ಮಲ್ಟಿಪ್ಲೆಕ್ಸ್ನಲ್ಲಿ ಇಂಡಿಯಾ-ಪಾಕ್ ಮ್ಯಾಚ್ ಪ್ರಸಾರ; ಅನ್ಯಾಯದ ವಿರುದ್ಧ ಗುಡುಗಿದ ಉಮೇಶ್ ಬಣಕಾರ್
ಕೆಲವು ಚಿತ್ರಮಂದಿರ, ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ತೆಗೆದು ಕ್ರಿಕೆಟ್ ಮ್ಯಾಚ್ ಪ್ರದರ್ಶನ ಮಾಡಲಾಗುತ್ತಿದೆ. ಇದರ ವಿರುದ್ಧ ಉಮೇಶ್ ಬಣಕಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನದ ಬದಲು ಕ್ರಿಕೆಟ್ ಮ್ಯಾಚ್ ತೋರಿಸಲು ಕೆಲವು ಮಲ್ಟಿಪ್ಲೆಕ್ಸ್ಗಳು (Multiplex) ಮುಂದಾಗಿವೆ. ಇದರಿಂದ ನಿರ್ಮಾಪಕರಿಗೆ ಮತ್ತು ವಿತರಕರಿಗೆ ಅನ್ಯಾಯ ಆಗುತ್ತದೆ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರು ಧ್ವನಿ ಎತ್ತಿದ್ದಾರೆ. ‘ವೀಕೆಂಡ್ನಲ್ಲಿ ಸಿನಿಮಾಗಳಿಗೆ ಹೆಚ್ಚಿನ ಜನರು ಬರುತ್ತಾರೆ. ಈ ಸಮಯದಲ್ಲಿ ಕ್ರಿಕೆಟ್ ಮ್ಯಾಚ್ (India Pakistan Match) ಪ್ರದರ್ಶನ ಮಾಡಿದರೆ ಸಿನಿಮಾಗೆ ನಷ್ಟ ಆಗುತ್ತದೆ. ಬೇರೆ ಕಂಟೆಂಟ್ ಪ್ರದರ್ಶನ ಮಾಡಲು ಇವರಿಗೆ ಅನುಮತಿ ಕೊಟ್ಟವರು ಯಾರು? ನಿರ್ಮಾಪಕರೆಲ್ಲರೂ ಸಭೆ ಸೇರುತ್ತೇವೆ. ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಉಮೇಶ್ ಬಣಕಾರ್ (Umesh Banakar) ಅವರು ಹೇಳಿದ್ದಾರೆ.
Latest Videos