AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health : 40 ವರ್ಷದ ದಾಟಿದ ಮಹಿಳೆಯರಲ್ಲಿ ಕಂಡುಬರುವ ದೈಹಿಕ, ಮಾನಸಿಕ ಬದಲಾವಣೆ ಯಾವುದು? ಲಕ್ಷಣಗಳೇನು ?

40 ವರ್ಷದ ದಾಟಿದ ಬಳಿಕ ಹಾರ್ಮೋನುಗಳ ಕಾರಣದಿಂದಾಗಿ ಮಹಿಳೆಯರು ಜೈವಿಕವಾಗಿ ಮತ್ತು ಮಾನಸಿಕವಾಗಿ ಅಸಂಖ್ಯಾತ ಬದಲಾವಣೆಗಳನ್ನು ಕಾಣುತ್ತಾರೆ. ಅದು ಸಾಮಾನ್ಯವಾಗಿದ್ದರೂ ಅದನ್ನು ನಿರ್ಲಕ್ಷಿಸುವಂತಿಲ್ಲ. ಅದ್ಕಕೆ ಚಿಕಿತ್ಸೆ ಅನಿವಾರ್ಯ. ಹಾಗಾಗಿ ಆ ಸಮಸ್ಯೆ ಬಗ್ಗೆ ತಿಳಿದುಕೊಳ್ಳೋಣ.

Women Health : 40 ವರ್ಷದ ದಾಟಿದ ಮಹಿಳೆಯರಲ್ಲಿ ಕಂಡುಬರುವ ದೈಹಿಕ, ಮಾನಸಿಕ ಬದಲಾವಣೆ ಯಾವುದು? ಲಕ್ಷಣಗಳೇನು ?
ಸಾಂಧರ್ಬಿಕ ಚಿತ್ರ
TV9 Web
| Edited By: |

Updated on: Mar 30, 2023 | 7:30 PM

Share

ಬಾಲ್ಯದಿಂದ ಆರಂಭಿಸಿ ಹದಿಹರಯ, ಯೌವ್ವನದ ಮೂಲಕ ವೃದ್ಧಾಪ್ಯದ ವರೆಗೂ ಬದುಕಿನ ಎಲ್ಲ ಹಂತಗಳಲ್ಲಿಯೂ ಮಾನಸಿಕ ಆರೋಗ್ಯವು ಬಹಳ ಮುಖ್ಯವಾಗಿದೆ. ಅದರಲ್ಲಿಯೂ 40 ನೇ ವಯಸ್ಸಿನಲ್ಲಿ ಮಹಿಳೆಯರ ಜೀವನದ ಮಹತ್ವದ ಮೈಲಿಗಲ್ಲು ಎಂದರೆ ತಪ್ಪಾಗಲಾರದು. ಮಹಿಳೆಯರಿಗೆ ವಯಸ್ಸಾದಂತೆ, ಅವರು ಜೈವಿಕವಾಗಿ ಮತ್ತು ಮಾನಸಿಕವಾಗಿ ಅಸಂಖ್ಯಾತ ಬದಲಾವಣೆಗಳನ್ನು ಕಾಣುತ್ತಾರೆ. ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ. ಇದು ಸಾಮಾನ್ಯ. ಆದರೆ ಅದನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದು ಬಹಳ ಮುಖ್ಯವಾಗಿದೆ.

ಮಹಿಳೆಯರನ್ನು ಭಾದಿಸುವ ಕೆಲವು ಅನಾರೋಗ್ಯ ಸಮಸ್ಯೆಗಳು:

ಮಹಿಳೆಯರನ್ನು ವಿಶೇಷವಾಗಿ ಭಾದಿಸುವ ಕೆಲವು ಅನಾರೋಗ್ಯ ಸಮಸ್ಯೆಗಳಿವೆ. ಉದಾಹರಣೆಗೆ, ಹಾರ್ಮೋನ್‌ ಬದಲಾವಣೆಯ ಸಮಯದಲ್ಲಿ ಕೆಲವು ಮಹಿಳೆಯರು ಪ್ರಸವೋತ್ತರ ಖನ್ನತೆ, ಋತುಚಕ್ರಪೂರ್ವ ಡಿನ್ಪೋರಿಕ್‌ ಡಿಸಾರ್ಡರ್‌ ಮತ್ತು ಪೆರಿಮೆನೊಪಾಸ್‌ ಸಂಬಂಧಿ ಖನ್ನತೆ ಯಂತಹ ಮಾನಸಿಕ ತೊಂದರೆಗಳ ಲಕ್ಷಣಗಳನ್ನು ಅನುಭವಿಸಬಹುದು. ಅದರ ಹೊರತಾಗಿ ಮಹಿಳೆಯರು ಕೆಲವು ಸಾಮಾನ್ಯ ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಾರೆ ಅವುಗಳನ್ನು ಈ ಕೆಳಗೆ ವಿವರಿಸಲಾಗಿದೆ.

Brain Fog(ಮೆದುಳಿನ ಮಂಜು):

ದೈನಂದಿನ ಜೀವನದಲ್ಲಿ ಸಾಮಾನ್ಯ ವಿಷಯಗಳನ್ನು ಮರೆಯಲು ಪ್ರಾರಂಭಿಸಿದರೆ ಅಥವಾ ಅವುಗಳನ್ನು ಮರುಕಳಿಸಲು ಕಷ್ಟವಾಗಿದ್ದರೆ, ಅದು ಬ್ರೈನ್ ಫಾಗ್‌ನ ಲಕ್ಷಣ. ಹೇಗೆ ನಿಮಗೆ ಕಂಡುಬಂದಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ ಮತ್ತು ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ತೆಗೆದುಕೊಳ್ಳಿ.

Leaky Bladder(ಮೂತ್ರಕೋಶ ಸೋರುವಿಕೆ) :

ತಡೆಯಲಾಗದ ಮೂತ್ರಶಂಕೆಯು ಒಂದು ಅನಾರೋಗ್ಯ ಲಕ್ಷಣವಾಗಿದ್ದು, ಮೂತ್ರ ವಿಸರ್ಜಿಸಬೇಕು ಎಂಬ ಒತ್ತಡ ತಡೆಯಲಾಗದಷ್ಟು ಬಲವಾಗಿರುತ್ತದೆಯಲ್ಲದೆ ಶೌಚಾಲಯಕ್ಕೆ ಹೋಗುವುದಕ್ಕೂ ಮುನ್ನವೇ ಮೂತ್ರ ಸೋರಿಬಿಡುತ್ತದೆ. ಮೂತ್ರಕೋಶದ ಅಕಾಲಿಕವಾದ ಈ ಸಂಕುಚನವು ಮೂತ್ರಕೋಶದ ಸೋಂಕು/ ಉರಿಯೂತದಿಂದ ಉಂಟಾಗಬಹುದಾಗಿದೆ. ಮೂತ್ರಕೋಶವು ಕಲ್ಲುಗಳನ್ನು ಹೊಂದಿದ್ದಾಗ ಅಥವಾ ಕ್ಯಾನ್ಸರ್‌ ಸ್ವರೂಪದ ಬೆಳವಣಿಗೆಯನ್ನು ಹೊಂದಿದ್ದಾಗ ಈ ತೊಂದರೆ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ನರಸಂಬಂಧಿ ಕಾರಣವೂ ಇರಬಹುದು. ಈ ರೀತಿಯ ಕಂಡುಬಂದಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: ದೇಹದ ನೋವು, ಒತ್ತಡವನ್ನು ನಿವಾರಿಸಲು ಈ ಆಯುರ್ವೇದ ಮನೆಮದ್ದುಗಳು

Hair Loss (ಕೂದಲು ಉದುರುವಿಕೆ):

ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡದಿಂದ ಔಷಧಿಗಳವರೆಗೆ ವಿವಿಧ ಅಂಶಗಳಿಂದ ಅವು ಉಂಟಾಗಬಹುದು. ಗರ್ಭಾವಸ್ಥೆಯ ನಂತರ ಕೂದಲು ಉದುರುವುದನ್ನು ಕಾಣಬಹುದು. ಹಾರ್ಮೋನ್ ಬದಲಾವಣೆ, ಋತುಬಂಧ ಸಮೀಪಿಸುತ್ತಿದ್ದಂತೆ ಕೂದಲು ಉದುರುವಿಕೆ ಕಂಡುಬರಬಹುದು.

Facial Hair (ಮುಖದಲ್ಲಿ ಕೂದಲು ಕಂಡುಬರುವುದು ):

ಮಹಿಳೆಯರಲ್ಲಿ ವಯಸ್ಸಾದಂತೆ, ಈಸ್ಟ್ರೊಜೆನ್ ಮಟ್ಟವು ಕಡಿಮೆಯಾಗುತ್ತದೆ ಮತ್ತು ಟೆಸ್ಟೋಸ್ಟೆರಾನ್ ಮಟ್ಟವು ಹೆಚ್ಚಾಗುತ್ತದೆ, ಇದು ಮುಖ, ಗಲ್ಲದ, ಗೆಣ್ಣುಗಳು ಮತ್ತು ಕಾಲ್ಬೆರಳುಗಳು ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಕೂದಲು ಬೆಳವಣಿಗೆಗೆ ಕಾರಣವಾಗಬಹುದು.

Grey Hair (ಬೂದು ಬಣ್ಣದ ಕೂದಲು):

ಮಹಿಳೆಯರು 40 ವರ್ಷ ದಾಟಿದಾಗ, ಅಕ್ಷರಶಃ ಎಲ್ಲೆಡೆ ಬೂದು ಕೂದಲು ಕಾಣಿಸಿಕೊಳ್ಳುವುದನ್ನು ಕಾಣಬಹುದು. ಇದು ಸಾಮಾನ್ಯವಾಗಿದ್ದು ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಕಿಲ್ಲ. ಇದಕ್ಕೆ ಅನೇಕ ರೀತಿಯ ಚಿಕಿತ್ಸೆ ಇದ್ದು ವೈದ್ಯರನ್ನು ಸಂಪರ್ಕಿಸಿ ತಿಳಿದುಕೊಳ್ಳಬಹುದು.

ಮೇಲಿನ ಯಾವುದೇ ರೀತಿಯಲ್ಲಿ ಸಮಸ್ಯೆ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ ಅದಕ್ಕೆ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳಿ ಹಾಗೂ ಸಮಸ್ಯೆಗಳನ್ನು ಸುಲಭವಾಗಿ ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ.

ಲೇಖನ: ಪ್ರೀತಿ ಭಟ್​, ಗುಣವಂತೆ

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ