ಡಿಸೆಂಬರ್ 15ರೊಳಗೆ ವಿಮಾನ ಸಂಚಾರ ಸಹಜ ಸ್ಥಿತಿಗೆ ಬರಲಿದೆ; ತಪ್ಪೊಪ್ಪಿಕೊಂಡ ಇಂಡಿಗೋ ಸಿಇಒ
ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನಗಳ ಸಮಸ್ಯೆಯನ್ನು ಇಂಡಿಗೋ ಸಿಇಒ ಒಪ್ಪಿಕೊಂಡಿದ್ದಾರೆ. ಇಂಡಿಗೋ ಏರ್ಲೈನ್ಸ್ ಸಿಇಒ ಪೀಟರ್ ಎಲ್ಬರ್ಸ್ ಹೇಳಿಕೆ ನೀಡಿದ್ದು, ಸೋಮವಾರದೊಳಗೆ ಈ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆಯಿದೆ. ಇದೆಲ್ಲ ಸರಿಯಾಗಲು ಇನ್ನೂ 10 ದಿನ ಬೇಕಾಗಬಹುದು. ಹಂತ ಹಂತವಾಗಿ ಸಮಸ್ಯೆ ಬಗೆಹರಿಸುವುದಾಗಿ ಇಂಡಿಗೋ ಏರ್ಲೈನ್ಸ್ ಸಿಇಒ ಪೀಟರ್ ಎಲ್ಬರ್ಸ್ ಹೇಳಿಕೆ ನೀಡಿದ್ದಾರೆ.
ನವದೆಹಲಿ, ಡಿಸೆಂಬರ್ 5: ವಿಮಾನಗಳು ರದ್ದಾಗಿದ್ದರಿಂದ ಪ್ರಯಾಣಿಕರಿಗೆ ತೀವ್ರವಾದ ತೊಂದರೆ ಆಗಿದ್ದಕ್ಕೆ ಇಂಡಿಗೋ (IndiGo) ಸಿಇಒ ಪೀಟರ್ ಎಲ್ಬರ್ಸ್ ಇಂದು ಸಂಜೆ ಸಾರ್ವಜನಿಕ ಕ್ಷಮೆಯಾಚಿಸಿದರು. ಇಂದು ಸಾವಿರಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಇಂದು ತನ್ನ ದೈನಂದಿನ ವಿಮಾನಗಳ “ಅರ್ಧಕ್ಕಿಂತ ಹೆಚ್ಚು” ವಿಮಾನಗಳನ್ನು ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್, ಶನಿವಾರ ಕೂಡ ಬಿಕ್ಕಟ್ಟು ಮುಂದುವರಿದರೂ, ಇಂಡಿಗೋದಿಂದ 1,000ಕ್ಕಿಂತ ಕಡಿಮೆ ವಿಮಾನಗಳನ್ನು ರದ್ದುಗೊಳಿಸಲಾಗುವುದು. ಡಿಸೆಂಬರ್ 15ರೊಳಗೆ ಎಲ್ಲ ವಿಮಾನಗಳು ಸಹಜ ಸ್ಥಿತಿಗೆ ಮರಳಲಿವೆ ಎಂದು ಅವರು ಭರವಸೆ ನೀಡಿದ್ದಾರೆ.
ಇಂಡಿಗೋ ಪ್ರತಿದಿನ ಸುಮಾರು 2,300 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸುತ್ತದೆ. ವಿಳಂಬ ಮತ್ತು ರದ್ದತಿಯಿಂದಾಗಿ ಉಂಟಾದ ಪ್ರಮುಖ ಅನಾನುಕೂಲತೆಗೆ ಕ್ಷಮೆಯಾಚಿಸುವ ಪೀಟರ್ ಎಲ್ಬರ್ಸ್, ವಿವಿಧ ಕಾರಣಗಳಿಂದ ಈ ಪರಿಸ್ಥಿತಿಯು ಉಂಟಾಗಿದೆ ಎಂದು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

