Health Tips: ಪ್ರತಿದಿನ ಬೆಳಗ್ಗೆ ಎದ್ದಾಗ ನಿಮ್ಮ ಮುಖ ಊದಿಕೊಂಡಂತೆ ಇರುತ್ತಾ? ಅದರ ಹಿಂದೆ ಅಚ್ಚರಿ ಕಾರಣಗಳಿವೆ
ನೀವು ದಿನನಿತ್ಯ ಬೆಳಗ್ಗೆ ಎದ್ದೇಳುವಾಗ ನಿಮ್ಮ ಮುಖ ಉಬ್ಬಿಕೊಂಡಂತೆ ಇದ್ದರೆ, ಮೊದಲು ಈ ಸಮಸ್ಯೆಯ ಮೂಲವನ್ನು ತಿಳಿಯಬೇಕಾಗುತ್ತದೆ. ಈ ಸಮಸ್ಯೆಯ ಕೆಲವು ಸಂಭವನೀಯ ಕಾರಣಗಳು ಇಲ್ಲಿವೆ.
ಉಬ್ಬಿಕೊಂಡಂತಹ ಮುಖ ಲಕ್ಷಣವು ಜೀವನಶೈಲಿಯ ಸಮಸ್ಯೆಯನ್ನು ಸೂಚಿಸುತ್ತದೆ. ಉಪ್ಪಿನಾಂಶ ಇರುವ ಅಥವಾ ಹುರಿದ ಆಹಾರಗಳನ್ನು ದಿನವಿಡೀ ಅಥವಾ ತಡರಾತ್ರಿಯಲ್ಲಿ ಸೇವನೆ ಮಾಡುವುದರಿಂದ ಮುಖ ಉಬ್ಬಿಕೊಂಡಂತಾಗುತ್ತದೆ. ನೀವು ಪ್ರತಿದಿನ ಬೆಳಗ್ಗೆ ಎದ್ದೇಳುವಾಗ ಊದಿಕೊಂಡ ಮುಖವನ್ನು ಹೊಂದಿರುತ್ತೀರಾ, ಹಾಗಾದರೆ ಇದು ಕೆಲವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿರಬಹುದು. ಅತಿಯಾದ ಒತ್ತಡ, ಕರುಳಿನ ಸಮಸ್ಯೆಗಳು, ಯಕೃತ್ತಿನ ಸಮಸ್ಯೆಗಳು ಮುಖದ ಉಬ್ಬುವಿಕೆಗೆ ಕಾರಣವಾಗುತ್ತದೆ. ಜೊತೆಗೆ ಅಲರ್ಜಿಗಳು, ಮದ್ಯಸೇವನೆ, ಅಳುವುದು ಅಥವಾ ನಿದ್ರೆಯ ಕೊರತೆಯಿಂದಲೂ ಮುಖವು ಉಬ್ಬಿಕೊಳ್ಳುತ್ತದೆ. ನಿಮ್ಮ ದೇಹವನ್ನು ಚೆನ್ನಾಗಿ ಹೈಡ್ರೀಕರಿಸಿಕೊಳ್ಳದಿದ್ದರೆ ಅಥವಾ ನಿಮ್ಮ ಹಾರ್ಮೋನುಗಳು ದುರ್ಬಲವಾಗಿದ್ದರೆ, ಇವುಗಳು ಮುಖದಲ್ಲಿನ ಊತಕ್ಕೆ ಕಾರಣವಾಗಬಹುದು.
ಪ್ರತಿದಿನವೂ ಉಬ್ಬಿದ ಮುಖದೊಂದಿಗೆ ಏಳುವುದು ಸಾಮಾನ್ಯವಾದ ವಿಚಾರವಲ್ಲ. ನೀವು ಊಟ ಮಾಡಿದ ನಂತರ ಉಬ್ಬುವಿಕೆ ಸಾಮಾನ್ಯವಾಗಿದೆ. ನೀವು ಒಮ್ಮೆಲೆ ಹೆಚ್ಚಿನ ಫೈಬರ್‌ನ್ನು ಸೇವಿಸಿದರೆ ಅದು ನಿಮ್ಮ ಕರಳನ್ನು ಪ್ರಚೋದಿಸುತ್ತದೆ. ಮತ್ತು ಇದು ನೀವು ಬೆಳಗ್ಗೆ ಎದ್ದಾಗ ಮುಖ ಊದಿಕೊಳ್ಳಲು ಕಾರಣವಾಗುತ್ತದೆ. ಅದು ಸಾಮಾನ್ಯವಲ್ಲ, ಕೆಲವೊಂದು ಕಾರಣಗಳಿಂದ ಉಂಟಾಗುತ್ತದೆ” ಎಂದು ಪೌಷ್ಟಿತಜ್ಞೆ ರಾಶಿ ಚೌಧರಿ ಹೇಳಿದ್ದಾರೆ.
ಒತ್ತಡ: ನೀವು ನಿಮ್ಮೊಳಗೆ ಆತಂಕದ ಭಾವನೆಯನ್ನು ಹಿಡಿದಿಟ್ಟುಕೊಂಡಾಗ ಮತ್ತು ನಿರಂತರವಾದ ಒತ್ತಡಕ್ಕೆ ಒಳಗಾದಾಗ, ಅದು ನಿಮ್ಮ ಕರುಳಿನ ಮೇಲೆ ಪರಿಣಾಮ ಬೀರಬಹುದು. ಇದು ನಿಮ್ಮ ಮುಖವು ಬೆಳಗ್ಗೆ ಉಬ್ಬಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ನಿಮ್ಮ ಮೂತ್ರಜನಕಾಂಗದ ಗ್ರಂಥಿಗಳು ಒತ್ತಡದ ಹಾರ್ಮೋನ್ ಆದ ಕಾರ್ಟಿಸೋಲ್‌ನ್ನು ಹೆಚ್ಚು ಕಾಲ ಉತ್ಪಾದಿಸಿದಾಗ ಅದು ಸಂಭವಿಸುತ್ತದೆ.
ಇದನ್ನೂ ಓದಿ: Health Tips for Women: 40 ವರ್ಷ ದಾಟಿದ ಮಹಿಳೆಯರು ತಿನ್ನಲೇಬೇಕಾದ 8 ಆಹಾರಗಳಿವು
ಕರುಳು: ಕರುಳಿನ ಸಮಸ್ಯೆಯಿಂದಲೂ ಮುಖವು ಊದಿಕೊಳ್ಳುವ ಸಾಧ್ಯತೆ ಇರುತ್ತದೆ. ಮಲಬದ್ಧತೆ, ಜೀರ್ಣಕ್ರಿಯೆಯ ಸಮಸ್ಯೆಗಳು ಸಾಮಾನ್ಯವಾಗಿರುತ್ತದೆ. ನಿಮ್ಮ ಕರುಳಿನಲ್ಲಿ ಉರಿಯೂತವನ್ನು ಉಂಟುಮಾಡುವ ಆಹಾರವನ್ನು ನೀವು ಸೇವಿಸಿದಾಗ ಅದು ನಿಮ್ಮ ಮುಖದ ಮೇಲೆ ಕಾಣಿಸಿಕೊಳ್ಳುವ ದ್ರವದ ಧಾರಣಕ್ಕೆ ಕಾರಣವಾಗುತ್ತದೆ. ಈ ಕರುಳು ಸಂಬಂಧಿ ಸಮಸ್ಯೆಗಳು ಬೆಳಗ್ಗೆ ಎದ್ದಾಗ ಮುಖ ಉಬ್ಬಿಕೊಳ್ಳಲು ಪ್ರಮುಖ ಕಾರಣವಾಗಿದೆ.
ದಟ್ಟಣೆಯ ಯಕೃತ್ತು: ದುಗ್ದರಸ ವ್ಯವಸ್ಥೆಯು ನಿಮ್ಮ ದೇಹದಲ್ಲಿನ ಕೊಳಕು ವ್ಯವಸ್ಥೆಯಂತೆ ಕಾರ್ಯವನ್ನು ನಿರ್ವಹಿಸುತ್ತದೆ. ಇದು ನಿಮ್ಮ ಅಂಗಾಂಶಗಳಿಂದ ತ್ಯಾಜ್ಯ ಮತ್ತು ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಮ್ಮ ದುಗ್ದರಸ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವಲ್ಲಿ ಯಕೃತ್ತು ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಇದು ನಿಮ್ಮ ರಕ್ತದಿಂದ ವಿಷ ಮತ್ತು ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಆದರೆ ನಿಮ್ಮ ಯಕೃತ್ತು ದಟ್ಟಣೆಯಿಂದ ಕೂಡಿದ್ದರೆ, ಅದು ನಿಮ್ಮ ದೇಹದಲ್ಲಿ ವಿಷಕಾರಿ ಅಂಶಗಳ ಸಂಗ್ರಹಣೆಗೆ ಕಾರಣವಾಗಬಹುದು. ಇದು ಉರಿಯೂತವನ್ನು ಉಂಟುಮಾಡಬಹುದು. ಹಾಗೂ ಇದು ಬೆಳಗ್ಗೆ ಎದ್ದಾಗ ಮುಖ ಉಬ್ಬುಕೊಳ್ಳಲು ಕಾರಣವಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ