ಇಂದು ಸಂಜೆ ಇಂಡೋ ಪಾಕ್​ ಹೈವೋಲ್ಟೇಜ್ ಮ್ಯಾಚ್​: ಭಾರತ ತಂಡ ಗೆಲ್ಲಲಿ ಎಂದು ದರ್ಗಾದಲ್ಲಿ ಪ್ರಾರ್ಥನೆ

ಇಂದು ಸಂಜೆ ಇಂಡೋ ಪಾಕ್​ ಹೈವೋಲ್ಟೇಜ್ ಮ್ಯಾಚ್​: ಭಾರತ ತಂಡ ಗೆಲ್ಲಲಿ ಎಂದು ದರ್ಗಾದಲ್ಲಿ ಪ್ರಾರ್ಥನೆ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Aug 28, 2022 | 2:44 PM

ಇಡಿ ದೇಶದ ಜನರೇಲ್ಲ ಇಂಡೋ ಪಾಕ್ ಮ್ಯಾಚ್​​ಗಾಗಿ ಕಾತುರದಿಂದ ನೋಡಲು ಕಾಯುತ್ತಿದ್ದಾರೆ. ಪ್ರತಿ ಬಾರಿ ಬಾರತ ಪಾಕ್ ವಿರುದ್ದ ಗೆಲ್ಲುತ್ತಲೆ ಬಂದಿದೆ.

ಹುಬ್ಬಳ್ಳಿ: ಇಂದು ಸಂಜೆ ಇಂಡೋ ಪಾಕ್ T20 ಮ್ಯಾಚ್​ ನಡೆಯಲಿದ್ದು, ಬದ್ಧವೈರಿ ರಾಷ್ಟ್ರದ ಜೊತೆ ಹೈವೋಲ್ಟೇಜ್ ಕ್ರಿಕೇಟ್ ಮ್ಯಾಚ್ ಹಿನ್ನಲೆ ಭಾರತ ಗೆಲ್ಲಬೇಕು ಎಂದು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿರುವಂತಹ ಘಟನೆ ಹಳೆ ಹುಬ್ಬಳ್ಳಿ ಫತೆಷಾ ವಲಿ ದರ್ಗಾದಲ್ಲಿ ನಡೆದಿದೆ. ದುಬೈನ್ ಅಂತರಾಷ್ಟ್ರೀಯ ಮೈದಾನದಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಟಿಪ್ಪು ಸುಲ್ತಾನ ಯುದ್ದಕ್ಕೂ ಮೊದಲು ಈ ದರ್ಗಾಕೆ ಪೂಜೆ ಸಲ್ಲಿಸಿ ಯುದ್ದ ಗೆದ್ದಿದ್ದ. ಟೀಮ್ ಇಂಡಿಯಾ ಗೆಲುವಿಗಾಗಿ ಫತೆಷಾ ಭಾಬಾಗೆ ಪೂಜೆ ಸಲ್ಲಿಸಿದ್ದು, ಹುಬ್ಬಳ್ಳಿಯ ಮುಂಸ್ಲಿಂ ಭಾಂದವರಿಂದ ಪ್ರಾರ್ಥನೆ ಮಾಡಲಾಗಿದೆ. ರಾಷ್ಟ್ರ ಧ್ವಜ ಹಿಡಿದು ಭಾರತ ಟೀಂ ಗೆಲ್ಲಲೇ ಬೇಕೆಂದು ಪ್ರಾರ್ಥನೆ ಪೂಜೆ ಸಲ್ಲಿಕೆ ಮಾಡಿದ್ದಾರೆ. ಇಡಿ ದೇಶದ ಜನರೇಲ್ಲ ಇಂಡೋ ಪಾಕ್ ಮ್ಯಾಚ್​​ಗಾಗಿ ಕಾತುರದಿಂದ ನೋಡಲು ಕಾಯುತ್ತಿದ್ದಾರೆ. ಪ್ರತಿ ಭಾರಿ ಬಾರತ ಪಾಕ್ ವಿರುದ್ದ ಗೆಲ್ಲುತ್ತಲೆ ಬಂದಿದೆ. ಕಳೆದ ಭಾರಿ ನಡೆದ ಮ್ಯಾಚ್​ನಲ್ಲಿ ಸೋಲು ಕಂಡಿತ್ತು. ಈ ಬಾರಿ ಭಾರತ ಟೀಂ ವಿಜಯಶಾಲಿಯಾಗಲಿ ಎಂದು ಕ್ರೀಡಾ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Narendra Modi: ಗಾಂಧಿ ಚರಕದಿಂದ ಖಾದಿ ನೂಲು ತೆಗೆದ ಪ್ರಧಾನಿ ಮೋದಿ

Published on: Aug 28, 2022 02:43 PM