ಒಂದೇ ದಿನ ತಾಯಿ ಮಗ ಆತ್ಮಹತ್ಯೆ: ಆ ಮನೆ ಭಯಾನಕ ಕಥೆ ಬಿಚ್ಚಿಟ್ಟ ಸ್ಥಳೀಯರು
ವೈದ್ಯೆ (Doctor) ಮತ್ತು ಅವರ ಮಗ ಒಂದೇ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದ (Shivamogga) ಅಶ್ವಥ್ ನಗರ ಬಡಾವಣೆಯಲ್ಲಿ ನಡೆದಿದೆ.ನಗರದಲ್ಲಿ ತಾಯಿ ಮತ್ತು ಪ್ರಸೂತಿ ಆಸ್ಪತ್ರೆಯನ್ನು ನಡೆಸುತ್ತಿದ್ದ ಡಾ. ಜಯಶ್ರೀ (55) ಹಾಗೂ ಅವರ ಮಗ ಆಕಾಶ್ (34) ಆತ್ಮಹತ್ಯೆಗೆ ಶರಣಾದವರು. ವಿನೋಬನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿಕೊಂಡು, ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಶಿವಮೊಗ್ಗ, (ಡಿಸೆಂಬರ್ 05): ವೈದ್ಯೆ (Doctor) ಮತ್ತು ಅವರ ಮಗ ಒಂದೇ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದ (Shivamogga) ಅಶ್ವಥ್ ನಗರ ಬಡಾವಣೆಯಲ್ಲಿ ನಡೆದಿದೆ.ನಗರದಲ್ಲಿ ತಾಯಿ ಮತ್ತು ಪ್ರಸೂತಿ ಆಸ್ಪತ್ರೆಯನ್ನು ನಡೆಸುತ್ತಿದ್ದ ಡಾ. ಜಯಶ್ರೀ (55) ಹಾಗೂ ಅವರ ಮಗ ಆಕಾಶ್ (34) ಆತ್ಮಹತ್ಯೆಗೆ ಶರಣಾದವರು. ವಿನೋಬನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿಕೊಂಡು, ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಕಳೆದ ಮೂರು ವರ್ಷಗಳ ಹಿಂದೆ ಆಕಾಶ್ ಮೊದಲ ಹೆಂಡ್ತಿ ಸಹ ಇದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ 15 ತಿಂಗಳ ಹಿಂದೆ ಮೃತ ಆಕಾಶ್ ಎರಡನೇ ಮದ್ವೆಯಾಗಿದ್ದರು. ಆದ್ರೆ, ಇದೀಗ ಏಕಾಏಕಿ ಅಮ್ಮ -ಮಗ ಆತ್ಮಹತ್ಯೆಗೆ ಶರಣಾಗಿರುವುದು ಏರಿಯಾ ಜನರನ್ನು ಬೆಚ್ಚಿಬೀಳಿಸಿದೆ.

