PCOD Diet: ಪಿಸಿಓಡಿ ಸಮಸ್ಯೆ ನಿರ್ವಹಣೆಗೆ ನೀವು ತಪ್ಪಿಸಬೇಕಾದ ಆಹಾರಗಳು

ಪಿಸಿಓಡಿ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಉತ್ತಮ ಆರೋಗ್ಯವನ್ನು ಪಡೆಯಲು ಈ ಮೂರು ನಿರ್ದಿಷ್ಟ ಆಹಾರಗಳನ್ನು ಸೇವನೆ ಮಾಡದೆ ಆದಷ್ಟು ದೂರವಿರಬೇಕಾಗುತ್ತದೆ.

PCOD Diet: ಪಿಸಿಓಡಿ ಸಮಸ್ಯೆ ನಿರ್ವಹಣೆಗೆ ನೀವು ತಪ್ಪಿಸಬೇಕಾದ ಆಹಾರಗಳು
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Mar 31, 2023 | 7:04 AM

ಪ್ರಪಂಚದಾತ್ಯಂತ ಲಕ್ಷಾಂತರ ಮಹಿಳೆಯರು PCOD (ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಅನಿಯಮಿತ ಮುಟ್ಟು, ಮೊಡವೆಗಳು, ತೂಕ ಹೆಚ್ಚಾಗುವುದು ಮತ್ತು ಬಂಜೆತನವನ್ನು ಒಳಗೊಂಡತೆ ಅನೇಕ ವ್ಯಾಪಕ ರೋಗಲಕ್ಷಣವನ್ನು ಉಂಟು ಮಾಡಬಹುದು. ಪಿಸಿಓಡಿಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಮೂಲಕ ಈ ರೋಗವನ್ನು ನಿರ್ವಹಿಸಬಹುದು ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ.

ಮಹಿಳೆಯರಲ್ಲಿ ಪಿಸಿಓಡಿ ಸಾಮಾನ್ಯ ರೋಗಲಕ್ಷಣಗಳಲ್ಲಿ ಒಂದಾಗಿದೆ. ಪಿಸಿಓಡಿ ಕಾಯಿಲೆಯು ಆಂಡ್ರೋಜೆನ್, ಇನ್ಸುಲಿನ್ ಮತ್ತು ಪ್ರೊಜೆಸ್ಟರಾನ್ ಎಂಬ ಮೂರು ಹಾರ್ಮೋನ್‌ಗಳ ಅಸಮತೋಲನದ ಕಾರಣದಿಂದ ಉಂಟಾಗುತ್ತದೆ. ಈ ಮೂರು ಹಾರ್ಮೋನುಗಳು ಇತರ ಹಾರ್ಮೋನುಗಳ ಜೊತೆ ಸೇರಿ, ಕರುಳಿನ ಮೈಕ್ರೋಬಯೋಟಾದೊಂದಿಗೆ ಏಕರೂಪವಾಗಿ ಕಾರ್ಯನಿರ್ವಹಿಸುತ್ತವೆ. ಹಾಗೂ ಮಹಿಳೆಯ ಜೀವನದುದ್ದಕ್ಕೂ ಸಂತಾನೋತ್ಪತ್ತಿ ಅಂತಃಸ್ರಾವಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕರುಳಿನ ಸೂಕ್ಷ್ಮಜೀವಿಗಳಲ್ಲಿನ ಅಸಮತೋಲನವು ಈ ಹಾರ್ಮೋನುಗಳ ನಡುವೆ ಏರಿಳಿತವನ್ನು ಉಂಟುಮಾಡುತ್ತದೆ.

ಇದು ಗರ್ಭಾವಸ್ಥೆಯ ತೊಡಕುಗಳು, ಪಿಸಿಓಡಿ, ಎಂಡೋಮೆಟ್ರಿಯೊಸಿಸ್ ಮತ್ತು ಇತರ ಅನೇಕ ಕಾಯಿಲೆಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಸರಿಯಾದ ರೋಗನಿರ್ಣಯವನ್ನು ತೆಗೆದುಕೊಳ್ಳುವ ಮೂಲಕ ಈ ಪಿಸಿಓಡಿ ಸಮಸ್ಯೆಯನ್ನು ಗುಣಪಡಿಸಬಹುದು ಎಂದು TAN|365ನ ಸಂಸ್ಥಾಪಕಿ ಹಾಗೂ ನ್ಯೂಟ್ರೀಷನ್ ಕೋಚ್ ತನಿಶಾ ಬಾವಾ ಹೇಳಿದ್ದಾರೆ. ಹಾಗೂ ಪಿಸಿಓಡಿ ಸಮಸ್ಯೆಗೆ ರೋಗನಿರ್ಣಯವನ್ನು ಮಾಡುವಾಗ, ತಪ್ಪಿಸಬೇಕಾದ ಮೂರು ಆಹಾರಗಳ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Loneliness Health Issues: ಒಂಟಿತನದಿಂದ ಈ 5 ಗಂಭೀರ ಕಾಯಿಲೆ ಬರಬಹುದು

ಸಂಸ್ಕರಿಸಿದ ಕಾರ್ಬ್ಸ್ ಆಹಾರಗಳು: ನೀವು ಪಿಸಿಓಡಿ ಸಮಸ್ಯೆಗೆ ರೋಗನಿರ್ಣಯವನ್ನು ತೆಗೆದುಕೊಳ್ಳುತ್ತಿರುವ ಸಮಯದಲ್ಲಿ ಅಸಮತೋಲಿತ ಗ್ಲೂಕೋಸ್ ಮಟ್ಟವನ್ನು ಹೊಂದಿರುವುದು ಸಾಮಾನ್ಯವಾಗಿರುತ್ತದೆ. ಆದ್ದರಿಂದ ಗೋಧಿ ಹಿಟ್ಟು ಹಾಗೂ ಇತರ ಧಾನ್ಯಗಳ ಹಿಟ್ಟಿನಂತಹ ಸಂಸ್ಕರಿಸಿದ ಧಾನ್ಯಗಳ ಸೇವನೆಯು ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಆದ್ದರಿಂದ ಇಂತಹ ಆಹಾರಗಳ ಸೇವನೆಯನ್ನು ತಪ್ಪಿಸಬೇಕು. ಮತ್ತು ಇದು ದೇಹವು ಇನ್ಸುಲಿನ್‌ನ್ನು ಉತ್ಪಾದಿಸಲು ಕಾರಣವಾಗಬಹುದು. ಹಾಗೂ ಇದು ದೇಹಕ್ಕೆ ಪ್ರತಿರೋಧಕವನ್ನು ಅಭಿವೃದ್ಧಿಪಡಿಸುವಲ್ಲಿ ಕ್ರಮೇಣ ಸಹಾಯ ಮಾಡುತ್ತದೆ.

ಸಕ್ಕರೆಗಳು: ನೀವು ಪಿಸಿಓಡಿ ಸಮಸ್ಯೆಯಿಂದ ಬಳಲುತ್ತಿದ್ದೀರಾ ಎಂದಾದರೆ, ಯಾವುದೇ ರೂಪದಲ್ಲಿರುವ ಸಕ್ಕರೆಯ ಅಂಶವನ್ನು ಸೇವನೆ ಮಾಡಬೇಡಿ. ಇದರ ಸೇವನೆಯು ಇನ್ಸುಲಿನ್ ಮಟ್ಟದಲ್ಲಿ ಸ್ಟೆಕ್ ಜೊತೆಗೆ, ನಿಮ್ಮ ರಕ್ತದೊತ್ತಡ ಮತ್ತು ಟೈಗ್ಲಿಸರೈಡ್‌ಗಳು ಸಹ ಹೆಚ್ಚಾಗುತ್ತದೆ. ಇದು ಸಾಮಾನ್ಯವಾಗಿ ಆಕ್ಸಿಡೇಟಿವ್ ಒತ್ತಡ, ನಿದ್ರೆಯ ಸಮಸ್ಯೆ, ಉರಿಯೂತದ ಸಮಸ್ಯೆ ಹಾಗೂ ವೇಗವಾಗಿ ವಯಸ್ಸಾದಂತೆ ಮಾಡುವುದು ಹಾಗೂ ಇನ್ನಿತರ ರೋಗಲಕ್ಷಣಗಳನ್ನು ಉಂಟುಮಾಡಬಹುದು.

ಸೋಯಾ: ಸೋಯಾ ಮಾಂಸಕ್ಕೆ ಉತ್ತಮ ಪರ್ಯಾಯವಾಗಿದ್ದರೂ, ಇದು ತಳೀಯವಾಗಿ ಮಾರ್ಪಡಿಸಿದ ಆಹಾರವಾಗಿದೆ. ಇದು ಫೈಟೊಈಸ್ಟೊಜೆನ್‌ಗಳನ್ನು ಹೊಂದಿರುತ್ತದೆ. ಇದು ನಿಮ್ಮ ದೇಹದ ಹಾರ್ಮೋನುಗಳ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ