ಮತ್ತೊಂದು ಕಂಪನಿಯನ್ನು ಕಳೆದುಕೊಂಡರ ಅನಿಲ್ ಅಂಬಾನಿ, ಅವರ ಒಡೆತನದ ಆರ್ ಎನ್ ಇ ಎಲ್ ಕಂಪನಿ ಉದ್ಯಮಿ ನಿಖಿಲ್ ಮರ್ಚೆಂಟ್ ತೆಕ್ಕೆಗೆ
ಹರಾಜು ಪ್ರಕ್ರಿಯೆಯ ಅವಹೇಳನಕಾರಿ ಸಂಗತಿಯೆಂದರೆ, ದುಬೈ ಮೂಲದ ಕಂಪನಿಯೊಂದು 100 ಕೋಟಿ ರೂ. ಮತ್ತು ಭಾರತದ ಜಿಂದಾಲ್ ಕಂಪನಿಯು 40 ಕೋಟಿ ರೂ. ಗಳಿಗೆ ಬಿಡ್ ಮಾಡಿದ್ದು.
ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರೆನಿಸಿಕೊಂಡಿರುವ ಅನಿಲ್ ಅಂಬಾನಿ ಮಾಡಿರುವ ಸಾಲಗಳನ್ನು ತೀರಿಸಲಾಗದೆ ತಮ್ಮ ಕಂಪನಿಗಳನ್ನು ಮಾರಿಕೊಳ್ಳುವ ಪ್ರಕ್ರಿಯೆಯನ್ನು ಜಾರಿಯಲ್ಲಿಟ್ಟಿದ್ದಾರೆ. ಅವರ ಒಡೆತನದ ರಿಲಯನ್ಸ್ ನವಲ್ ಇಂಜಿನೀಯರಿಂಗ್ ಲಿಮಿಟೆಡ್ (ಆರ್ ಎನ್ ಇ ಎಲ್) ಕಂಪನಿಯನ್ನು ಮಂಗಳವಾರ ನಡೆದ ಹರಾಜಿನಲ್ಲಿ ಮುಂಬಯಿ ಮೂಲದ ಉದ್ಯಮಿ ಮತ್ತು ಹೆಜೆಲ್ ಮರ್ಕಂಟೈಲ್ ಪ್ರೈವೇಟ್ ಲಿಮಿಟೆಡ್ ಸಮೂಹದ ಪಾಲದಾರರಲ್ಲಿ ಒಬ್ಬರಾಗಿರುವ ನಿಖಿಲ್ ಮರ್ಚೆಂಟ್ ರೂ. 2,700 ಕೋಟಿಗೆ ಖರೀದಿಸಿದ್ದಾರೆ. ಹರಾಜು ಪ್ರಕ್ರಿಯೆಯ ಮೂರನೇ ಸುತ್ತಿನಲ್ಲಿ ನಿಖಿಲ್ ಅತಿ ಹೆಚ್ಚು ಬಿಡ್ ಮಾಡಿದ್ದು ಗೊತ್ತಾಯಿತು.
ಕಂಪನಿಯನ್ನು ಹರಾಜಿಗಿಟ್ಟ ಕಮಿಟಿ ಆಫ್ ಕ್ರೆಡಿಟರ್ಸ್, ಹರಾಜಿನಲ್ಲಿ ಪಾಲ್ಗೊಂಡಿದ್ದ ಕಂಪನಿಗಳಿಗೆ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡುವಂತೆ ಕೋರಿತ್ತು. ಈ ಹಿನ್ನೆಲೆಯಲ್ಲೇ ಮೊದಲು ರೂ 2,400 ಕೋಟಿಗೆ ಬಿಡ್ ಮಾಡಿದ್ದ ಹೆಜೆಲ್ ಮರ್ಕಂಟೈಲ್ ಪ್ರೈವೇಟ್ ಲಿಮಿಟೆಡ್ ನಂತರ ಅದನ್ನು ರೂ 2,700 ಕೋಟಿಗೆ ಹೆಚ್ಚಿಸಿತು.
ಅಂದಹಾಗೆ, ಆರ್ ಎನ್ ಇ ಎಲ್ ಸಂಸ್ಥೆಯ ಮೇಲೆ ರೂ. 12,429 ಕೋಟಿ ಸಾಲವಿದೆ. ಇದಕ್ಕೆ ಅತಿಹೆಚ್ಚು ಸಾಲ ನೀಡಿದ ಬಾಂಕ್ಗಳ ಪೈಕಿ ಐಡಿಬಿಐ ಮುಂಚೂಯಲ್ಲಿದೆ. ಈ ಬ್ಯಾಂಕ್ ನೀಡಿರುವ ಸಾಲದ ಮೊತ್ತ ಎಷ್ಟು ಅನ್ನೋದು ಬೆಳಕಿಗೆ ಬಂದಿಲ್ಲ. ಆದರೆ, ಎಸ್ ಬಿ ಐ ರೂ. 1,965 ಕೋಟಿ ಮತ್ತು ಯೂನಿಯನ್ ಬ್ಯಾಂಕ್ ರೂ 1,555 ಕೋಟಿ ಸಾಲ ನೀಡಿವೆ.
ಹರಾಜು ಪ್ರಕ್ರಿಯೆಯ ಅವಹೇಳನಕಾರಿ ಸಂಗತಿಯೆಂದರೆ, ದುಬೈ ಮೂಲದ ಕಂಪನಿಯೊಂದು 100 ಕೋಟಿ ರೂ. ಮತ್ತು ಭಾರತದ ಜಿಂದಾಲ್ ಕಂಪನಿಯು 40 ಕೋಟಿ ರೂ. ಗಳಿಗೆ ಬಿಡ್ ಮಾಡಿದ್ದು.
ಪಿಪಾವಾವ್ ಶಿಪ್ಯಾರ್ಡ್ ಕಂಪನಿಯೆಂದೇ ಜಾಸ್ತಿ ಜನಪ್ರಿಯವಾಗಿದ್ದ ಆರ್ ಇ ಎನ್ ಎಲ್ ಕಂಪನಿಯನ್ನು ಅನಿಲ್ ಅಂಬಾನಿ 2015 ರಲ್ಲಿ ಖರೀದಿಸಿದ್ದರು.
ಕಂಪನಿಗಳ ಹರಾಜಿನ ಜೊತೆ ಅನಿಲ್ ಅವರು ಅಂಬಾನಿ ಮನೆತನದ ಮರ್ಯಾದೆಯನ್ನೂ ಹರಾಜು ಮಾಡುತ್ತಿದ್ದಾರೆಂದು ಉದ್ಯಮದಲ್ಲಿ ಜನ ಮಾತಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Viral Video: ಮದುವೆ ಮಂಟಪದಲ್ಲಿ ತಮಾಷೆ ಮಾಡಿದ ವರನ ಸ್ನೇಹಿತರಿಗೆ ಸರಿಯಾದ ಉತ್ತರ ಕೊಟ್ಟ ವಧು; ವಿಡಿಯೋ ನೋಡಿ