ್ತಾರೆ.

ಶುದ್ಧ ನೀರು ಸರಬರಾಜು ಮಾಡುವ ಕೆಲ ಪೈಪ್‌ಗಳು ಒಡೆದು ಹೋಗಿರುವುದರಿಂದ ಕಾಮಗಾರಿಗಳು ಅಧ್ವಾನಕ್ಕೆ ತಿರುಗಿವೆ.

‘ಪಾರಂಪರಿಕವಾಗಿ ಜನ ಬೋರ್‌ವೆಲ್‌ ಮತ್ತು ಹೊಂಡಗಳನ್ನು ಹೊಂದಿದ್ದರು. ಈಗ ಸಮುದ್ರದ ಕೊರೆತದಿಂದಾಗಿ ಭಯಂಕರ ಉಪ್ಪಿನಾಂಶದ ನೀರು ಅವುಗಳಲ್ಲಿ ಸೇರಿಬಿಟ್ಟಿದೆ. ಈ ನೀರು ಅದೆಷ್ಟು ಕೊಳಕಾಗಿದೆಯೆಂದರೆ ಅದನ್ನು ಯಾವುದಕ್ಕೂ ಬಳಸಲಾಗದು,’ ಸ್ಥಳೀಯ ಚರ್ಚ್ ಪಾದ್ರಿ ಫಾದರ್ ಜಾನ್ ಹೇಳುತ್ತಾರೆ.

ಇದನ್ನೂ ಓದಿ: ಈ ಶಾಲೆಯಲ್ಲಿ ಬೇಸಗೆ ರಜೆಯಲ್ಲಿ ಮಕ್ಕಳಿಗಲ್ಲ, ಪಾಲಕರಿಗೆ ಅಸೈನ್​ಮೆಂಟ್! ಮತ್ತೆ ವೈರಲ್ ಆಗ್ತಿದೆ ಹಳೆಯ ಸಂದೇಶ

ಹವಾಮಾನ ವೈಪರೀತ್ಯದಿಂದಾಗಿ, ಉಪ್ಪು ನೀರು ಪ್ರಪಂಚದಾದ್ಯಂತ ಅಂತರ್ಜಲ ನೀರಿನೊಂದಿಗೆ ಬೆರೆಯುತ್ತಿರುವುದು ಒಂದು ಪ್ರಮುಖ ಸಮಸ್ಯೆಯಾಗಿದೆ. ಶ್ರೀಮಂತ ದೇಶಗಳು ಸ್ಥಿತಿಯನ್ನು ಸುಲಭವಾಗಿ ಹಿಮ್ಮೆಟ್ಟಬಹುದು. ಹೆಚ್ಚುತ್ತಿರುವ ಸಮುದ್ರ ಮಟ್ಟ ಮತ್ತು ಅದರ ಬದಲಾಗುತ್ತಿರುವ ಮಾದರಿಗಳು, ಆಗಾಗ್ಗೆ ಏಳುವ ಬಿರುಗಾಳಿ ಚಂಡಮಾರುಗಳು ಮತ್ತು ಬಾವಿಗಳ ಅತಿಯಾದ ಬಳಕೆಯಿಂದಾಗಿ ಕೊಚ್ಚಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಹೊಂಡಗಳ ನೀರು ವಿಪರೀತ ಲವಣಯುಕ್ತವಾಗುತ್ತಿದೆ.

ಮಾನವನ ಬದುಕಿಗೆ ಉಪ್ಪು ಮತ್ತು ನೀರು ಎರಡೂ ಬಹಳ ಮುಖ್ಯ. ಆದರೆ ಯಾವಾಗ ಇವೆರಡೂ ಒಂದುಗೂಡತ್ತವೆಯೋ ಅವು ನಿಷ್ಪ್ರಯೋಜಕವಾಗಿ ಕಾಣತೊಡಗುತ್ತವೆ. ಮುಂಬರುವ ಬೇಸಿಗೆಯಲ್ಲಿ ಶುದ್ಧ ನೀರಿಲ್ಲದೆ ಬದುಕುವುದು ಹೇಗೆ ಎಂಬ ಆತಂಕದಲ್ಲಿರುವ ಜನ ಅದಕ್ಕಾಗಿ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ