Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಸರ್ಕಾರದ ಹೆಮ್ಮೆಯ ಯೋಜನೆ ಇಂದಿರಾ ಕ್ಯಾಂಟೀನ್ ಕೋಲಾರ ಪಟ್ಟಣದಲ್ಲಿ ಶೋಚನೀಯ ಸ್ಥಿತಿಯಲ್ಲಿದೆ!

ಕಾಂಗ್ರೆಸ್ ಸರ್ಕಾರದ ಹೆಮ್ಮೆಯ ಯೋಜನೆ ಇಂದಿರಾ ಕ್ಯಾಂಟೀನ್ ಕೋಲಾರ ಪಟ್ಟಣದಲ್ಲಿ ಶೋಚನೀಯ ಸ್ಥಿತಿಯಲ್ಲಿದೆ!

ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:Aug 22, 2023 | 11:27 AM

ಕೂಲಿ ಕಾರ್ಮಿಕರು, ಆಟೋ ರಿಕ್ಷಾ ಡ್ರೈವರ್ ಗಳು, ವಿದ್ಯಾರ್ಥಿಗಳು ತಿಂಡಿ ಊಟಕ್ಕಾಗಿ ಇಂದಿರಾ ಕ್ಯಾಂಟೀನ್ ಗಳನ್ನೇ ನೆಚ್ಚಿಕೊಂಡಿದ್ದರು. ಅದರೆ, 2019 ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಯೋಜನೆ ಬಗ್ಗೆ ಉದಾಸೀನ ಮನೋಭಾವ ತಳೆದಿದ್ದರಿಂದ ಕ್ಯಾಂಟೀನ್ ಗಳು ಹೆಚ್ಚು ಕಡಿಮೆ ಸ್ತಬ್ಧಗೊಂಡಿದ್ದವು.

ಕೋಲಾರ: ಇಂದಿರಾ ಕ್ಯಾಂಟೀನ್ ಗಳ (Indira Canteen) ಬಗ್ಗೆ ಕಾಂಗ್ರೆಸ್ ಸರಕಾರದ ಪ್ರತಿನಿಧಿಗಳು ಬಹಳ ಅಭಿಮಾಬ ಮತ್ತು ಹೆಮ್ಮೆಯಿಂದ ಮಾತಾಡುತ್ತಾರೆ, ಅದು ಸಹಜವೂ ಹೌದು ಮತ್ತು ಅವರು ಹೆಮ್ಮೆ ಪಟ್ಟುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಯಾಕೆಂದರೆ ಅದೊಂದು ಅದ್ಭುತವಾದ ಯೋಜನೆ. ಕೂಲಿ ಕಾರ್ಮಿಕರು, ಆಟೋ ರಿಕ್ಷಾ ಡ್ರೈವರ್ ಗಳು, ವಿದ್ಯಾರ್ಥಿಗಳು ತಿಂಡಿ ಊಟಕ್ಕಾಗಿ ಇಂದಿರಾ ಕ್ಯಾಂಟೀನ್ ಗಳನ್ನೇ ನೆಚ್ಚಿಕೊಂಡಿದ್ದರು. ಅದರೆ, 2019 ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ (BJP government) ಯೋಜನೆ ಬಗ್ಗೆ ಉದಾಸೀನ ಮನೋಭಾವ ತಳೆದಿದ್ದರಿಂದ ಕ್ಯಾಂಟೀನ್ ಗಳು ಹೆಚ್ಚು ಕಡಿಮೆ ಸ್ತಬ್ಧಗೊಂಡಿದ್ದವು. ಈಗ ಪುನಃ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಅವುಗಳಿಗೆ ಕಾಯಕಲ್ಪ ನೀಡಲು ಮುಂದಾಗಿದೆಯಾದರೂ ವಾಸ್ತವದಲ್ಲಿ ಸ್ಥಿತಿ ಗಂಭೀರವಾಗಿದೆ. ಕೋಲಾರ ನಗರದಲ್ಲಿರುವ ಈ ಕ್ಯಾಂಟೀನ್ ನೋಡಿ, ಗ್ರೈಂಡರ್ ಗಳು ಕೆಟ್ಟಿವೆ, ಇಡ್ಲಿ ಪಾತ್ರೆ ಮತ್ತು ಬೇರೆ ಅಡುಗೆ ಪಾತ್ರೆಗಳು ತುಕ್ಕು ಹಿಡಿದಿವೆ. ಕೇವಲ 3 ಜನ ಮಾತ್ರ ಇದರ ಉಸ್ತುವಾರಿಯಲ್ಲಿದ್ದಾರೆ. ಶೋಚನೀಯ ಸಂಗತಿಯೆಂದರೆ, ಇವರಿಗೆ ಇದುವರೆಗೆ ಸಂಬಳ ಸಿಕ್ಕಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ (Byrathi Suresh) ಇತ್ತ ಜರೂರು ಗಮನ ಹರಿಸಬೇಕಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published on: Aug 22, 2023 11:25 AM